ಕೆ.ಆರ್.ಸಾಗರ ಸಮೀಪದ ಹೊಸಸಾಯಪನಹಳ್ಳಿ ಬಳಿ ಇರುವ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ದೇವರಿಗೆ ಅರ್ಚಕ ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.  
ರಾಜ್ಯ

ಷಷ್ಠಿ ಪ್ರಯುಕ್ತ ಸುಬ್ರಮಣ್ಯ ದೇವರಿಗೆ ವಿಶೇಷ ಪೂಜೆ

ಕೆ.ಆರ್.ಸಾಗರ: ಹೊಸ ಸಾಯಪನಹಳ್ಳಿ ಬಳಿ ಇರುವ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಬುಧವಾರ ನಸುಕಿನಿಂದಲೇ ಭಕ್ತಾದಿಗಳು ಪೂಜೆ ಸಲ್ಲಿಸಿದರು.
ಷಷ್ಠಿ ಪ್ರಯುಕ್ತ ಶ್ರೀ ಸುಬ್ರಮಣ್ಯ ದೇವರ ಪ್ರತಿಮೆಗೆ ಅರ್ಚಕ ಶಶಿಕುಮಾರ್ ನೇತೃತ್ವದಲ್ಲಿ ವಿಶೇಷವಾಗಿ ಪಂಚಾಮೃತ ಅಭಿಷೇಕ ಹಾಗೂ ಎಣ್ಣೆ ಮಜ್ಜನ ಮಾಡಲಾಯಿತು, ನಂತರ ವಿವಿಧ ಹೂಗಳಿಂದ ದೇವರನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಸುತ್ತಮುತ್ತ ಗ್ರಾಮಗಳಿಂದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಸುಬ್ರಮಣ್ಯ ದೇವರಿಗೆ ಹೂ-ಹಣ್ಣು ಸಮೇತ ಪೂಜೆಯನ್ನು ಸಲ್ಲಿಸಿ ದೇವರ ದರ್ಶನ ಪಡೆದರು. ಜಾತ್ರೆ ಹಿನ್ನೆಲೆಯಲ್ಲಿ ದೇವಾಲಯದ ಎರಡೂ ಬದಿಗಳಲ್ಲಿ ಹೂ-ಹಣ್ಣಿನ ಅಂಗಡಿಗಳು, ಆಟ ಸಾಮಗ್ರಿಗಳ ಅಂಗಡಿ, ಕಡಲೆ ಪುರಿ ಅಂಗಡಿ ಸೇರಿದಂತೆ ವಿವಿಧ ರೀತಿಯ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದ ದೃಶ್ಯ ಕಂಡುಬಂತು. ವಿವಿಧ ಬಣ್ಣದ ದೀಪಗಳಿಂದ ದೇವಾಲಯ ಅಲಂಕೃತಗೊಂಡಿತ್ತು. ಷಷ್ಠಿ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ವಿಶೇಷ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.