ಗುರುಮಠಕಲ್ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಹೋಬಳಿ ಮಟ್ಟದ ಕ್ರೀಡಾಜ್ಯೋತಿಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನೀರೆಟಿ ಸ್ವೀಕರಿಸಿ ಮಾತನಾಡಿದರು. ಮಲ್ಲಿಕಾರ್ಜುನ ಸಂಗ್ವಾರ, ಅನೀಲ ಕುಮಾರ, ಶಿಕ್ಷಣ ಸಂಯೋಜಕ ರವೀಂದ್ರ ಚವ್ಹಾಣ್, ಬಿಆರ್‌ಪಿ ಚಂದು ಜಾಧವ್, ಲಕ್ಷ್ಮೀಕಾಂತರೆಡ್ಡಿ, ನಾಗರೆಡ್ಡಿ ನಜರಾಪುರ ಇತರರಿದ್ದರು.
- ಅಧ್ಯಕ್ಷ ಸಂತೋಷಕುಮಾರ ನೀರೆಟಿ ಅಭಿಮತ
- ಗುರುಮಠಕಲ್‌ನಲ್ಲಿ ಕ್ರೀಡಾಕೂಟಕ್ಕೆ ಚಾಲನೆ
ಸದೃಢ ದೈಹಿಕ ಆರೋಗ್ಯಕ್ಕೆ ಕ್ರೀಡೆ ಅಗತ್ಯವಾಗಿದ್ದು, ಪ್ರತಿಯೊಬ್ಬ ಮಗುವೂ ಕೂಡ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನೀರೆಟಿ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಸ್ತುತ ಕ್ರೀಡಾ ಚಟುವಟಿಕೆಗಳು ತೀರಾ ಕಡಿಮೆಯಾಗಿದೆ. ಮಕ್ಕಳು ಆರೋಗ್ಯವಂತರಾಗಿರಲು ಕ್ರಿಡೆಗಳ ಅಗತ್ಯವಿದೆ. ಆದರೆ ಇಂದು ಮಕ್ಕಳಲ್ಲಿ ಮೊಬೈಲ್‌ನ ಗೀಳು ಹೆಚ್ಚಾಗಿದ್ದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಇದು ಪೂರಕವಲ್ಲ ಎಂದರು. ಪಾಠದ ಜತೆ ಜತೆಗೆ ಆಟವೂ ಮಕ್ಕಳಿಗೆ ಮುಖ್ಯವಾಗಿದೆ. ವೈಜÁ್ಞನಿಕವಾಗಿ ಸಾಕಷ್ಟು ಬೆಳೆದರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸಂಗ್ವಾರ ಮಾತನಾಡಿ, ಪರಸ್ಪರ ಸಹಬಾಳ್ವೆ, ನಾಯಕತ್ವ ಗುಣ, ಒಗ್ಗಟ್ಟಿನ ಗುಣ ಬೆಳೆಯಲು ಕ್ರೀಡೆ ಸಹಕಾರಿಯಾಗಿದೆ. ಸಾಮರಸ್ಯದಿಂದ ಕ್ರೀಡೆಯಲ್ಲಿ ಭಾಗವಹಿಸಲು ಪ್ರೇರೇಪಿಸಿ, ನ್ಯಾಯಯುತವಾಗಿ ಕ್ರೀಡೆ ನಡೆಸಲು ಸಲಹೆ ನೀಡಿದರು.
ಈ ವೇಳೆ ತಾಲೂಕು ದೈಹಿಕ ಶಿಕ್ಷಣಾಽಕಾರಿ ಅನೀಲ ಕುಮಾರ, ಶಿಕ್ಷಣ ಸಂಯೋಜಕ ರವೀಂದ್ರ ಚವ್ಹಾಣ್, ಬಿಆರ್‌ಪಿ ಚಂದು ಜಾಧವ್, ಲಕ್ಷ್ಮೀಕಾಂತರೆಡ್ಡಿ, ನಾಗರೆಡ್ಡಿ ನಜರಾಪುರ, ನಾರಾಯಣರೆಡ್ಡಿ, ಆಂಜನೇಯಲು, ಸಿಆರ್‌ಪಿ ಬಾಲಪ್ಪ ಸಿರಿಗೆಂ, ಚಂದ್ರಕಾAತ, ಶಿವರಡ್ಡಿ, ಅನೀಲ ದೋರನಳ್ಳಿ, ಹಣಮಾ ನಾಯಕ, ಮಹೇಶ ಗೌಡ, ನಾಗೇಶ, ವಿಜಯ ಕುಮಾರ, ವಿಜಯಲಕ್ಷ್ಮೀ, ದುರ್ಗಮ್ಮ, ಬಾಲರಾಜ ಇತರರಿದ್ದರು.