ಕೆಂಭಾವಿ: ಕೂಡಲಗಿ ಗ್ರಾಮದ ಶಾಂತಾನಂದ ಸರಸ್ವತಿ ಸ್ವಾಮಿಗಳ ಮಠದಲ್ಲಿ ಶಂಕರಾಚಾರ್ಯ ಮಹಾ ಸಂಸ್ಥಾನ ದಣಾಯನ ಶಾರದಾ ಪೀಠ ಶೃಂಗೇರಿಯಿಂದ ಬಾಲ ಭಾರತಿ ಶೃಂಗೇರಿ ಅವರು ಆಯೋಜಿಸುತ್ತಿರುವ ಸಂಸ್ಕಾರ ಸುಧಾ ಧಾರ್ಮಿಕದ ವಿಶೇಷ ಶಿಬಿರ ಮೇ 1ರಿಂದ 14ರವರೆಗೆ ನಡೆಯಲಿದೆ ಎಂದು ಪೀಠಾದಿಪತಿ ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜರು ತಿಳಿಸಿದ್ದಾರೆ. ಈ ಶಿಬಿರದ ಮೂಲಕ ಮಕ್ಕಳು ಭವಿಷ್ಯದಲ್ಲಿ ಜ್ಞಾನ ಮತ್ತು ಸಂಸ್ಕಾರದ ಸಮತೋಲನ ಹೊಂದಿದ ವ್ಯಕ್ತಿಗಳಾಗಿ ರೂಪಗೊಳ್ಳುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಆಧುನಿಕತೆಯ ಜತೆಗೆ ಧಾರ್ಮಿಕ ಮೌಲ್ಯ, ನೈತಿಕತೆ, ಸಂಸ್ಕಾರ, ಭಕ್ತಿ, ನಿಷ್ಠೆ ಜತೆಗೆ ಸಂಸತ ಭಾಷೆಯ ಮೂಲಭೂತ ಪರಿಚಯ ಸೇರಿ ಹಲವು ಕಾರ್ಯಗಳು ಈ ಶಿಬಿರದಲ್ಲಿ ವಿಶ್ವಂಬರ ಜೋಷಿ ನೇತೃತ್ವದಲ್ಲಿ ನಡೆಯಲಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸನಾತನ ಧರ್ಮ ರಕ್ಷಣೆಗೆ ಮುಂದಾಗುವಂತೆ ಶ್ರೀಗಳು ಕೋರಿದ್ದಾರೆ.