ಕಕ್ಕೇರಾ ಪಟ್ಟಣದ ಉಪ ಪೊಲೀಸ್​ ಠಾಣೆಗೆ ಮಂಗಳವಾರ ಆಗಮಿಸಿದ್ದ ಎಸ್​ಪಿ ಪೃಥ್ವಿಕ್​ ಶಂಕರ್​ ಅವರನ್ನು ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪುರ, ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ ದಳಾರ ಸನ್ಮಾನಿಸಿದರು. 
ರಾಜ್ಯ

ಕಕ್ಕೇರಾ ಉಪ ಪೊಲೀಸ್​ ಠಾಣೆಗೆ ಎಸ್​ಪಿ ಭೇಟಿ

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್​ ಠಾಣೆ ನಿರ್ಮಾಣಕ್ಕಾಗಿ ಅಧಿಕಾರಿ ಹಾಗೂ ಮುಖಂಡರ ಜತೆ ಚರ್ಚೆ
ಕಕ್ಕೇರಾ: ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026ರ ಬಜೆಟ್​ನಲ್ಲಿ ಕಕ್ಕೇರಾ ಉಪ ಪೊಲೀಸ್​ ಠಾಣೆಯನ್ನು ಪೊಲೀಸ್​ ಠಾಣೆಯನ್ನಾಗಿ ಮೇಲ್ದರ್ಜೇಗೇರಿಸಿ ಆದೇಶ ಹೊರಡಿಸಿದ್ದರಿಂದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪೃಥ್ವಿಕ್​ ಶಂಕರ್​ ಉಪ ಪೊಲೀಸ್​ ಠಾಣೆಗೆ ಮಂಗಳವಾರ ಭೇಟಿ ನೀಡಿದರು.
ಈ ವೇಳೆ ಗ್ರಾಮಾಡಳಿತಾಧಿಕಾರಿ ಬಸವರಾಜ ಶೆಟ್ಟಿ ಹಾಗೂ ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪುರ, ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ ದಳಾರ ಮತ್ತು ಮುಖಂಡರ ಜತೆ ನೂತನ ಪೊಲೀಸ್​ ಠಾಣೆ ನಿರ್ಮಾಣಕ್ಕಾಗಿ ಸ್ಥಳದ ಕುರಿತು ಚರ್ಚಿಸಿದರು.
ನಂತರ ಮಾತನಾಡಿದ ಅವರು, ಪಟ್ಟಣದಲ್ಲಿರುವ ಪ್ರಸ್ತುತ ಉಪ ಪೊಲೀಸ್​ ಠಾಣೆಯು ಪೊಲೀಸ್​ ಠಾಣೆಯನ್ನಾಗಿ ಸರ್ಕಾರ ಮೇಲ್ದರ್ಜೇಗೇರಿಸಿ ಆದೇಶ ಹೊರಡಿಸಿದ್ದು ಪೂರ್ಣ ಪ್ರಮಾಣದ ಪೊಲೀಸ್​ ಠಾಣೆಯನ್ನಾಗಿಸುವ ಕುರಿತು ಹೊಸ ಕಟ್ಟಡ ನಿರ್ಮಾಣಕ್ಕಾಗಿ 1 ಎಕರೆ ಮತ್ತು ಪೊಲೀಸ್​ ವಸತಿ ಗೃಹಗಳ ನಿರ್ಮಾಣಕ್ಕಾಗಿ ಜಾಗದ ಕುರಿತಾಗಿ ಕಂದಾಯ, ಪುರಸಭೆ ಆಡಳಿತ ಮಂಡಳಿ ಮತ್ತು ಮುಖಂಡರಿಂದ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.
ಹುಣಸಗಿ ವೃತ್ತ ಸಿಪಿಐ ರವಿಕುಮಾರ ಎಸ್​.ಎನ್​, ಕೊಡೇಕಲ್​ ಠಾಣಾಧಿಕಾರಿ ರಾಜಶೇಖರ ರಾಠೋಡ್​, ಸಿಬ್ಬಂದಿ ಬೀರಪ್ಪ, ರಾಜು, ವಿನಾಯಕ ಹಾಗೂ ಪ್ರಮುಖರಾದ ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪುರ, ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ ದಳಾರ, ದ್ಯಾವಪ್ಪ ಜಂಪಾ, ಬಸವರಾಜ ಇತರರಿದ್ದರು.