ಒತ್ತಡಮುಕ್ತ ಜೀವನಕ್ಕೆ ಕ್ರೀಡೆ ಸಹಕಾರಿ stress-free life 
ರಾಜ್ಯ

ಒತ್ತಡಮುಕ್ತ ಜೀವನಕ್ಕೆ ಕ್ರೀಡೆ ಸಹಕಾರಿ stress-free life

ಮುಳಬಾಗಿಲು: ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರೀಡೆಗಳು ಯುವಕರ ನಡುವೆ ಒಗ್ಗಟ್ಟಿನ ಸಾಮರಸ್ಯ ಬೆಳೆಸುತ್ತದೆ, ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ ಎಂದು ಯುಪಿಎಸ್ಸಿ ಎ.ಮಧು ಗೌಡ ಹೇಳಿದರು.stress-free life
ತಾಲೂಕಿನ ಗುಜ್ಜನಹಳ್ಳಿಯಲ್ಲಿ ಶನಿವಾರ ಪ್ರಾರಂಭವಾದ ವಾಲಿಬಾಲ್​ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ನಾವು ಪ್ರತಿದಿನ ಒತ್ತಡದಲ್ಲೆ ಕೆಲಸದಲ್ಲಿ ತೊಡಗಿಕೊಂಡಿರುತ್ತೇವೆ. ಒತ್ತಡದಿಂದ ಹೊರಬರುವ ನಿಟ್ಟಿನಲ್ಲಿ ಅಗಾಗ ಆಸಕ್ತ ಕ್ರೀಡೆಯಲ್ಲಿ ತೊಡಗಿಸಿಕೊಂಡು ಒತ್ತಡದಿಂದ ಹೊರಬರಬಹುದು. ರಜಾ ದಿನಗಳಲ್ಲಿ ಆಯೋಜಿಸುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲೆ ಅಡಗಿರುವ ಪ್ರತಿಭೆ ತೋರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪೊಲೀಸ್​ ವೃತ್ತ ನಿರೀಕ ಎಸ್​.ಆರ್​.ಜಗದೀಶ್​ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯದಲ್ಲಿ ಹೆಚ್ಚು ಲಾಭಗಳಿಸಬಹುದು. ಕ್ರೀಡೆಯಲ್ಲೆ ಭಾಗವಹಿಸಿ ಸಾಧನೆ ಮಾಡಿರುವುದಕ್ಕೆ ಸಾಕಷ್ಟು ಮಂದಿ ಸಾಯಾಗಿದ್ದಾರೆ. ಗೆಲುವು, ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.