ಸೋನಮ್ ವಾಂಗ್ಚುಕ್ ಬೆಳಗಾವಿ ಜನತೆ ಬೆಂಬಲ 
ರಾಜ್ಯ

ಸೋನಮ್ ವಾಂಗ್ಚುಕ್ ಬೆಂಬಲಿಸಿ ಪ್ರತಿಭಟನೆ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಸೋನಮ್ ವಾಂಗ್ಚುಕ್ ಬೆಳಗಾವಿ ಜನರ.ಬೆಂಬಲ
  • ನ್ಯಾಯಯುತ ಬೇಡಿಕೆ ಈಡೇರುಸುವಂತೆ ಮನವಿ
  • ಬೆಳಗಾವಿ ಜನರಿಂದ ನಗರದಲ್ಲಿ ಪ್ರತಿಭಟನೆ
ಸೋನಂ ವಾಂಗ್ಚುಕ್ ಹೋರಾಟಕ್ಕೆ ಬೆಂಬಲ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಕಳೆದ ವರ್ಷ ೨೧ ದಿನಗಳಿಂದ ಉಪವಾಸ ನಿರತರಾಗಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ರ ಹೋರಾಟ ಬೆಂಬಲಿಸಿ ಸೋಮವಾರ ಚನ್ನಮ್ಮ ವೃತ್ತದಿಂದ ಜಿಲ್ಲಾಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಸೋನಮ್ ವಾಂಗ್ಚುಕ್ ಅವರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದೇಶದ ಸಮಗ್ರ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ನಿರಂತರ ಉಪವಾಸ ಕೈಗೊಂಡಿರುವ ಸೋನಮ್ ವಾಂಗ್ಚುಕ್ ಅವರ ಹೋರಾಟ ನ್ಯಾಯಯುತವಾಗಿದೆ. ನೀಟ್ ಪ್ರಶ್ನೆಪತ್ರಿಕೆ ಸೊರಿಕೆಯಿಂದ ಹಲವರ ಜೀವ ಬಲಿಯಾಗಿವೆ.ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಕೂಡಲೇ ರಾಜಿನಾಮೆ ಸರ್ಕಾರ, ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಸೋನಮ್ ವಾಂಗ್ಚುಕ್ ಅವರ ಜತೆ ಕೇಂದ್ರ ಸಭೆ ನಡೆಸಿ ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ರಾಜಕುಮಾರ ಟೋಪಣ್ಣವರ, ಸುಜೀತ ಮುಳಗುಂದ, ಆಯಿಶಾ ಸನದಿ, ಶಿವಾಜಿ ಕಾಗಣಿಕರ್ ಇತರರಿದ್ದರು.