ಪ್ರಧಾನಿ ನರೇಂದ್ರ ಮೋದಿ ಅವರ 76 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶಾಸಕ ಎಚ್.ಕೆ.ಸುರೇಶ್, ಕೋಟೆ ಶ್ರೀನಿವಾಸ್, ರಮೇಶ್ ಸುವರ್ಣ, ತೆಂಡೇಕೆರೆ ರಮೇಶ್ ಇತರರು ಇದ್ದರು.
ಬೇಲೂರು: ಪ್ರಧಾನಿ ನರೇಂದ್ರ ಮೋದಿಯವರ 76ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಶಾಸಕ ಎಚ್.ಕೆ.ಸುರೇಶ್ ಹಾಗೂ ಬಿಜೆಪಿ ಮುಖಂಡರು ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿಯವರಿಗೆ ಉತ್ತಮ ಆರೋಗ್ಯ ಹಾಗೂ ಆಡಳಿತ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಈ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ಸಂಜು ಕೌರಿ ಮಾತನಾಡಿ, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ನಿಮಿತ್ತ ಶಾಸಕರ ನೇತೃತ್ವದಲ್ಲಿ ನಮ್ಮ ಪಕ್ಷದ ಮುಖಂಡರೊಂದಿಗೆ ಪ್ರಧಾನಿ ಅವರಿಗೆ ದೇವರು ಹೆಚ್ಚಿನ ಆರೋಗ್ಯ ಮತ್ತು ಶಕ್ತಿ ದಯಪಾಲಿಸುವಂತೆ ಪ್ರಾರ್ಥಿಸಿದ್ದೇವೆ. ಅದೇ ರೀತಿ ಸಂಜೆ ಆಶೀರ್ವಾದ ದೀಪ ಎಂಬ ವಿಶೇಷ ಕಾರ್ಯಕ್ರಮದಡಿ ಪ್ರತಿ ಹಳ್ಳಿಯಲ್ಲೂ ನಮ್ಮ ಕಾರ್ಯಕರ್ತರು ಸಂಜೆ 6ರಿಂದ 7 ಗಂಟೆಯವರೆಗೆ ದೀಪ ಬೆಳಗಿಸಿ ಮೋದಿಯವರಿಗೆ ದೇವರಲ್ಲಿ ಪ್ರಾರ್ಥಿಸಿದ್ದಾರೆ ಎಂದರು.
ಶಾಸಕ ಎಚ್.ಕೆ.ಸುರೇಶ್, ಬಿಜೆಪಿ ಮುಖಂಡರಾದ ಕೋಟೆ ಶ್ರೀನಿವಾಸ್, ರಮೇಶ್ ಸುವರ್ಣ, ತೆಂಡೇಕೆರೆ ರಮೇಶ್, ರಂಗನಾಥ್, ಮೋಹನ್, ರಾಘವೇಂದ್ರ ಇತರರು ಇದ್ದರು.