ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕೇವಲ ಹಣದಿಂದಪ್ರತಿಯೊಂದನ್ನು ಅಳೆಯುವಂತಹಪರಿಸ್ಥಿತಿ ಸಮಾಜದಲ್ಲಿನಿರ್ಮಾಣವಾಗಿದೆ.ಅಂತಹ ಸಮಾಜದಶುದ್ಧೀಕರಣಕ್ಕೆ ಆಧ್ಯಾತ್ಮಅಗತ್ಯವಾಗಿವೆ ಎಂದು ಸಂಸದ ಹಾಗೂಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ಹೇಳಿದರು.
ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಶ್ರೀ ಜಗದ್ಗುರು ವಿಶ್ವಾರಾಧ್ಯಜನಕಲ್ಯಾಣ ಪ್ರತಿಷ್ಠಾನ ಆಯೋಜಿಸಿದ್ದಕಾಶೀ ಜಗದ್ಗುರುಗಳ ಇಷ್ಟಲಿಂಗಮಹಾಪೂಜೆ ಮತ್ತು ಶ್ರೀಸಿದ್ಧಾಂತಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನಸಮಾರಂಭವನ್ನು ಉದ್ಘಾಟಿಸಿಮಾತನಾಡಿದರು.
ಸಮಾಜದಲ್ಲಿಶಿಕ್ಷಣ ಕಲಿತವರ ಸಂಖ್ಯೆ ಹೆಚ್ಚಾಗಿದೆ.ಆದರೆ ಶಿಕ್ಷಣವಂತರಿಗಿಂತವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು.ವಿದ್ಯಾವಂತರೆಂದರೆ;ವಿವೇಕ,ವಿನಯ,ವಿವೇಚನೆಯುಳ್ಳಜನರ ಅಗತ್ಯವಿದೆ.ಅಂತಹವರ ಸಂಖ್ಯೆಯನ್ನುಹೆಚ್ಚಿಸಲು ಮಠ-ಪೀಠಗಳಧರ್ಮಗುರುಗಳ ಪಾತ್ರ ಪ್ರಮುಖವಾಗಿದೆ.ಇಂದು ಕಲಿತವರಿಂದಲೇಸಮಾಜದಲ್ಲಿ ಹೆಚ್ಚು ಹಾನಿಯಾಗುತ್ತಿದೆ.ಶಿಕ್ಷಣ ಸಂಸ್ಥೆಗಳುನಡೆಸುವ ಪರೀಕ್ಷೆಯಲ್ಲಿ ಎಲ್ಲರಿಗೂಒಂದೇ ರೀತಿಯ ಪ್ರಶ್ನೆಗಳಿರುತ್ತವೆ.ಆದರೆ ಜೀವನದಪರೀಕ್ಷೆಯಲ್ಲಿ ಪ್ರತಿಯೊಬ್ಬರಿಗೂಪ್ರತ್ಯೇಕ ಪ್ರಶ್ನೆಗಳು ಎದುರಾಗುತ್ತವೆ.ಇನ್ನೊಬ್ಬರನ್ನುನೋಡಿ ಕಾಪಿ ಮಾಡಿದರೆ ಜೀವನದಪರೀಕ್ಷೆಯಲ್ಲಿ ೇಲ್ ಆಗುತ್ತಾರೆ. ಹಿಂದೆಲ್ಲಾಮಂತ್ರದಿಂದ ಎಲ್ಲವನ್ನುಸಾಧಿಸುತ್ತಿದ್ದರು.ನಂತರದ ದಿನಗಳಲ್ಲಿತಂತ್ರಜ್ಞಾನದಿಂದ ಸಾಧಿಸುವಂತಾಯಿತು.ಇತ್ತೀಚೆಗೆಕೆಲವರು ಕುತಂತ್ರದಿಂದ ಸಾಧಿಸಲುಮುಂದಾಗಿದ್ದಾರೆ.ಶ್ರಮದ ಅನ್ನ,ಭಕ್ತಿಯ ಪೂಜೆ,ಶ್ರದ್ಧೆಯ ವಿದ್ಯೆಲ ಕೊಟ್ಟೇ ಕೊಡುತ್ತವೆ ಎಂದು ಡಾ.ಮಂಜುನಾಥ್ಮಾರ್ಮಿಕವಾಗಿ ನುಡಿದರು.
ಕಾಶೀಜಗದ್ಗುರು ಡಾ.ಮಲ್ಲಿಕಾರ್ಜುನವಿಶ್ವಾರಾಧ್ಯ ಶಿವಾಚಾರ್ಯಭಗವತ್ಪಾದರು ಸಾನ್ನಿಧ್ಯವಹಿಸಿದ್ದರು.ವಿಭೂತಿಪುರ ಮಠದಡಾ. ಮಹಾಂತಲಿಂಗಶಿವಾಚಾರ್ಯ ಸ್ವಾಮಿಗಳು,ವೀರಶೈವ ಲಿಂಗಾಯತಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷಬಿ.ಎಸ್.ಪರಮಶಿವಯ್ಯ,ಪ್ರತಿಷ್ಠಾನದಕಾರ್ಯದರ್ಶಿ ಡಾ.ಸಿ.ಯು.ಉಮಾದೇವಿಉಮಾಶಂಕರ್,ಸದಸ್ಯರಾದಕೆ.ಎಸ್.ಗಾಯತ್ರಿ,ಶಾಂತ ವಿ.ಗೌಡ್,ಸುನಂದ ಬಡ್ಡಿ,ಸಂಸ್ಕೃತವಿದ್ವಾಂಸರಾದ ಡಾ.ಸಿ.ಶಿವಕುಮಾರಸ್ವಾಮಿಮತ್ತಿತರರಿದ್ದರು.
ಶ್ರೀಸಿದ್ಧಾಂತ ಶಿಖಾಮಣಿಯು ಜೀವನದಲ್ಲಿ ಮುಂದೆ ಹೋಗಲು ಬಯಸುವವರಿಗೆ ಜಿಪಿಎಸ್ ಇದ್ದಂತೆ. ಅಜ್ಞಾನಕ್ಕೆ ಆಕರ್ಷಣೆ ಹೆಚ್ಚಿರುತ್ತದೆ. ಆದರೆ ತಾಮಸ ಗುಣವನ್ನು ನಿವಾರಿಸುವ ಶಕ್ತಿ ಆಧ್ಯಾತ್ಮದಲ್ಲಿದೆ. ಅಂತಹ ಶ್ರೇಷ್ಠ ಗ್ರಂಥ ಸಿದ್ಧಾಂತ ಶಿಖಾಮಣಿ
ಧನುರ್ಮಾಸದಅಂಗವಾಗಿ ಶುಕ್ರವಾರದಿಂದಸೋಮವಾರದವರೆಗೆ ಪ್ರತಿದಿನ ಬೆಳಗ್ಗೆ7 ಗಂಟೆಯಿಂದಕಾಶೀ ಜಗದ್ಗುರುಗಳ ಸಂಗೀತಯುಕ್ತಇಷ್ಟಲಿಂಗ ಮಹಾಪೂಜೆ ನೆರವೇರಲಿದೆ. ಸಂಜೆ 6ಗಂಟೆಗೆ ಆಧ್ಯಾತ್ಮಿಕಪ್ರವಚನ ಸಮಾರಂಭ ನಡೆಯಲಿದೆ.