ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಕುಮಾರ ಷಷ್ಠಿಯಂದು ಮಹಿಳೆಯರು ಮತ್ತು ಪುರುಷರು ನಾಗರಕಲ್ಲುಗಳಿಗೆ ಹಾಲೆರೆದರು.
ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಕುಮಾರ ಷಷ್ಠಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ ಸಲ್ಲಿಸಲಾಯಿತು. ಕುಮಾರ ಷಷ್ಟಿ ಪ್ರಯುಕ್ತ ಶುಕ್ರವಾರ ರಾತ್ರಿ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿತ್ತು.
ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದಲ್ಲಿರುವ ಮಾಕಳಿ ಬೆಟ್ಟ, ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಅಣೆಕಟ್ಟು ಪ್ರವಾಸಿಗರಿಗೆ ಆಕರ್ಷಣಿಯವಾಗಿದ್ದು, ಕುಮಾರಧಾರ ಪುಷ್ಕರಣಿ, ಬನ್ನಿಮಂಟ, ಧರ್ಮಛತ್ರಗಳು, ಬಂಡಿಹಳ್ಳಿ ಮುಂತಾದವು ಪ್ರೇಕ್ಷಕರ ಗಮನ ಸೆಳೆಯುತ್ತವೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿನ ಸುಬ್ರಹ್ಮಣ್ಯಸ್ವಾಮಿ ಹಾಗೂ ನರಸಿಂಹಸ್ವಾಮಿ ಮೂರ್ತಿಗಳು, ದೇವಾಲಯದ ರಾಜಗೋಪುರ, ವಿಮಾನಗೋಪುರ, ನಾಗರಕಟ್ಟೆಗಳು, ಪುಷ್ಕರಣಿಗಳು ಗಮನ ಸೆಳೆಯುತ್ತವೆ.
ಇಲ್ಲಿನ ಅಶ್ವತ್ ಕಟ್ಟೆಯ ಮೇಲಿನ ನಾಗಕಲ್ಲುಗಳಿಗೆ ಪೂಜೆ ಸಲ್ಲಿಸುವುದರಿಂದ ಮದುವೆಯಾಗದವರಿಗೆ ಮದುವೆಯಾಗುವ ಜತೆಗೆ ನಾಗದೋಷ ಇದ್ದರೇ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಕುಮಾರ ಷಷ್ಠಿಯಂದು ನಾಗರ ಕಲ್ಲುಗಳಿಗೆ ಮಹಿಳೆಯರು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.