ಸಿರಿಗೇರಿಯಲ್ಲಿ ಆಯೋಜಿಸಿದ್ದ ಸಿರಿಗೇರಿ ಪ್ರಿಮಿಯರ್ ಲೀಗ್ 4ನೇ ಆವೃತ್ತಿಯ ವಿಜೇತರಾದ ಸಿರಿಗೇರಿ ಪೊಲೀಸ್ ತಂಡಕ್ಕೆ ಬಳ್ಳಾರಿಯ ಬುಡಾ ಮಾಜಿ ಅಧ್ಯಕ್ಷ ಪಿ.ಪಾಲಣ್ಣ ಬಹುಮಾನ ವಿತರಿಸಿದರು. ಪ್ರಮುಖರಾದ ಸೀನ ಅಡಿವೆಯ್ಯ ಸ್ವಾಮಿ, ಭಜಂತ್ರಿ ರಮೇಶ್, ಪಿಎಸ್‌ಐ ವೈ.ಶಶಿಧರ್, ಗುರುದೇವ, ವಕೀಲ ರಾಮಬಾಬು ಇತರರಿದ್ದರು. 
ರಾಜ್ಯ

ಪೊಲೀಸರ ಕೈ ವಶವಾದ ಎಸ್‌ಪಿಎಲ್ ಟ್ರೋಫಿ

ಸಿರಿಗೇರಿ: ಸಿರಿಗೇರಿ ಪ್ರಿಮಿಯರ್ ಲೀಗ್ (ಎಸ್‌ಪಿಎಲ್) 4ನೇ ಆವೃತ್ತಿಯ ಟ್ರೋಫಿ ಪೊಲೀಸ್ ತಂಡದ ವಶವಾಗಿದೆ. 
ಕಳೆದ 15 ದಿನಗಳಿಂದ ಎಂಟು ತಂಡಗಳ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಹಣಾಹಣಿ ಗ್ರಾಮದ ಸರ್ಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ನಡೆಯಿತು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮುದ್ದಟ್ಟನೂರು ದೋಸ್ತಿ ವಾರಿಯರ್ಸ್ ವಿರುದ್ಧ ಪೊಲೀಸ್ ತಂಡ ವಿಜಯ ಸಾಧಿಸಿತು.
 ವಿಜೇತ ತಂಡಕ್ಕೆ ಬಳ್ಳಾರಿಯ ಬುಡಾ ಮಾಜಿ ಅಧ್ಯಕ್ಷ ಪಿ.ಪಾಲಣ್ಣ ಬಹುಮಾನ ವಿತರಿಸಿ ಮಾತನಾಡಿ, ಪಂದ್ಯಾವಳಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ತಂಡಗಳು ಪಾಲ್ಗೊಂಡು ಕ್ರೀಡಾಭಿಮಾನ ಇಮ್ಮಡಿಯಾಗುವಂತೆ ಮಾಡಿವೆ.
ಯುವಜನತೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದರು.  
ಯುವ ಮುಖಂಡ ಅರೀಫ್ ಅವರು ಮೊದಲನೇ ಬಹುಮಾನ 21 ಸಾವಿರ ರೂ. ಮತ್ತು ಟ್ರೋಫಿ, ಮೆಡಲ್ಗಳು, ಬಿಚ್ಚುಗತ್ತಿ ಮಲ್ಲಯ್ಯ ಅವರು ದ್ವಿತೀಯ ಬಹುಮಾನ 11 ಸಾವಿರ ರೂ. ಟ್ರೋಫಿ, ಮೆಡಲ್ ಪ್ರಾಯೋಜಿಸಿದ್ದರು. ಪಂದ್ಯದ ಆಯೋಜಕ ಪಾಲಣ್ಣ,  ಟೈಗರ್ಸ್ ತಂಡದ ಚಾನಾಳ್ ರಾಘು, ಎನ್.ಶ್ರೀರಾಮ, ಲತೀಫ್, ಮೋಹನ್, ಹರೀಶ್, ರಿಜ್ಜು, ಗುರುದೇವ ಇತರರಿದ್ದರು.