Special worship in the presence of devotees 
ರಾಜ್ಯ

ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ

ಮಧುಗಿರಿ: ಪಟ್ಟಣದ ಟೌನ್​ ಹಾಲ್​ ರಸ್ತೆಯಲ್ಲಿರುವ ಮಹಿಳಾ ಸಮಾಜದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಸಮಾಜದ ಸಭಾಂಗಣದಲ್ಲಿ ಅಧಿಕ ಮಾಸದ 33 ದೇವರ ಪೂಜಾ ಕಾರ್ಯಕ್ರಮ ಮಂಗಳವಾರ ಆಯೋಜಿಸಲಾಗಿತ್ತು.
ಜೈ ಭುವನೇಶ್ವರಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಸಾರ್ವಜನಿಕರ ಮತ್ತು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಬೆಳಗ್ಗೆ 10.30ಕ್ಕೆ ಮಂಗಳಕರವಾಗಿ 'ಕನ್ನಿಕೆ ಪೂಜೆ' ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ 33 ದೇವರ ಪೂಜೆ' ಭಕ್ತಿಭಾವದಿಂದ ಪ್ರಾರಂಭವಾಯಿತು. ಈ ವೇಳೆ ದೇವರಿಗೆ ವಿಶೇಷ ಪೂಜೆ, ಸುಮಧುರ ಭಜನೆ,33 ಹೂಗಳ ಅರ್ಪಣೆ, ನೈವೇದ್ಯ ಸಮರ್ಪಿಸಿ ನಾಡಿನಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಲಾಯಿತು.
ಮಹಿಳಾ ಸಮಾಜದ ಅಧ್ಯಕ್ಷೆ ಸಹನಾ ನಾಗೇಶ್​, ಪುಷ್ಪವತಮ್ಮ, ನಂಜಮ್ಮ ಸಿದ್ದಪ್ಪ, ಲಲಿತಾ, ವಿಜಯ ಆಶಾ, ವೀಣಾ, ಅನುರಾಧಾ, ಸುಧಾ, ಭಾಗ್ಯಮ್ಮ, ಸ್ಮಿತಾ, ಗಾಯತ್ರಿ, ಮಾಧುರಿ, ವೀಣಾ ಶ್ರೀನಿವಾಸ್​ ಮತ್ತು ಎಲ್ಲ ಸದಸ್ಯರು ಇದ್ದರು.