- ಮಾದನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ FIR
- ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು
ಮದ್ಯ ಸೇವಿಸಿ ತಾಯಿಗೆ ಹೊಡೆದು ಕಿರುಕುಳ ನೀಡುತ್ತಿದ್ದ ಮಲತಂದೆಯನ್ನು ಮಗನೇ ಕೊಲೆ ಮಾಡಿರುವುದು ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ವಿ. ಶ್ರೀಧರ್ (51) ಕೊಲೆಯಾದ ವ್ಯಕ್ತಿ. ಉದಯ್ ಕುಮಾರ್ (22) ಕೊಲೆ ಮಾಡಿದವ. ಆರೋಪಿ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಪಂಜಾಬ್ ಮೂಲದ ಬೀನಾಳನ್ನು ಶ್ರೀಧರ್ ಪ್ರೀತಿಸಿ ಮದುವೆಯಾಗಿದ್ದ. ಮೊದಲಿಗೆ ಉತ್ತರಹಳ್ಳಿಯಲ್ಲಿ ವಾಸವಾಗಿದ್ದ. ಬಳಿಕ ಕೆಲವು ವರ್ಷಗಳಿಂದ ಶಿವನಪುರದ ಬಾಡಿಗೆ ಮನೆಯಲ್ಲಿ ಬೀನಾಳ ಮೊದಲ ಗಂಡನ ಮಗ ಹಾಗೂ ತನ್ನ ಮಕ್ಕಳೊಂದಿಗೆ ವಾಸವಾಗಿದ್ದ.
ತೀವ್ರ ಕುಡಿತದ ಚಟಕ್ಕೆ ಬಿದ್ದಿದ್ದ ಶ್ರೀಧರ್, ಬೀನಾಳಿಗೆ ನಿತ್ಯವೂ ಹೊಡೆಯುತ್ತಿದ್ದ. ಇದರಿಂದ ತಾಳ್ಮೆ ಕಳೆದುಕೊಂಡಿದ್ದ ಉದಯ್, ಬುಧವಾರ ಬೆಳಗ್ಗೆ 6 ಗಂಟೆೆಗೆ ‘ನೀನು ನನ್ನ ಸ್ವಂತ ಅಪ್ಪ ಅಲ್ಲ’ ಎಂದು ಜಗಳ ತೆಗೆದಿದ್ದಾನೆ. ಇಬ್ಬರ ನಡುವೆ ಜೋರು ವಾಗ್ವಾದ ನಡೆದಿತ್ತು. ಆಗ ಉದಯ್ ತನ್ನ ಮಲತಂದೆ ತಲೆಗೆ ಬೈಕಿನ ಶಾಕಬ್ಜರ್‌ನಿಂದ ಬಲವಾಗಿ ಹೊಡೆದು ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀನಾಳ ಮೊದಲನೇ ಗಂಡ ತೀರಿದ ಬಳಿಕ 2ನೇ ಮದುವೆಯಾಗಿ ಇಬ್ಬರಿಗೆ ಜನ್ಮ ನೀಡಿದ್ದಳು. ಶ್ರೀಧರ ತನ್ನ ಮಕ್ಕಳಿಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಉದಯ್‌ಕುಮಾರ್ ಮೇಲೆ ಬೇಜಬ್ದಾರಿ ತೋರುತ್ತಿದ್ದ ಎಂದು ಮೂಲಗಳು ತಿಳಿಸಿವೆ.