ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಿಂದ ವಿವಿಧೆಡೆ ತೆರಳುವವರ ಸಂಖ್ಯೆಯು ಹೆಚ್ಚಿದ್ದು, ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಮತ್ತು ಬೆಳವಗಾವಿ ನಡುವೆ ವಿಶೇಷ ರೈಲು ಸಂಚಾರಕ್ಕೆ ನೈಋತ್ಯ ರೈಲ್ವೆ ಮಂಡಳಿಯು ಅನುಮತಿ ನೀಡಿದೆ. ಎರಡೂ ವಾರ್ಗಗಳಲ್ಲಿ ತಲಾ ಎರಡು ಟ್ರಿಪ್ (ಪ್ರಯಾಣ) ಸಂಚರಿಸಲಿವೆ.
ಬೆಂಗಳೂರಿನ ಎಸ್ಎಂವಿಟಿ - ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ 06551 ಸಂಖ್ಯೆ ರೈಲು ನ.7, 9ರಂದು ಸಂಜೆ 7ಕ್ಕೆ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿ - ಬೆಂಗಳೂರಿನ ಎಸ್ಎಂವಿಟಿ ವಿಶೇಷ ಎಕ್ಸ್ಪ್ರೆಸ್ 06552 ಸಂಖ್ಯೆ ರೈಲು ನ.8, 10ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5ಕ್ಕೆ ಗಂಟೆಗೆ ಬೆಂಗಳೂರು ಎಸ್ಎಂವಿಟಿಗೆ ತಲುಪಲಿದೆ.
ಈ ಮಾರ್ಗಗಳಲ್ಲಿ ಬರುವ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ನೈರುತ್ಯ ರೈಲ್ವೆ ಮಂಡಳಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ತಿಳಿಸಿದ್ದಾರೆ.