ಬೆಂಗಳೂರಿನಲ್ಲಿ ಕರವೇ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಅವರಿಗೆ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಟಿ ಜಯಮಾಲ, ಟಿ.ಎ.ನಾರಾಯಣಗೌಡ ಇದ್ದರು.
- ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿಕೆ
- ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಯಾದಗಿರಿ: ಸೇವಾ ಮನೋಭಾವ, ಜನಪರ ಕೆಲಸ ಮತ್ತು ನಾಯಕತ್ವ ಗುಣಗಳನ್ನು ಗುರುತಿಸಿ ಹಿಂದುಳಿದ ವರ್ಗಗಳ ಆಯೋಜದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದರು.
ಕರ್ನಾಟಕ ರಣಾ ವೇದಿಕೆಯಿಂದ ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾನೆಗಾರ ಅವರಿಗೆ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ನೀಡಿ ಮಾತನಾಡಿದ ಅವರು,
ಸಮಾಜ ಮತ್ತು ರಾಜಕೀಯ ೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದರು.
ಇದು ಅವರ ಸಾಧನೆಗೆ ಒಂದು ಮಾನ್ಯತೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆಯಾಗಲಿ ಎಂದರು. ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ನಟಿ ಜಯಮಾಲಾ, ಜಿಲ್ಲಾಧ್ಯ ಟಿ.ಎನ್. ಭೀಮು ನಾಯಕ, ತಾಲೂಕು ಅಧ್ಯ ಮಲ್ಲು ಮಾಳಿಕೇರಿ, ಮಾಜಿ ಪಿಎಲ್ ಡಿ ಬ್ಯಾಂಕ್ನ ಮಾಜಿ ಅಧ್ಯ ಸುದರ್ಶನ ಪಾಟೀಲ್ ಜೈಗ್ರಾಮ್, ಹಣಮಂತ ದೊಡ್ಡಮನಿ,ಜಗದೀಶ್ ಸಜ್ಜನ, ಯಂಕಾರೆಡ್ಡಿ ಮಾನೆಗಾರ, ಸೈದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯ ಆಂಜನೇಯ ಕಟ್ಟಿಮನಿ, ವಿರೇಶ್ ಸಜ್ಜನ್, ಕೋಲಿ ಸಮಾಜದ ವಲಯ ಅಧ್ಯ ರಮೇಶ ಭೀಮನಳ್ಳಿ, ಗುರುಮಠಕಲ್ ಅಸೆಂಬ್ಲಿ ಯುವ ಕಾಂಗ್ರೆಸ್ ಉಪಾಧ್ಯ ಮಂಜುನಾಥ್ ಮೇತ್ರಿ, ಪುಂಡಲೀಕ ಗೊಂದೆಡಗಿ, ಜುಬೇರ ಕಡೇಚೂರು, ಹುಸೇನಪ್ಪ ಕಡೇಚೂರು, ಚಂದ್ರಪ್ಪ ಕಡೇಚೂರು, ರಾವೇಂದ್ರ ಕೊಂಕಲ್ ಇತರರಿದ್ದರು.