ಬೀದರ್​ನ ರಾಮನಗರ ಕಾನಿಯಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಶ್ರೀ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು ಮಹಾನಗರ ಪಾಲಿಕೆಯ ವಲಯ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು. ರೇಖಾ ಹುಚ್ಚೆ, ಹಣಮಂತ ಬರೂರೆ ಇತರರಿದ್ದರು. 
ರಾಜ್ಯ

ರಸ್ತೆ, ಚರಂಡಿ ಕಾಮಗಾರಿ ತ್ವರಿತ ಪೂರ್ಣಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ರಾಮನಗರ ನಿವಾಸಿಗಳಿಂದ ವಲಯ ಆಯುಕ್ತರಿಗೆ ಮನವಿ
ಬೀದರ್​: ನಗರದ ರಾಮನಗರ ಕಾಲನಿಯ ಕ್ರಾಸ್​ ಸಂಖ್ಯೆ 9ರಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಲನಿಯ ನಿವಾಸಿಗಳು ಆಗ್ರಹಿಸಿದರು.
ನಗರದಲ್ಲಿ ಗುರುವಾರ ಮಹಾನಗರ ಪಾಲಿಕೆಯ ವಲಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಕೆಲ ವ್ಯಕ್ತಿಗಳು ವಿನಾಕಾರಣ ಮೂರು ತಿಂಗಳಿಂದ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕಾಮಗಾರಿಯಲ್ಲಿ ವಿಳಂಬ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ಅಪೂರ್ಣ ಕಾಮಗಾರಿಯಿಂದಾಗಿ ಮನೆಗಳ ಹೊಲಸು ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ, ಖಾಲಿ ಸ್ಥಳಗಳಲ್ಲಿ ನಿಲ್ಲುತ್ತಿದ್ದು, ದುರ್ಗಂಧ ಹರಡುತ್ತಿದೆ. ಕೊಳವೆಬಾವಿ ನೀರಲ್ಲೂ ವಾಸನೆ ಬರುತ್ತಿದ್ದರಿಂದ ಕುಡಿಯಲು ಆಗುತ್ತಿಲ್ಲ. ಬದುಕು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.
ಮಹಾನಗರ ಪಾಲಿಕೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಬೇಕು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.
ನಿವಾಸಿಗಳಾದ ರೇಖಾ ಸಂತೋಷ್​ ಹುಚ್ಚೆ, ಹಣಮಂತ ಬರೂರೆ, ಸಂದೀಪಕುಮಾರ ೂಡೆ, ನಾಗಣ್ಣ ಧನ್ನೂರೆ, ಧನಲಕ್ಷಿ$್ಮ, ಶಾಮಲಾ ಬಿರಾದಾರ, ಸಂಜು ಅಲ್ಲೂರೆ, ಸೂರ್ಯಕಾಂತ ಎಂ., ರಾಜಶೇಖರ, ರಾಚಪ್ಪ ಬಿರಾದಾರ, ಶ್ರೀದೇವಿ ಗೋವಿಂದ, ಜಗನ್ನಾಥ ಬನ್ನಯ್ಯ, ಬಕ್ಕಪ್ಪ ರಾಜಗೀರಾ, ನಿಂಗಣ್ಣ ರಾಮನಗರ, ಮೊಗಲಪ್ಪ ಹಣಮಂತ, ಲಕ್ಷಿ$್ಮ ಮಚಕುರಿ, ಘಾಳಯ್ಯ ರಾಮನಗರ, ಅಶ್ವಿನಿ ಧಮೇರ್ಂದ್ರ ಮೇತ್ರೆ, ದತ್ತು ಮೇತ್ರೆ, ದತ್ತಾತ್ರೇಯ ಮೇತ್ರೆ, ಪ್ರವಿಣ್​ ಚಿದ್ರಿ, ತುಕಾರಾಮ ಗಾದಗಿ, ವಿಶ್ವನಾಥ ಮತ್ತಿತರರು ಇದ್ದರು.