ವಿಜಯಪುರದ ವೆಂಕಟಗಿರಿಕೋಟೆಯಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನದಲ್ಲಿ ಭಾಗವಹಿಸಿದ್ದ ಸಚಿವ ಕೆ.ಎಚ್​.ಮುನಿಯಪ್ಪ ಹಾಗೂ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ಅವರನ್ನು ಸನ್ಮಾನಿಸಲಾಯಿತು. 
ರಾಜ್ಯ

ಆಧ್ಯಾತ್ಮಿಕತೆಯಿಂದ ಮನಸ್ಸಿಗೆ ನೆಮ್ಮದಿ / VIJAYAPUR

ವಿಜಯಪುರ :

ಹೋಬಳಿ ವೆಂಕಟಗಿರಿಕೋಟೆಯಲ್ಲಿ "ರಾಧಾಸ್ವಾಮಿ ಸತ್ಸಂಗ್​ ಬಿಯಾಸ್​' ಸಂಸ್ಥೆಯಿಂದ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಎಚ್​.ಮುನಿಯಪ್ಪ ಹಾಗೂ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ ಭೇಟಿ ನೀಡಿದರು.

ಸಚಿವ ಕೆ.ಎಚ್​.ಮುನಿಯಪ್ಪ ಮಾತನಾಡಿ, ರಾಧಾಸ್ವಾಮಿ ಸತ್ಸಂಗ್​ ಬಿಯಾಸ್​ ಸಂಸ್ಥೆ ನೂರು ವರ್ಷಗಳಿಂದ ಜಾತಿ, ಧರ್ಮ ಮೀರಿ ಮಾನವೀಯತೆ ಸಂದೇಶ ಸಾರುತ್ತಿದೆ. ಇಂತಹ ಸತ್ಸಂಗಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ನೈತಿಕ ಮೌಲ್ಯ ಬೆಳೆಸುತ್ತವೆ. ಆಧ್ಯಾತ್ಮಿಕತೆಯಿಂದ ಮಾತ್ರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ಮಾತನಾಡಿ, ಬಿಯಾಸ್​ ಕೇಂದ್ರದಿಂದ ಹೊರಹೊಮ್ಮುತ್ತಿರುವ ಆಧ್ಯಾತ್ಮಿಕ ಚಳವಳಿ ದೇಶದ ಏಕತೆಗೆ ಮಾದರಿ. ಯಾವುದೇ ಭೇದಭಾವವಿಲ್ಲದ್ದೆ ಎಲ್ಲರೂ ಒಂದೇ ಪಂಗಡದಲ್ಲಿ ಕುಳಿತು ಪ್ರಾರ್ಥಿಸುವುದು ದೇಶದ ಜಾತ್ಯತಿತ ಪರಂಪರೆಯ ಪ್ರತಿಕ. ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ರಾಮಪ್ರಸಾದ್​, ಗ್ಯಾಸ್​ ಶ್ರೀನಿವಾಸ್​, ಜಗನ್ನಾಥ್​, ಗ್ರಾಪಂ ಮಾಜಿ ಅಧ್ಯಕ್ಷ ಆರ್​.ಅಮರನಾಥ್​, ಹುರುಳುಗುರ್ಕಿ ಸಜ್ಜದ್​, ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.