ವರಮಹಾಲಕ್ಷಿ$್ಮ ಹಬ್ಬದ ಪ್ರಯುಕ್ತ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ನವಿಲುಗರಿ ಅಲಂಕಾರ ಮಾಡಿರುವುದು. 
ರಾಜ್ಯ

ಶ್ರೀ ಚೌಡೇಶ್ವರಿಗೆ ವಿಶೇಷ ಪೂಜೆ / DEVANAHALLI

ದೇವನಹಳ್ಳಿ: ಪಟ್ಟಣದ ಹಳೇ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿಗೆ ವರಮಹಾಲಕ್ಷಿ$್ಮ ಹಬ್ಬದ ಪ್ರಯುಕ್ತ ನವಿಲುಗರಿ ಅಲಂಕಾರ ಮಾಡಲಾಗಿತ್ತು. ಸಂಪ್ರದಾಯದಂತೆ ಕಂಕಣಧಾರಿಗಳಾದ ದೇವಾಂಗ ಜನಾಂಗದ ಭಕ್ತರು ಮೈಗೆ ಅರಿಶಿಣ ಬಳಿದುಕೊಂಡು ಸ್ತೋತ್ರಪಠಿಸುತ್ತ ಹಲಗೆ ಸೇವೆ ಮೂಲಕ ದೇಹದಂಡಿಸಿ ಹರಕೆ ತೀರಿಸಿದರು.

ಕಾರ್ಯಕ್ರಮದಲ್ಲಿ ದೇವಾಲಯದ ಟ್ರಸ್ಟಿ ಜಿಲ್ಲಾಧಿಕಾರಿ ಕಚೇರಿ ನಿವೃತ್ತ ತಹಸೀಲ್ದಾರ್​ ಪಿ.ಗಂಗಾಧರ್​, ನಿವೃತ್ತ ಮುಖ್ಯಾಧಿಕಾರಿ ಎ.ಎಚ್​.ನಾಗರಾಜ್​, ದೇವಾಲಯ ಸಮಿತಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್​, ಟ್ರಸ್ಟಿ ಎನ್​.ಮುನಿರಾಜ್​, ಲಯನ್ಸ್​ ಮಾಜಿ ಅಧ್ಯಕ್ಷರಾದ ವೈ.ಸಿ.ಕೃಪಾಕರ್​, ವಿಜಯಕುಮಾರ್​, ಹನುಮಂತಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್​, ಬಿಜೆಪಿ ಹಿರಿಯ ಮುಖಂಡರಾದ ದೇ.ಸೂ.ನಾಗರಾಜ್​, ಜಿ.ಪುಟ್ಟರಾಜ್​, ಪುರಸಭೆ ಮಾಜಿ ಸದಸ್ಯ ಪಿ.ಜಯರಾಮ್​, ಗಂಗಾಧರಪ್ಪ ಇತರರು ಇದ್ದರು.

ಕಳೆಗಟ್ಟಿದ ಹಬ್ಬದ ಸಂಭ್ರಮ :

ಕಳೆದ ವರ್ಷಕ್ಕಿಂತಲೂ ಬೆಲೆ ದುಪ್ಪಟ್ಟು ಏರಿಕೆಯಾಗಿದ್ದರೂ ತಲೆಕಡೆಸಿಕೊಳ್ಳದೇ ಪಟ್ಟಣದಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿತ್ತು. ಮನೆಮನೆಗಳಲ್ಲಿ ವರಮಹಾಲಕ್ಷಿ$್ಮಯನ್ನು ಪ್ರತಿಷ್ಠಾಪಿಸಿ ಅಕ್ಕಪಕ್ಕದ ಮನೆಯವರಿಗೆ ಬಾಗಿನ ಮತ್ತು ಸಿಹಿ ಹಂಚಿ ಸಂಭ್ರಮಿಸಿದರು.