ಅರ್ಜನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2026-27ನೇ ಸಾಲಿನ ಚಡಚಣ ಶೈಕ್ಷಣಿಕ ವಲಯದ ಮತ್ತು ಲೋಣಿ (ಬಿ.ಕೆ) ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಸಣ್ಣಪ್ಪ ತಳವಾರ, ಎಚ್. ನಾಗೇಂದ್ರಪ್ಪ, ಸಿನಖೇಡ, ರತ್ನಾಕರ ತಳವಾರ, ಸುರೇಶ ನಾಯಕ ಇತರರಿದ್ದರು.
- ಕಾಂಗ್ರೆಸ್ ಎಸ್‌ಸಿ, ಎಸ್ ಟಿ ಉಪಾಧ್ಯಕ್ಷ ಸಣ್ಣಪ್ಪ ತಳವಾರ ಹೇಳಿಕೆ
- ಚಡಚಣ ಶೈಕ್ಷಣಿಕ ವಲಯ ಮತ್ತು ಲೋಣಿ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಉದ್ಘಾಟನೆ
ವಿದ್ಯಾರ್ಥಿಗಳು ಸದೃಢ ದೇಹ, ಶಾರೀರಿಕ ಬೆಳವಣಿಗೆಗೆ ಕ್ರೀಡೆ ಜೀವನದ ಒಂದು ಅಂಗವಾಗಿದ್ದು, ಒಳ್ಳೆಯ ಆರೋಗ್ಯಕ್ಕೆ ಮತ್ತು ಕ್ರೀಡೆಯ ಎಲ್ಲ ಚಟುವಟಿಕೆಗಳಲ್ಲಿ ಸೋಲು-ಗೆಲುವು ಎನ್ನದೇ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಎಸ್‌ಸಿ, ಎಸ್‌ಟಿ ಉಪಾಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು.
ಅರ್ಜನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2026-27ನೇ ಸಾಲಿನ ಶುಕ್ರವಾರ ಆಯೋಜಿಸಿದ್ದ ಚಡಚಣ ಶೈಕ್ಷಣಿಕ ವಲಯದ ಮತ್ತು ಲೋಣಿ (ಬಿ.ಕೆ) ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಯುವ ಜನಾಂಗವು ಮೊಬೈಲ್‌ಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಅದನ್ನು ಬಿಡಲು ಶಿಕ್ಷಕರು ತಿಳಿ ಹೇಳಿ ಯುವ ಪೀಳಿಗೆಯಲ್ಲಿ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಬೆಳೆಸಬೇಕು ಎಂದರು.
ಚಡಚಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಗೇಂದ್ರಪ್ಪ ಮಾತನಾಡಿ, ಕ್ರೀಡೆ ಎಲ್ಲಾ ಚಟುವಟಿಕೆಗಳು ಶಾರೀರಿಕ, ಸದೃಢಕ್ಕೆ ಒಂದು ರೀತಿಯ ಔಷಧ. ನಿತ್ಯ ಕೇವಲ ಒಂದು ಗಂಟೆ ಕ್ರೀಡೆ ಮತ್ತು ವ್ಯಾಯಾಮ ಮಾಡುವುದರಿಂದ ಒಳ್ಳೆಯ ಆರೋಗ್ಯ ಹಾಗೂ ಮನೋಲ್ಲಾಸ ಮತ್ತು ಶರೀರಕ್ಕೆ ಒಳ್ಳೆಯದು ಎಂದು ಹೇಳಿದರು.
ಚಡಚಣ ಬಿಇಒ ಕಾರ್ಯಾಲಯದ ಶಿಕ್ಷಣ ಸಂಯೋಜಕ ಸಿನಖೇಡ, ಭೂದಾನಿ ರತ್ನಾಕರ ತಳವಾರ, ಸುರೇಶ ನಾಯಕ, ಎಸ್ ಎಸ್. ಬೋರಗಿ, ಪ್ರಭು ಬಿರಾದಾರ, ಮುಖ್ಯ ಶಿಕ್ಷಕ ಡಿ.ಕೆ. ರಗಟಿ, ನಿರಂಜನ ಪೂಜಾರಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.