ಜೂ.3ಕ್ಕೆ ಕುರುಡುಮಲೆ ಗಣಪತಿಗೆ ವಿಶೇಷ ಪೂಜೆ Kurudumale Ganapati 
ರಾಜ್ಯ

ಜೂ.3ಕ್ಕೆ ಕುರುಡುಮಲೆ ಗಣಪತಿಗೆ ವಿಶೇಷ ಪೂಜೆ Kurudumale Ganapati

ಮುಳಬಾಗಿಲು: ರಾಜ್ಯದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಕೆಪಿಸಿಸಿ ಅಧ್ಯಕ್ಷ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಜೂ.3 ರಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಅಂಗವಾಗಿ ಅಂದು ತಾಲೂಕಿನ ಕುರುಡುಮಲೆಯ ಪುರಾಣ ಪ್ರಸಿದ್ಧ ಶ್ರೀ ಗಣಪತಿ ದೇವಾಲಯ, ಮುಳಬಾಗಿಲಿನಿಂದ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್​ ಸೇವಾದಳ ಸಂಘಟನಾ ಕಾರ್ಯದರ್ಶಿ ಸಿ.ಎಂ.ವೆಂಕಟರಾಮೇಗೌಡ ಗಾಂಧಿ ತಿಳಿಸಿದರು. Kurudumale Ganapati
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ. ಶಿವಕುಮಾರ್​ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಉತ್ತಮ ಮಳೆ ಆಗುತ್ತಿರುವುದು ಶುಭ ಸಂಕೇತ ಎಂದರು.
ದುಗ್ಗಸಂದ್ರ ಕ್ಷೇತ್ರದ ಜಿಪಂ ಮಾಜಿ ಸದಸ್ಯ ಉತ್ತನೂರು ವಿ.ಎಸ್​.ಅರವಿಂದ್​ ಕುಮಾರ್​ ಮಾತನಾಡಿ, ರಾಜ್ಯ ಕಾಂಗ್ರೆಸ್​ ಸರ್ಕಾರದಲ್ಲಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿರುವ ಕೆ.ಎಚ್​.ಮುನಿಯಪ್ಪ ಅವರನ್ನು ಪರಿಶಿಷ್ಟ ಕೋಟದಲ್ಲಿ ಉಪಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಲು ಮತ್ತು ಜಿಲ್ಲೆಯ ನಾಲ್ವರು ಕಾಂಗ್ರೆಸ್​ ಶಾಸಕರಲ್ಲಿ ಒಬ್ಬರನ್ನು ಮಂತ್ರಿ ಮಾಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಲು ಮುಳಬಾಗಿಲು ಕಾಂಗ್ರೆಸ್​ ಮುಖಂಡರ ನಿಯೋಗ ಹೋಗಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್​ ಮೀನುಗಾರರ ಘಟಕದ ಅಧ್ಯಕ್ಷ ಪಾಲೂರಹಳ್ಳಿ ರಂಗನಾಥ್​, ಟಿಎಪಿಸಿಎಂಎಸ್​ ನಿರ್ದೇಶಕರಾದ ದೇವರಾಯಸಮುದ್ರ ವಿ. ರಾಜಪ್ಪ, ಕಗ್ಗಿನಹಳ್ಳಿ ಶ್ರೀನಿವಾಸ್​, ಕಾಂಗ್ರೆಸ್​ ಮುಖಂಡರಾದ ತೊರಡಿ ಶಿವಣ್ಣ, ಸಿ.ಆರ್​.ಪಿ. ವೆಂಕಟೇಶ್​, ಚಲ್ಲಪ್ಪಲ್ಲಿ ಕೃಷ್ಣಾರೆಡ್ಡಿ, ವಕೀಲ ಆರ್​.ದಶರಥ, ತಾಲೂಕು ಮಾದಿಗ ದಂಡೋರ ಅಧ್ಯಕ್ಷ ಮುನಿಗಂಗಯ್ಯ, ಆಂಜಪ್ಪ, ಸುರೇಶ್​ ಮತ್ತಿತರರ ಇದ್ದರು.