Special investigation 
ರಾಜ್ಯ

ಜಾರಕಿಹೊಳಿ ವಿದೇಶಿ ಹೂಡಿಕೆ ವಿಶೇಷ ತನಿಖೆ

ಪ್ರಮುಖ ಮುಖ್ಯಾಂಶಗಳು

  • ಹವಾಲಾ ಮೂಲಕ ಕೋಟ್ಯಂತರ ರೂ. ವಿದೇಶಕ್ಕೆ
  • ಏಜೆಂಟರ್‌ಗಳ ಮೂಲಕ ವಿದೇಶಕ್ಕೆ ಹಣ ವರ್ಗಾವಣೆ
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಾಮ್ರಾಜ್ಯದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ದಾಳಿ ವೇಳೆ ವಿದೇಶಿ ಹೂಡಿಕೆ ಸೇರಿ ವಿವಿಧ ಕಡೆ 3.30 ಕೋಟಿ ನಗದು ಪತ್ತೆಯಾಗಿರುವ ಬೆನ್ನಲ್ಲೇ ದೆಹಲಿ ಕೇಂದ್ರ ಕಚೇರಿಯ ನಿರ್ದೇಶಕ ರಾಹುಲ್ ನವೀನ್ ಖುದ್ದು ಬೆಂಗಳೂರಿಗೆ ಆಗಮಿಸಿ ಕರ್ನಾಟಕದಲ್ಲಿ ನಡೆದಿರುವ ಇಡಿ ಪ್ರಕರಣಗಳ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು ವಲಯ ಕಚೇರಿಗೆ ಭೇಟಿ ನೀಡಲಿರುವ ರಾಹುಲ್ ನವೀನ್, ಸೆ.9 ಮತ್ತು 10 ರಂದು ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಸ್ಥರು, ಸಂಬಂಧಿಕರ ಮನೆ, ಕಚೇರಿ ಸೇರಿ ಒಟ್ಟು 21 ಕಡೆ ದಾಳಿ ನಡೆಸಿದ ವೇಳೆ ಅಪಾರ ಪ್ರಮಾಣದ ದಾಖಲೆ ಪತ್ರಗಳು, ವಿದೇಶಿ ಹೂಡಿಕೆ, ವಿದೇಶಿ ಕರೆನ್ಸಿ ಸೇರಿ ಲೋಕೋಪಯೋಗಿ ಇಲಾಖೆ ಟೆಂಡರ್ ಕಾಮಗಾರಿ ವೇಳೆ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲಿದ್ದಾರೆ.
ಗೋಕಾಕ್ ಮತ್ತು ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ದೊರತೆ ಕೋಟ್ಯಂತ ರೂ. 15 ಲಕ್ಷ ವಿದೇಶಿ ಕರೆನ್ಸಿ ಕುರಿತು ಕೇಂದ್ರ ಕಚೇರಿಗೆ ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಣದ ಮೂಲ ಹಾಗೂ ವಿದೇಶಿ ಹೂಡಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಆಫ್ರಿಕಾದಲ್ಲಿ ಸತೀಶ್ ಜಾರಕಿಹೊಳಿ, ಅವರ ಪುತ್ರ ರಾಹುಲ್, ಸಹೋದರ ಬಾಲಚಂದ್ರ ಜಾರಕಿಹೊಳಿ ಹೆಸರಿನಲ್ಲಿ ಹೂಡಿಕೆ ಬಗ್ಗೆ ದಾಖಲೆ ಪತ್ತೆ ಮಾಡಿರುವ ಇಡಿ, ವಿದೇಶಿ ವಿನಿಯಮ ನರ್ವಹಣಾ ಕಾಯ್ದೆ-1999 (ಎ್ಇಎಂಎ) ತನಿಖೆ ನಡೆಸಲಿದೆ. ಎ್ಇಎಂಎ ಕಾಯ್ದೆ ಉಲ್ಲಂಸಿ ಜಾರಕಿಹೊಳಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಇಡಿ ಶೀಘ್ರದಲ್ಲೆ ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಸ್ಥರು, ಸಂಬಂಧಿಕರಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಈ ಕುರಿತು ಇಡಿ ಪೂರ್ವ ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಕ್ಕೆ ಹಣ, ಹವಾಲಾ ದಂಧೆ?
ವಿದೇಶದಲ್ಲಿ ಮೈನಿಂಗ್, ಚಿನ್ನದ ಗಣಿಗಾರಿಕೆಯಲ್ಲಿ ಪಾಲು ಹೊಂದಿರುವ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಜಾರಕಿಹೊಳಿ ಹವಾಲಾ ಮೂಲಕ ಭಾರಿ ಪ್ರಮಾಣದ ಹಣ ಆಫ್ರಿಕಾಕ್ಕೆ ಸಾಗಣೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ವಿವಿಧ ಬ್ಯಾಂಕ್‌ಗಳ ಮೂಲಕ ಅಕ್ರಮವಾಗಿ ನೂರಾರು ಕೋಟಿ ರೂ.ವರ್ಗಾವಣೆ ಮಾಡಿರುವ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಇಸಿಐಆರ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಇಡಿ ಮುಂದಾಗಿದೆ. ಸಾವಿರಾರು ಕೋಟಿ ರೂ. ವಿದೇಶಿ ಏಜೆಂಟರ್‌ಗಳ ಮೂಲಕ ಕಳುಹಿಸಿರುವ ಆರೋಪ ಸತೀಶ್ ಜಾರಕಿಹೊಳಿ ಮೇಲಿದೆ ಎನ್ನಲಾಗಿದೆ.
ಬಿವಿಇಪಿಎಲ್ ಕಂಪನಿಗೆ ಟೆಂಡರ್?
ಸಚಿವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಬಯಲಿಗೆಳೆದಿರುವ ಇಡಿ, ರಾಜ್ಯದ ವಿವಿಧ ಹೆದ್ದಾರಿ, ಬೃಹತ್ ಯೋಜನೆಗಳು ಹಾಗೂ ಸಾವಿರಾರು ಕೋಟಿ ಮೌಲ್ಯದ ಕಾಮಗಾರಿಗಳ ಟೆಂಡರ್‌ನ್ನು ‘ಭಾರತ್ ವಾಣಿಜ್ಯ ಈಸ್ಟರ್ನ್ ಪೈ.ಲಿ.ಗೆ (ಬಿವಿಇಪಿಎಲ್) ನೀಡಲು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿರುವ ಇಡಿ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದೆ.
ಎಲ್ಲಿಯ ಕಂಪನಿ?ಏನು?:
ಕೋಲ್ಕತ್ತಾ, ಪಶ್ಚಿಮ ಬಂಗಾಳದ ಮೂಲದ ಬಿವಿಇಪಿಎಲ್ ಕಂಪನಿ ಇದಾಗಿದೆ. ಈ ಕಂಪನಿಯು ರಸ್ತೆಗಳು, ಹೆದ್ದಾರಿ, ಪ್ರಮುಖ ಸೇತುವೆಗಳನ್ನು ನಿರ್ಮಿಸುತ್ತದೆ. ಅಲ್ಲದೇ ಈ ಕಂಪನಿ ದೇಶದ ವಿವಿಧ 25 ವಲಯಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತದೆ. ಅಸ್ಸಾಂ, ಜಾರ್ಖಂಡ್, ಮಣಿಪುರ್, ಪಶ್ವಿಮ ಬಂಗಾಳ್ ರಾಜ್ಯದಲ್ಲಿ ಈ ಕಂಪನಿ ಹೆಚ್ಚು ಸಕ್ರಿಯವಾಗಿದೆ.
ಸತೀಶ್ ಜಾರಕಿಹೊಳಿ ಕೋಲ್ಕತ್ತಾದಲ್ಲಿ ಆಸ್ತಿ ಹೊಂದಿರುವ ಬಗ್ಗೆ ಇಡಿ ಪತ್ತೆ ಮಾಡಿದೆ. ಆದ್ದರಿಂದ ಆ ರಾಜ್ಯದ ಬಿವಿಇಪಿಎಲ್ ಕಂಪನಿಗೆ ಕರ್ನಾಟಕದ ವಿವಿಧ ಜಿಲ್ಲೆ, ಗಡಿ ಪ್ರದೇಶದಲ್ಲಿನ ಪ್ರಮುಖ ಹೆದ್ದಾರಿ, ರಸ್ತೆ ಕಾಮಗಾರಿಗಳ ಟೆಂಡರ್ ನೀಡಲು ಜಾರಕಿಹೊಳಿ ಮುಂದಾಗಿದ್ದರು. ನೂರಾರು ಕೋಟಿ ರೂ.ಮೌಲ್ಯದ ಟೆಂಡರ್ ಈ ಕಂಪನಿಗೆ ನೀಡಲು ಲಂಚದ ರೂಪದಲ್ಲಿ ಕೋಟ್ಯಂತರ ರೂ. ಹಣ ಪಡೆದಿದ್ದಾರೆ ಎಂಬ ಆರೋಪಗಳಿವೆ. ಈ ಹಣವನ್ನು ವಿದೇಶಿದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆಯಾಮದಲ್ಲಿ ಇಡಿ ತನಿಖೆ ನಡೆಸಲಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ಮಂತ್ರಿಗಳ ವಿರುದ್ಧ ನೇರವಾಗಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ಇ.ಡಿ ಸಂಸ್ಥೆಗೆ ಅಧಿಕಾರವಿಲ್ಲ. ಈ ಹಿನ್ನೆಲೆ ಪತ್ತೆಯಾಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳ ಆಧಾರದ ಮೇಲೆ, ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆಯಲು ಇ.ಡಿ ಮುಂದಾಗಿದೆ ಎನ್ನಲಾಗಿದೆ.


ವಿದೇಶಿ ಹೂಡಿಕೆ ನಿಯಮಗಳೇನು?

ಭಾರತೀಯ ನಾಗರಿಕರು ವಿದೇಶಗಳಲ್ಲಿ ಷೇರು, ಮ್ಯೂಚುವಲ್ ಂಡ್, ಹೂಡಿಕೆ ಅಥವಾ ಆಸ್ತಿಗಳ ಮೇಲೆ ಹೂಡಿಕೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎ್ಇಎಂಎ) ಕೆಲವು ನಿಯಮಗಳನ್ನು ರೂಪಿಸಲಾಗಿದೆ.
ಹೂಡಿಕೆ ವೇಳೆ ಒಬ್ಬ ಭಾರತೀಯ ನಿವಾಸಿ ಒಂದು ಆರ್ಥಿಕ ವರ್ಷದಲ್ಲಿ 250,000 ಯುಎಸ್ ಡಾಲರ್ (ಯುಎಸ್‌ಡಿ) ವರೆಗೆ ವಿದೇಶಕ್ಕೆ ಕಳುಹಿಸಬಹುದು ಮತ್ತು ಹೂಡಿಕೆ ಮಾಡಬಹುದು.
ಓವರ್‌ಸೀಸ್ ಪೋರ್ಟ್‌ಪೋಲಿಯೋ ಇನ್ವೆಸ್ಟ್‌ಮೆಂಟ್ (ಓಪಿಐ) ಅಡಿ ವಿದೇಶಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಷೇರುಗಳು, ಬಾಂಡ್ ಅಥವಾ ಮ್ಯೂಚುವಲ್ ಂಡ್‌ಗಳಲ್ಲಿ ಸಣ್ಣ ಪ್ರಮಾಣದ (ಶೇ.10ಕ್ಕಿಂತ ಕಡಿಮೆ) ಹೂಡಿಕೆ ಮಾಡಬಹುದು.
ಮುಖ್ಯವಾಗಿ ವಿದೇಶಕ್ಕೆ ಹಣ ಕುಳುಹಿಸುವಾಗ ಭಾರತದ ಸರ್ಕಾರ ನಿಯಮದಂತೆ ತೆರಿಗೆಯನ್ನು ಕಡಿಗೊಳಿಸುತ್ತದೆ. ಉದಾರಣೆಗೆ 10 ಲಕ್ಷದವರೆಗೆ ಹಣವನ್ನು ಒಂದು ವರ್ಷದಲ್ಲಿ ಕಳುಹಿಸಿದರೆ ತೆರೆಗೆ ಅನ್ವಯಿಸುವುದಿಲ್ಲ. 10 ಲಕ್ಷಕ್ಕಿಂತ ಅಧಿಕ ಹೂಡಿಕೆ ಮಾಡಿದರೆ ಶೇ.20 ಟಿಸಿಎಸ್ (ತೆರಿಗೆ) ಅನ್ವಯವಾಗುತ್ತದೆ.
ಆರ್‌ಬಿಐ ಅನುಮತಿಯಿಲ್ಲದೇ ವಿದೇಶಿ ಬ್ಯಾಂಕಿಂಗ್ ಅಥವಾ ರಿಯಲ್ ಎಸ್ಟೇಟ್ ಸೇರಿ ಇತರೆ ವ್ಯವಹಾರದಲ್ಲಿ ಹೂಡಿಕೆ ಮಾಡುವ ಹಾಗಿಲ್ಲ. ( ವೈಯಕ್ತಿಕ ಬಳಕೆಗೆ ಮನೆ, ಆಸ್ತಿ ಖರೀದಿಸಲು ಅವಕಾಶವಿದೆ)
ವಿದೇಶಿ ಹೂಡಿಕೆಗೆ ವ್ಯಕ್ತಿಯ ಒಟ್ಟು ಆದಾಯ ತೆರಿಗೆ ಮಿತಿಯ ಒಳಗಿದ್ದರೂ ಸಹ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ. ಐಟಿಆರ್ ಾರ್ಮನಲ್ಲಿರುವ ವಿದೇಶಿ ಹೂಡಿಕೆ, ಆಸ್ತಿ ಖರೀದಿಗೆ ಸೇರಿದ ಎಲ್ಲ ವಿವರಗಳನ್ನು ಕಡ್ಡಾಯವಾಗಿ ೋಷಣೆ ಮಾಡಬೇಕಾಗುತ್ತದೆ.
ಈ ಎಲ್ಲ ನಿಯಮಗಳನ್ನು ಸತೀಶ್ ಜಾರಕಿಹೊಳಿ ಉಲ್ಲಂಸಿದ್ದಾರೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದೆ.