ಬಲ್ಲಮಾವಟಿ ಗ್ರಾಮದಲ್ಲಿ ನಮೋ ಯುವಕ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಎರಡನೇ ವರ್ಷದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಎಡಿಕೇರಿ ಪ್ರಸನ್ನ ಉದ್ಘಾಟಿಸಿದರು. ಭೈರುಡ ವಸಂತ, ಚೋಕಿರ ಭಾಭಿ ಭೀಮಯ್ಯ, ಹರೀಶ್ ಕುಶಾಲಪ್ಪ ಇತರರಿದ್ದರು. 
ರಾಜ್ಯ

ಸಮಾಜ ಒಗ್ಗೂಡಲು ಕ್ರೀಡಾಕೂಟ ಉತ್ತಮ ವೇದಿಕೆ

ನಾಪೋಕ್ಲು: ಸಮಾಜದ ಮಂದಿ ಒಗ್ಗೂಡಲು ಕ್ರೀಡಾಕೂಟ ಒಂದು ಉತ್ತಮ ವೇದಿಕೆಯಾಗಿದೆ ಎಂದು ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಎಡಿಕೇರಿ ಪ್ರಸನ್ನ ಹೇಳಿದರು. ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ನಮೋ ಯುವಕ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಎರಡನೇ ವರ್ಷದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ -2026ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಯುವಕರು ಒಗ್ಗೂಡಿ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಜನರ ನಡುವಿನ ಸಾಮರಸ್ಯಕ್ಕೆ ಒಗ್ಗೂಡುವಿಕೆಗೆ ಸಹಕಾರಿಯಾಗುತ್ತದೆ ಎಂದರು.
ನಮೋ ಯುವಕ ಸಂಘದ ಅಧ್ಯಕ್ಷ ಭೈರುಡ ವಸಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಲ್ಲಮಾವಟಿ ಗ್ರಾ.ಪಂ.ಉಪಾಧ್ಯಕ್ಷ ಚೋಕಿರ ಬಾಭಿ ಭೀಮಯ್ಯ, ಮಾಜಿ ಅಧ್ಯಕ್ಷ ಮಣವಟ್ಟೀರ ಹರೀಶ್ ಕುಶಾಲಪ್ಪ, ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಹಿರಿಯರಾದ ಹೊಸೊಕ್ಲು ಮಾಚಯ್ಯ, ಮೊನ್ನಪ್ಪ, ಹಿಂದೂ ಸುರಕ್ಷಾ ಸಮಿತಿ ಸಹ ಸಂಚಾಲಕ ಬಿ.ಎಂ.ಪ್ರತೀಪ, ಬಲ್ಲಮಾವಟಿ ದವಸ ಭಂಡಾರದ ನಿರ್ದೇಶಕಿ ಬೊಟ್ಟೋಳಂಡ ಜಾನಕಿ, ಸಂಘದ ಕಾರ್ಯದರ್ಶಿ ಹೊಸೊಕ್ಲು ಶ್ರೀಕಾಂತ್, ಗೌರವ ಕಾರ್ಯದರ್ಶಿ ಚೀಯಂಡ ದಿನೇಶ್, ಖಜಾಂಚಿ ರೋಷನ್ ಇತರರಿದ್ದರು.