ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಿಹಳ್ಳಿಯ ಪಾಂಡುರಂಗಸ್ವಾಮಿಗೆ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.
ದೊಡ್ಡಬಳ್ಳಾಪುರ : ಆಷಾಢ ಏಕಾದಶಿ ಪ್ರಯುಕ್ತ ನಗರದ ದರ್ಜಿಪೇಟೆಯಲ್ಲಿರುವ ರುಕ್ಮಿಣಿ&ಸತ್ಯಭಾಮ ಸಮೇತ ಪಾಂಡುರಂಗಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.
25ರಂದು ಬೆಳಗ್ಗೆ 8ಕ್ಕೆ ರುಕ್ಮಿಣಿ ಸತ್ಯಭಾಮ ಸಮೇತ ಪಾಂಡುರಂಗಸ್ವಾಮಿ ಮೆರವಣಿಗೆ ಜರುಗಲಿದೆ. ತಾಲೂಕಿನ ಪಾಲನಜೋಗಿಹಳ್ಳಿಯಲ್ಲಿರುವ ಪಾಂಡುರಂಗಸ್ವಾಮಿ ದೇಗುಲದಲ್ಲಿ ಪಾಂಡುರಂಗಸ್ವಾಮಿ ಭಕ್ತ ಮಂಡಳಿಯಿಂದ 67ನೇ ಏಕಾದಶಿ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೇರವೇರಿತು. ಬೆಳಗ್ಗೆ 10ಕ್ಕೆ ಸುರಭಿ ಭಜನಾ ಮಂಡಳಿಯಿಂದ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಭಜನೆ, ಮಧ್ಯಾಹ್ನ 12ಕ್ಕೆ ಬೆಳ್ಳಿ ಪಲ್ಲಕ್ಕಿ ಉತ್ಸವ, ಸಂಜೆ 6ಕ್ಕೆ ಭರತನಾಟ್ಯ, ಭಕ್ತೀಗಿತೆ, ಭಜನೆ ಹಾಗೂ ಅಖಂಡ ಭಜನೆ, ಮಂಜುಶ್ರೀ ಮೆಲೋಡಿಸ್ ಅವರಿಂದ ಭಕ್ತೀಗಿತೆಗಳ ವಾದ್ಯಗೋಷ್ಠಿ ನಡೆಯಿತು. ರಾತ್ರಿ 10ರಿಂದ ಬೆಳಗಿನ ಜಾವ 5ವರೆಗೆ ಪೋಲನಹಳ್ಳಿ ನಾರಾಯಣಸ್ವಾಮಿ ಮತ್ತು ಸಂಗಡಿಗರಿಂದ ಪಂಡರಿ ಭಜನೆ ಹಮ್ಮಿಕೊಳ್ಳಲಾಗಿತ್ತು. ಜು.26ರಂದು ಅನ್ನಸಂತರ್ಪಣೆ ನಡೆಯಲಿದೆ.