ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ಶುಕ್ರವಾರ ಕೈಗಾರಿಕಾ ಹಟಾವೋ ಸೈದಾಪುರ ವಲಯ ಬಚಾವೋ ಜನಜಾಗೃತಿ ಅಭಿಯಾನದ ಕುರಿತು ಪೂರ್ವಬಾವಿ ಸಭೆ ನಡೆಯಿತು. ಕೃಷ್ಣಯ್ಯ ಗುಜ್ಜಾ, ರಾವೇಂದ್ರ ಬಾದಾಮಿ, ಬನ್ನಯ್ಯಸ್ವಾಮಿ ಕೊಂಡಾಪುರ, ಪ್ರಭು ಗೂಗಲ್, ಸೂಗಪ್ಪ ಸಾಹುಕಾರ, ಆನಂದಗೌಡ, ಮಾಳಪ್ಪ ಅರಿಕೇರಿ ಇತರರಿದ್ದರು.
- ಕೈಗಾರಿಕಾ ಹಟಾವೋ ಸೈದಾಪುರ ವಲಯ ಬಚಾವೋ' ಅಭಿಯಾನಕ್ಕೆ ಸಿದ್ಧತೆ
- ಜನಜಾಗೃತಿ ಸಭೆ
ಸೈದಾಪುರ: ಕಡೇಚೂರು&ಬಾಡಿಯಾಳ ಕೈಗಾರಿಕಾ ವಲಯದಲ್ಲಿನ ರಾಸಾಯನಿಕ ಕಂಪನಿಗಳಿಂದ ಹೊರಬರುತ್ತಿರುವ ವಿಷಪೂರಿತ ಅನಿಲ ಹಾಗೂ ತ್ಯಾಜ್ಯಗಳಿಂದ ಸೈದಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.
ದಿನೇ, ದಿನೆ ಹೆಚ್ಚುತ್ತಿರುವ ದುರ್ವಾಸನೆ ಮತ್ತು ವಾಯು ಮಾಲಿನ್ಯ ಜನರಲ್ಲಿ ಭೀತಿ ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಿಯರು ಮತ್ತು ಸಾಮಾಜಿಕ ಹೋರಾಟಗಾರರು ಸಂಟಿತವಾಗಿ ಜನಜಾಗೃತಿ ಸಭೆ ನಡೆಸಲು ಮುಂದಾಗಿದ್ದಾರೆ.ಪಟ್ಟಣದಲ್ಲಿ ಶುಕ್ರವಾರ ಸಂಜೆ "ಕೈಗಾರಿಕಾ ಹಟಾವೋ&ಸೈದಾಪುರ ವಲಯ ಬಚಾವೋ' ಅಭಿಯಾನದ ಪೂರ್ವಬಾವಿ ಸಭೆಯಲ್ಲಿ ಜನಜಾಗೃತಿ ಅಭಿಯಾನದ ರೂಪರೇಷ ಹಾಕಿಕೊಳ್ಳಲಾಯಿತು. ಕೈಗಾರಿಕಾ ಪ್ರದೇಶದಲ್ಲಿನ ಕೆಲವು ರಾಸಾಯನಿಕ ಟಕಗಳು ಪರಿಸರ ನಿಯಮ ಲೆಕ್ಕಿಸದೆ, ವಿಷಕಾರಿ ಅನಿಲಗಳನ್ನು ರಾತ್ರಿ ವೇಳೆಯಲ್ಲಿ ಹೊರಬಿಡುತ್ತಿರುವುದರ ಪರಿಣಾಮ ಗ್ರಾಮಗಳಲ್ಲಿ ದುರ್ವಾಸನೆ ವ್ಯಾಪಕವಾಗಿ ಹರಡುತ್ತಿದ್ದು, ಉಸಿರಾಟ, ತಲೆನೋವು, ಕಣ್ಣು ಉರಿಯುವುದು, ಚರ್ಮದ ಸಮಸ್ಯೆ ಹೆಚ್ಚುತ್ತಿರುವುದಾಗಿ ಸ್ಥಳಿಯರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಮಸ್ಯೆ ಪರಿಹಾರವಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ೂಷಿಸಿದ್ದಾರೆ. ಅಗತ್ಯವಿದ್ದಲ್ಲಿ ಪ್ರತಿಭಟನೆ, ರಸ್ತೆತಡೆ, ಧರಣಿ ಸೇರಿ ಕಾನೂನು ಬದ್ಧ ಹೋರಾಟಗಳನ್ನು ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಆರ್ಯವೈಶ್ಯ ಸೇವಾ ಸಂದ ಅಧ್ಯಕ್ಷ ಕೃಷ್ಣಯ್ಯ ಗುಜ್ಜಾ, ರಾವೇಂದ್ರ ಬಾದಾಮಿ, ಬನ್ನಯ್ಯಸ್ವಾಮಿ ಕೊಂಡಾಪುರ, ಪ್ರಭು ಗೂಗಲ್, ಸೂಗಪ್ಪ ಸಾಹುಕಾರ, ಆನಂದಗೌಡ, ಮಾಳಪ್ಪ ಅರಿಕೇರಿ, ಶಾಂತಗೌಡ ಬೆಳಗುಂದಿ, ರವಿಕುಮಾರ ಕಡೇಚೂರು, ವಿರೇಶ ಸಜ್ಜನ್, ತಾಯಪ್ಪ ಚಿಗರಿ, ತಾಯಪ್ಪ ಬೊಣ್ಣನೋರ್, ರವಿ ಯಾಟಗಲ್, ವಿಜಯ ಕಂದಳ್ಳಿ, ರಾವೇಂದ್ರ ಕಲಾಲ್, ನಾಗಪ್ಪ ಬೆಳಗುಂದಿ, ಬಸ್ಸುಗೌಡ ಚಿಗಾನೂರ, ಬಸವರಾಜಸ್ವಾಮಿ ಬಾಡಿಯಾಳ, ದೇವು ಂಟಿ, ಗಂಗಾಧರ ಸ್ವಾಮಿ ಗದ್ವಾಲ್, ದೇವಪ್ಪ ಬೇನಕನಹಳ್ಳಿ, ಅನಿಲ್ ತಳವಾರ್, ಯಲ್ಲಪ್ಪ ಕೋರೆ, ದೇವು ಸೈದಣ್ಣನೋರ್ ಇತರರಿದ್ದರು.