- ಕಾಂಗ್ರೆಸ್ ನಾಯಕರಿಗೆ ಮೋದಿ ನಿಂದನೆ ಓಕೆನಾ?
- ಆರೋಗ್ಯ ಕ್ಷೇತ್ರಕ್ಕೆ ವಾರ್ ಎಫೆಕ್ಟ್
ಕಲಬುರಗಿ: ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕುರಿತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಸೇರಿ ಬಿಜೆಪಿ ಮುಖಂಡರು ಹಗುರವಾಗಿ ಮಾತನಾಡಿರುವುದನ್ನು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಖಂಡಿಸಿದ್ದಾರೆ.
ಸುದೀರ್ ರಾಜಕೀಯ ಜೀವನದಲ್ಲಿ ನತೆ, ಗೌರವ ಕಾಪಾಡಿಕೊಂಡು ಬಂದಿರುವ ಖರ್ಗೆ ಅವರು, ಬಿಜೆಪಿ, ಆರ್ಎಸ್ಎಸ್ ವಿಷಕಾರಿ ಹಾವುಗಳಿದ್ದಂತೆ. ಬೆಳೆಯಲು ಬಿಡಬಾರದು ಎಂದು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಮಧ್ಯೆ ಹೇಳಿಕೆಗಳು ಸಾಮಾನ್ಯ. ಕಾಂಗ್ರೆಸಿಗರು ದೇಶದ್ರೋಹಿಗಳು, ದೇಶವನ್ನು ಲೂಟಿ ಮಾಡಿದ್ದಲ್ಲದೆ ಅರ್ಬನ್ ನಕ್ಸಲೈಟ್ಸ್ ಎಂದೂ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಹಾಗಂತ ನಾವು ಮೋದಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದೇವಾ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿರುವ ಖರ್ಗೆ ಸಮಾಜದಲ್ಲಿ ಯಾವತ್ತೂ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ಇಂಥವರ ವಿರುದ್ಧ ಕೇಸ್ ಹಾಕುವುದು ಹಾಸ್ಯಾಸ್ಪದ. ವಿವೇಕ ಇದ್ದವರು ಮಾಡಲ್ಲ. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಬಿಜೆಪಿಯವರು ಖರ್ಗೆ ಹೇಳಿಕೆಗೆ ಬಣ್ಣ ಬಳಿದು ದೊಡ್ಡದು ಮಾಡಿ ಅಪಾರ್ಥ ಕಲ್ಪಿಸುತ್ತಿದ್ದಾರೆ. ಆದರೆ ಈಗಾಗಲೇ ಖರ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು.
ವಾರ್ ಎಫೆಕ್ಟ್: ಇರಾನ್-ಇಸ್ರೇಲ್ ಯುದ್ಧದಿಂದಾಗಿ ಆರೋಗ್ಯ ಕ್ಷೇತ್ರದ ಮೇಲೂ ಕರಿನೆರಳು ಬಿದ್ದಿದೆ. ಆಮದು ಮಾಡಿಕೊಳ್ಳುವ ಉಪಕರಣಗಳ ಕೊರತೆ, ದುಬಾರಿ ಬೆಲೆ ಜತೆ ಫಾರ್ಮಾ ಕೈಗಾರಿಕೆ ಮೇಲೂ ಪರಿಣಾಮವನ್ನುಂಟು ಮಾಡಿದೆ. ದೇಶದ ವಿದೇಶಿ ನೀತಿ ಸರಿ ಇಲ್ಲದಿದ್ದರೆ ಇಂಥ ಪರಿಸ್ಥಿತಿ ತಲೆದೋರುತ್ತದೆ. ಯುದ್ಧದ ಸಂದರ್ಭದಲ್ಲಿ ಮೋದಿ ಇಸ್ರೇಲ್ ಹೋಗುವ ಅಗತ್ಯವೇನಿತ್ತು ಎಂದು ಡಾ.ಶರಣಪ್ರಕಾಶ ಪ್ರಶ್ನಿಸಿದರು.
ರಾಜ್ಯದ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕುರಿತು ಗಮನ ಸೆಳೆದಾಗ ಹೌದು, ಕೆಲ ಹಂತದಲ್ಲಿ ಸಮಸ್ಯೆ ಆಗಿತ್ತು. ಆದರೆ ಇತ್ತೀಚೆಗೆ ಆರೋಗ್ಯ ಸಚಿವರು ರಾಜ್ಯಮಟ್ಟದಲ್ಲಿ ಔಷಧ ಖರೀದಿಗೆ ಟೆಂಡರ್ ಕರೆದಿದ್ದು, ಶ್ರೀದಲ್ಲಿ ಆಸ್ಪತ್ರೆಗಳಿಗೆ ಔಷಧ ಸರಬರಾಜು ಆಗಲಿದೆ ಎಂದಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದರು.
ಈ ಸಲ ವೈದ್ಯಕಿಯ ಯುಜಿ ಮತ್ತು ಪಿಜಿ ಸೀಟು ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬಾಗಲಕೋಟೆ, ರಾಮನಗರದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪಿಸಲಾಗುತ್ತಿದೆ. ಕುಮಟಾದಲ್ಲಿ ಆಗಿದೆ. ಕನಕಪುರದಲ್ಲಿ ಪ್ರಸ್ತಾವನೆ ಇದೆ ಎಂದು ತಿಳಿಸಿದರು.
371(ಜೆ) ವಿಧಿಯಿಂದಾಗಿ ಭಾರಿ ಅನುಕೂಲ
ಸಂವಿಧಾನದ 371(ಜೆ) ವಿಧಿ ಜಾರಿಯಿಂದಾಗಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಭಾರಿ ಅನುಕೂಲ ಆಗಿದೆ. 80 ಸಾವಿರ ಜನರಿಗೆ ಉದ್ಯೋಗ, 10 ಸಾವಿರ ಮೆಡಿಕಲ್ ಸೀಟು ಸಿಕ್ಕಿವೆ. ಬಡ್ತಿಗೆ ಸಂಬಂಧಿಸಿದ ಸಮಸ್ಯೆ ಶ್ರೀ ಪರಿಹಾರವಾಗಲಿದೆ. ಗೋವಿಂದರಾವ್ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕಕ ಶೇ.72 ಹಿಂದುಳಿದಿದೆ ಎಂದಿದೆ. ನಮ್ಮ ಸರ್ಕಾರ ಹಿಂದುಳಿದ ಭಾಗದ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಲಿದೆ. ಯಾವ ಕಾರಣಕ್ಕೂ ಈ ಭಾಗಕ್ಕೆ ಅನ್ಯಾಯವಾಗಲು ಬಿಡಲ್ಲ ಎಂದು ಸಚಿವ ಡಾ.ಶರಣಪ್ರಕಾಶ ಹೇಳಿದರು.
ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಅನುಮಾನವೇ ಬೇಡ. ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದು, ಕಾಂಗ್ರೆಸ್ ಪರ ಒಲವು ತೋರಿದ್ದಾರೆ.