ದೊಡ್ಡಬಳ್ಳಾಪುರ ನೇರಳಘಟ್ಟದಲ್ಲಿ ಹಲ್ಲೆ ಮಾಡಿದ ಸ್ಥಳದಲ್ಲಿ ಆರೋಪಿ ಲಕ್ಷ$್ಮಣ್​ನೊಂದಿಗೆ ಗ್ರಾಮಾಂತರ ಠಾಣೆ ಇನ್​ಸ್ಪೆಕ್ಟರ್​ ನವೀನ್​ ಕುಮಾರ್​ ಸ್ಥಳ ಮಹಜರು ಮಾಡಿದರು. 
ರಾಜ್ಯ

ಅಳಿಯನಿಂದಲೇ ಮಾವನ ಕೊಲೆ! / DODABALLAPUR

ದೊಡ್ಡಬಳ್ಳಾಪುರ : ನೇರಳೇಘಟ್ಟ ಕಾಲನಿಯಲ್ಲಿ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದಿದ್ದಾನೆ.
ನರಸಪ್ಪ (61) ಹತ್ಯೇಗಿಡಾದವರು. ಇವರ ಅಳಿಯ ಲಕ್ಷ$್ಮಣ (40) ಆರೋಪಿ ಎನ್ನಲಾಗಿದೆ.
ನರಸಪ್ಪ ಅವರ ಮನೆಯಲ್ಲಿಯೇ ಪುತ್ರಿ ಹಾಗೂ ಆಕೆಯ ಪತಿ ಲಕ್ಷ$್ಮಣ ವಾಸವಿದ್ದರು. ಮನೆಬಿಟ್ಟು ಹೋಗುವಂತೆ ನರಸಪ್ಪ ಪದೇಪದೆ ಹೇಳುತ್ತಿದ್ದ ಕಾರಣ ಈ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಸೋಮವಾರವೂ ನರಸಪ್ಪ ಮಗಳೊಂದಿಗೆ ಜಗಳವಾಡಿ, ಆಕೆ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಕೋಪಗೊಂಡ ಲಕ್ಷ್ಮಣ, ನನ್ನ ಹೆಂಡತಿಗೆ ಹೊಡೆಯುತ್ತೀಯಾ? ಎಂದು ಮಾವನೊಂದಿಗೆ ವಾಗ್ವಾದಕ್ಕಿಳಿದು ಬಳಿಕ ಕಲ್ಲಿನಿಂದ ಎರಡೂ ಕಾಲುಗಳ ಮೇಲೆ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡ ನರಸಪ್ಪ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಿಸದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಆರೋಪಿ ಲಕ್ಷ$್ಮಣನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.