ಹೆರಿಗೆಯ ನಂತರದ ಅತಿಯಾದ ರಕ್ತಸ್ರಾವದಿಂದ (ಪಿಪಿಎಚ್) ಸಂಭವಿಸುವ ತಾಯಂದಿರ ಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಕೆಒಜಿಎಸ್ ವತಿಯಿಂದ ಬಸವಕಲ್ಯಾಣದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಆಯೋಜಿಇದ್ದ ಅಂತಾರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಕೇರಳ ಪ್ರಸಿದ್ಧ ತ ವೈದ್ಯ ಡಾ.ಸಮರ್ಥ್ ರಾಮ್ ತರಬೇತಿ ನೀಡಿದರು. ಡಾ.ಶಾಂತಾ ದುರ್ಗೆ ಹಾಗೂ ಸಿ ರೋಗ ತರು ಇದ್ದರು.
ಬಸವಕಲ್ಯಾಣ: ಹೆರಿಗೆಯ ನಂತರದ ಅತಿಯಾದ ರಕ್ತಸ್ರಾವದಿಂದ (ಪಿಪಿಎಚ್) ಸಂಭವಿಸುವ ತಾಯಂದಿರ ಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಸವಕಲ್ಯಾಣ ಪ್ರಸೂತಿ ಮತ್ತು ಸಿರೋಗ ತರ ಸಂ(ಬಿಕೆಒಜಿಎಸ್)ದಿಂದ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಅಂತಾರಾಜ್ಯ ಮಟ್ಟದ ಸಿ ರೋಗ ತರಿಗಾಗಿ ಈ ವಿಶೇಷ ತರಬೇತಿ ಕಾರ್ಯಾಗಾರ ಹಾಗೂ ಪ್ರಾತ್ಯಕೆ ಆಯೋಜಿಸಲಾಗಿತ್ತು. ಹೆರಿಗೆಯ ನಂತರದ ರಕ್ತಸ್ರಾವವು ನಿಯಂತ್ರಿಸಲು "ನೆಗೆಟಿವ್ ಇಂಟ್ರಾಯುಟರೈನ್ ಪ್ರೆಶರ್ ಮತ್ತು ಎಸ್ಆರ್ ಕ್ಯಾನ್ಯುಲಾಗಳ ಪರಿಣಾಮಕಾರಿ ಪಾತ್ರದ ಕುರಿತು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಕೇರಳ ಪ್ರಸಿದ್ಧ ತ ವೈದ್ಯ ಡಾ. ಸಮರ್ಥ್ ರಾಮ್ ಮಾರ್ಗದರ್ಶನ ನೀಡಿ ನೇರ ಪ್ರಾತ್ಯಕೆ ಹಾಗೂ ತರಬೇತಿ ನೀಡಿದರು. ಬಿಕೆಒಜಿಎಸ್ ಅಧ್ಯೆ ಡಾ. ಶಾಂತಾ ದುರ್ಗೆ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಯುವರಾಜ್ ಬಿರಾದಾರ ಹಾಗೂ ಎಸ್ಎಸ್ಕೆಬಿ ಕಾಲೇಜಿನ ನಿರ್ದೇಶಕ ಡಾ.ಬಸವರಾಜ ಎವಲೆ ಅಗತ್ಯ ಸಹಕಾರ ನಿಡಿದರು. ಬಿಕೆಒಜಿಎಸ್ ಕಾರ್ಯದರ್ಶಿ ಡಾ. ಪ್ರಿಯಾಂಕಾ ವರವಟ್ಟೆ, ಜಂಟಿ ಕಾರ್ಯದರ್ಶಿ ಡಾ. ಐಶ್ವರ್ಯಾ ದುರ್ಗೆ, ಕೋಶಾಧ್ಯೆ ಡಾ.ದೀಪಾ ಹೊಳಕುಂದೆ, ಸಲಹೆಗಾರ ಡಾ.ಸುಶೀಲಾ ಹೊಳಕುಂದೆ, ಸದಸ್ಯರಾದ ಡಾ.ಜ್ಯೋಲ್ಮ ಹಂಚಾಟೆ, ಡಾ.ಪ್ರಿಯಾಂಕಾ ಮಂಠಾಳೆ, ಡಾ.ಬಬಿತಾ ಬಿರಾದಾರ, ಡಾ.ಜಯಶ್ರೀ ಕಡಾಳೆ, ಡಾ.ಕ್ಷಮಾ ಭುರಳೆ ಇತರರಿದ್ದರು.
"
ತಾಯಂದಿರ ಮರಣ ಪ್ರಮಾಣ(ಎಂಎಂಆರ್) ರಾಜ್ಯಕ್ಕೆ ಹೋಲಿಸಿದರೆ ಬೀದರ್ ಜಿಲ್ಲೆಯಲ್ಲಿ ಹೆಚ್ಚಿದ್ದು, ರಾಜ್ಯದ ಸರಾಸರಿ ತಾಯಂದಿರ ಮರಣ ಪ್ರಮಾಣ ಪ್ರತಿ ಲಕ್ಷ ಹೆರಿಗೆಗೆ 58 ರಿಂದ 64 ಇದ್ದರೆ, ಬೀದರ್ ಜಿಲ್ಲೆಯ ಈ ಪ್ರಮಾಣ ಸುಮಾರು 133 ರಷ್ಟಿದೆ. ಇದು ನಮ್ಮ ಆರೋಗ್ಯ ವ್ಯವಸ್ಥೆಯ ಮೇಲಿರುವ ದೊಡ್ಡ ಸವಾಲಾಗಿದೆ. ಈ ತಾಯಂದಿರ ಮರಣ ಪ್ರಮಾಣವನ್ನು ಸಂಪೂರ್ಣವಾಗಿ ನಿಮೂರ್ಲನೆ ಈ ಕಾರ್ಯಾಗಾರದ ಆಶಯವಾಗಿದೆ.
— > ಡಾ.ಶಾಂತಾ ದುರ್ಗೆ ಬಿಕೆಒಜಿಎಸ್ ಅಧ್ಯೆ