ಪ್ರತಿ 2 ಸೆಕೆಂಡಿಗೆ ಒಬ್ಬರಿಗೆ ರಕ್ತ ಬೇಕಿದೆ; ಬೇಡಿಕೆಯಷ್ಟು ರಕ್ತ ಲಭ್ಯವಿಲ್ಲ ! 
ರಾಜ್ಯ

ಪ್ರತಿ 2 ಸೆಕೆಂಡಿಗೆ ಒಬ್ಬರಿಗೆ ರಕ್ತ ಬೇಕಿದೆ; ಬೇಡಿಕೆಯಷ್ಟು ರಕ್ತ ಲಭ್ಯವಿಲ್ಲ !

ಪ್ರಮುಖ ಮುಖ್ಯಾಂಶಗಳು

  • ಪ್ರತಿ 2 ಸೆಕೆಂಡಿಗೆ ಒಬ್ಬರಿಗೆ ರಕ್ತ ಬೇಕಿದೆ; ಬೇಡಿಕೆಯಷ್ಟು ರಕ್ತ ಲಭ್ಯವಿಲ್ಲ !
  • ಜೂ.14 ವಿಶ್ವ ರಕ್ತದಾನಿಗಳ ದಿನ, ಹೇಗಿದೆ ರಾಜ್ಯದ ಸ್ಥಿತಿಗತಿ ?
  • ಬೇಡಿಕೆ ಪೂರೆಸಲು ಇರುವ ಬದಲಿ ಮಾರ್ಗಗಳೇನು ?

ಪ್ರಶಾಂತರಿಪ್ಪನ್​ಪೇಟೆ ಬೆಂಗಳೂರು :ರಾಜ್ಯದ ಅಂಕಿಅಂಶದ ಪ್ರಕಾರ ಪ್ರತಿ 2ಸೆಕೆಂಡಿಗೆಒಬ್ಬರಿಗೆ ರಕ್ತದ ಬೇಕಿದೆ. ಆದರೆ ಲಭ್ಯತೆಅಷ್ಟಾಗಿ ಇಲ್ಲ.ಜೂ.14ವಿಶ್ವ ರಕ್ತದಾನಿಗಳದಿನ ಈ ಹಿನ್ನೆಲೆಯಲ್ಲಿ ರಾಜ್ಯದರಕ್ತದ ಸ್ಥಿತಿಗತಿ ಕುರಿತು ಒಂದು ಸಮಗ್ರ ಸುದ್ದಿ.

ಕರ್ನಾಟಕದಲ್ಲಿವಾರ್ಷಿಕವಾಗಿ 10ಲಕ್ಷ ಯೂನಿಟ್ರಕ್ತದ ಬೇಡಿಕೆ ಇದೆ.ಆದರೆ ಸುಮಾರು9.70 ರಿಂದ9.80 ಲಕ್ಷಯೂನಿಟ್ ರಕ್ತವನ್ನು ಮಾತ್ರಸಂಗ್ರಹಿಸಲಾಗುತ್ತಿದೆ.ಇದರಲ್ಲಿವಾರ್ಷಿಕವಾಗಿ ಸುಮಾರು ಶೇ.3.7ರಿಂದ ಶೇ.5ರಷ್ಟು ರಕ್ತವ್ಯರ್ಥವಾಗುತ್ತಿದೆ.ಪ್ರತಿ ವರ್ಷ,ಅವಧಿ ಮೀರಿದ,ದಾನಿಗಳಲ್ಲಿಕಂಡು ಬಂದು ಸೋಂಕು ಮತ್ತಿತರಅಂಶಗಳಿಂದ 37ರಿಂದ 44ಸಾವಿರ ಯೂನಿಟ್ರಕ್ತ ತ್ಯಜಿಸಲ್ಪಡುತ್ತಿದೆ.ಈ ನಡುವೆ ಕಾಲಮಾನಕ್ಕೆಅನುಗುಣವಾಗಿ ರಕ್ತದ ಸಂಗ್ರಹಮತ್ತು ಬೇಡಿಕೆಯಲ್ಲಿ ಏರಿಳಿತವಿರುತ್ತದೆ.ಕಡಿಮೆಯಾಗುವರಕ್ತವನ್ನು ರೋಗಿಯ ಕುಟುಂಬಸದಸ್ಯರಿಂದ ಬದಲಿ ರಕ್ತ ಸಂಗ್ರಹಇತ್ಯಾದಿ ವಿಧದಲ್ಲಿ ಸರಿದೂಗಿಸಲಾಗುತ್ತದೆ.ನಗರ ಪ್ರದೇಶಗಳಲ್ಲಿಸ್ವಯಂ ಸೇವಕ ಸಂಘಗಳು ಹಾಗೂ ಸರ್ಕಾರಿಆಸ್ಪತ್ರೆಗಳಲ್ಲಿ ಬ್ಲಡ್ಬ್ಯಾಂಕ್‌ಗಳು ಇರುವುದರಿಂದಬೇಡಿಕೆಯನ್ನು ಸರಿದೂಗಿಸಲಾಗುತ್ತಿದೆ.ಆದರೆ ಗ್ರಾಮೀಣಪ್ರದೇಶಗಳಲ್ಲಿ ಅಂತಹ ವ್ಯವಸ್ಥೆಇಲ್ಲದಿರುವುದರಿಂದ ಬೇಡಿಕೆಪೂರೈಕೆಗೆ ತೊಂದರೆಯಾಗುತ್ತಿದೆ.

ಆರೋಗ್ಯಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳಾಗಿವೆ.ಅಂಗಾಂಗಗಳಕಸಿಯಂತಹ ಅತ್ಯಾಧುನಿಕ ಚಿಕಿತ್ಸಾವಿಧಾನಗಳು ಹಲವು ಜೀವಗಳನ್ನುಉಳಿಸುತ್ತಿವೆ.ಆದರೆ ಮನುಷ್ಯನಬದುಕಿನ ಹಿಂದಿನ ಚೈತನ್ಯ ಶಕ್ತಿಯಾಗಿರುವರಕ್ತವನ್ನು ಮಾತ್ರ ಕೃತಕವಾಗಿಉತ್ಪಾದಿಸಲು ಸಾಧ್ಯವಿಲ್ಲ.ಆದ ಕಾರಣ ಅಗತ್ಯವಿರುವರಕ್ತವನ್ನು ಇತರೆ ದಾನಿಗಳೇನೀಡಬೇಕು.

ಅಪಘಾತ,ಶಸ್ತ್ರಚಿಕಿತ್ಸೆ,ಹೆರಿಗೆ ಸಂದರ್ಭ,ಕ್ಯಾನ್ಸರ್,ರಕ್ತಹೀನತೆಮತ್ತಿತರ ವೈದ್ಯಕೀಯ ತುರ್ತುಪರಿಸ್ಥಿತಿಗಳಲ್ಲಿ ಜೀವ ಉಳಿಸುವಪ್ರಮುಖ ವಸ್ತು ರಕ್ತ.ಒಬ್ಬ ವ್ಯಕ್ತಿಯಸ್ವಯಂಪ್ರೇರಿತ ರಕ್ತದಾನ ಮತ್ತೊಬ್ಬರಜೀವವನ್ನು ಉಳಿಸಬಲ್ಲದು.ಈ ಕಾರಣಕ್ಕಾಗಿಯೇರಕ್ತದಾನವನ್ನು ಮಹಾದಾನಎನ್ನಲಾಗುತ್ತದೆ.ಸುರಕ್ಷಿತರಕ್ತದಾನದ ಮಹತ್ವದ ಕುರಿತುಜನರಲ್ಲಿ ಅರಿವು ಮೂಡಿಸುವುದುಹಾಗೂ ಸ್ವಯಂಪ್ರೇರಿತ ರಕ್ತದಾನಿಗಳನ್ನುಗೌರವಿಸುವುದು ಈ ದಿನದ ಮುಖ್ಯಉದ್ದೇಶ.

ಆಸ್ಟ್ರಿಯಾದಕಾರ್ಲ್ ಲ್ಯಾಂಡ್‌ಸ್ಟೈನರ್ ಎಂಬವಿಜ್ಞಾನಿ 1901ರಲ್ಲಿ ರಕ್ತದ ಗುಂಪುಗಳ ಕುರಿತು ನಡೆಸಿದಸಂಶೋಧನೆಗೆ 1930ರಲ್ಲಿನೊಬೆಲ್ ಪ್ರಶಸ್ತಿ ಲಭಿಸಿತು.ಈತನ ಜನ್ಮದಿನವಾದಜೂ.14ನ್ನುವಿಶ್ವ ಆರೋಗ್ಯ ಸಂಸ್ಥೆ ಹಾಗೂಮತ್ತಿತರ ಜಾಗತಿಕ ಆರೋಗ್ಯ ಸಂಸ್ಥೆಗಳುಸೇರಿ 2004ರಿಂದವಿಶ್ವ ರಕ್ತದಾನಿಗಳ ದಿನವಾಗಿಆಚರಿಸಲು ಆರಂಭಿಸಿದವು.2005ರಲ್ಲಿ ವಿಶ್ವಆರೋಗ್ಯ ಸಭೆಯು ಇದನ್ನು ಅಧಿಕೃತಗೊಳಿಸಿದೆ.

ರಕ್ತದಾನದಬಗ್ಗೆ ತಪ್ಪು ಕಲ್ಪನೆ:

ರಕ್ತದಾನದಿಂದದೇಹ ದುರ್ಬಲವಾಗುತ್ತದೆ,ಆರೋಗ್ಯ ಹದಗೆಡುತ್ತದೆಇತ್ಯಾದಿ ತಪ್ಪು ಕಲ್ಪನೆ ಇದೆ. ಆದರೆ ವೈದ್ಯಕೀಯತಜ್ಞರ ಪ್ರಕಾರ ಆರೋಗ್ಯವಂತವ್ಯಕ್ತಿಗಳು ಪುರುಷರು 3ತಿಂಗಳಿಗೊಮ್ಮೆ,ಮಹಿಳೆಯರು 6ತಿಂಗಳಿಗೊಮ್ಮೆರಕ್ತದಾನ ಮಾಡಬಹುದು.ಕೆಲವೇ ವಾರಗಳಲ್ಲಿದೇಹವು ಅಗತ್ಯ ರಕ್ತದ ಕಣಗಳನ್ನುಮರು ಉತ್ಪಾದಿಸುತ್ತದೆ.

ರಕ್ತದಾನವುಕೇವಲ ಇತರರ ಜೀವ ಉಳಿಸುವುದಷ್ಟೇಅಲ್ಲದೆ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ.ರಕ್ತದಾನದಸಂದರ್ಭದಲ್ಲಿ ಆರೋಗ್ಯ ತಪಾಸಣೆಮಾಡುವುದರಿಂದ ದಾನಿಯ ಆರೋಗ್ಯದಸ್ಥಿತಿಯ ಕುರಿತು ಪ್ರಾಥಮಿಕಮಾಹಿತಿಯೂ ದೊರೆಯುತ್ತದೆ.ರಕ್ತಕ್ಕೆ ಪರ್ಯಾಯಯಾವುದೂ ಇಲ್ಲದಿರುವುದರಿಂದಮತ್ತೊಬ್ಬ ಆರೋಗ್ಯವಂತ ವ್ಯಕ್ತಿಯಿಂದಲೇರಕ್ತ ದೊರೆಯಬೇಕು.ವ್ಯಕ್ತಿಯೊಬ್ಬನಬಳಿ ಹಣ, ಆಸ್ತಿ,ಹತ್ತಿರದ ಸಂಬಂಧಿಗಳುಎಷ್ಟೇ ಇದ್ದರೂ ತುರ್ತು ಸಂದರ್ಭದಲ್ಲಿಉಪಯೋಗಕ್ಕೆ ಬರುವುದಿಲ್ಲ.ಅಗತ್ಯ ಇರುವವ್ಯಕ್ತಿಗೆ ಸರಿಹೊಂದುವ ಮೂರನೇವ್ಯಕ್ತಿ ಮಾಡುವ ರಕ್ತದಾನದಿಂದಮಾತ್ರ ಆತನ ಜೀವ ಉಳಿಸಲು ಸಾಧ್ಯ.

ಒಬ್ಬವ್ಯಕ್ತಿ ನೀಡುವ ಒಂದು ಯೂನಿಟ್ರಕ್ತವನ್ನು ಕೆಂಪು ರಕ್ತಕಣಗಳು,ಪ್ಲಾಸ್ಮಾ ಹಾಗೂಪ್ಲೇಟ್‌ಲೆಟ್‌ಗಳಾಗಿ ವಿಭಜಿಸಿಮೂರು ವಿಭಿನ್ನ ರೋಗಿಗಳಿಗೆಬಳಸಬಹುದು.ಹೀಗಾಗಿ ಒಬ್ಬದಾನಿ ಮೂರು ಜೀವಗಳನ್ನು ಉಳಿಸುವಸಾಮರ್ಥ್ಯ ಹೊಂದಿರುತ್ತಾನೆ.

ಯುವಕರಲ್ಲಿಜಾಗೃತಿ ಅಗತ್ಯ

ದೇಶದಯುವ ಸಮುದಾಯ ರಕ್ತದಾನದ ಅಭಿಯಾನದಲ್ಲಿಹೆಚ್ಚು ಸಕ್ರಿಯವಾಗಿ ಭಾಗವಹಿಸಿದರೆರಕ್ತದ ಕೊರತೆಯನ್ನು ಬಹುತೇಕನಿವಾರಿಸಬಹುದು.ಕಾಲೇಜುಗಳು,ವಿವಿಧ ಸಂಸ್ಥೆಗಳು,ಸಾಮಾಜಿಕ ಸಂಘಟನೆಗಳುನಿರಂತರವಾಗಿ ಈ ಬಗ್ಗೆ ಜಾಗೃತಿಮೂಡಿಸಿ ರಕ್ತದಾನ ಮಾಡಲು ಉತ್ತೇಜನನೀಡಬೇಕು.

ಭಾರತದಲ್ಲಿಪ್ರತಿ ವರ್ಷ ಲಕ್ಷಾಂತರ ಯೂನಿಟ್ರಕ್ತದ ಅವಶ್ಯಕತೆ ಇದೆ.ನಗರ ಪ್ರದೇಶಗಳಲ್ಲಿರಕ್ತದಾನ ಶಿಬಿರಗಳು ಹೆಚ್ಚಾಗಿದ್ದರೂಗ್ರಾಮೀಣ ಭಾಗಗಳಲ್ಲಿ ಅಷ್ಟಿಲ್ಲ.ಅನೇಕ ತುರ್ತುಸಂದರ್ಭಗಳಲ್ಲಿ ಸೂಕ್ತ ರಕ್ತದಗುಂಪು ದೊರೆಯದೇ ಜೀವಹಾನಿಯಾದಉದಾಹರಣೆಗಳಿವೆ.ಪ್ರತಿಯೊಬ್ಬಆರೋಗ್ಯವಂತ ನಾಗರಿಕನೂ ಸ್ವಯಂಪ್ರೇರಿತವಾಗಿರಕ್ತದಾನ ಮಾಡುವ ಮೂಲಕ ಮಾನವೀಯತೆಮೆರೆಯಬೇಕು.

ಅತಿಹೆಚ್ಚುರಕ್ತದಾನ ಮಾಡಿದ ದಾಖಲೆ

ಜೀವನದಲ್ಲಿಒಂದೋ ಎರಡೋ ಬಾರಿ ರಕ್ತದಾನ ಮಾಡುವುದುಸಾಮಾನ್ಯ. ಅಥವಾವರ್ಷಕ್ಕೆ ಒಮ್ಮೆ ರಕ್ತದಾನಮಾಡುವವರು ಇದ್ದಾರೆ.ಆದರೆ ತಮ್ಮ 57ನೇವಯಸ್ಸಿನವರೆಗೆ 163ಬಾರಿ ರಕ್ತದಾನವನ್ನುಮಾಡಿ ದಾಖಲೆ ಮಾಡಿದ ಮಹಾದಾನಿಬೆಂಗಳೂರಿನ ಜಿ.ವೆಂಕಟೇಶ್ವರಪ್ರಸಾದ್. ತಮ್ಮ17 ವಯಸ್ಸಿನಲ್ಲೇರಕ್ತದಾನ ಮಾಡಲು ಆರಂಭಿಸಿದವೆಂಕಟೇಶ್ವರ ಅವರ ಸೇವೆಯನ್ನುಗುರುತಿಸಿ ಕರ್ನಾಟಕ ಸರ್ಕಾರ2017ರಲ್ಲಿ‘ಜೀವ ರಕ್ಷಕ’ ಎಂಬ ಪ್ರಶಸ್ತಿನೀಡಿ ಗೌರವಿಸಿದೆ.ನಿಮ್ಹಾನ್ಸ್ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲೇಹೆಚ್ಚು ರಕ್ತದಾನ ಮಾಡಿರುವುದುಇವರ ವಿಶೇಷ.ವೆಂಕಟೇಶ್ವರಅವರ ಪ್ರಕಾರ ಜನರಲ್ಲಿ ರಕ್ತದಾನದಬಗ್ಗೆ ಅರಿವಿನ ಕೊರತೆ ಇದ್ದು,ರಕ್ತದಾನಮಾಡಿದವರಿಗೆ ಹಲವು ಆರೋಗ್ಯದಲಾಭಗಳಿವೆ ಎನ್ನುತ್ತಾರೆ.ರಕ್ತದಾನದಪ್ರಯೋಜನ ಮತ್ತು ಅವಶ್ಯಕತೆ ಕುರಿತುಈವರೆಗೆ 125ಶಾಲಾ-ಕಾಲೇಜುಗಳಲ್ಲಿಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.ಕರ್ನಾಟಕ ಕ್ಯಾನ್ಸರ್ಸೊಸೈಟಿ, ರೆಡ್‌ಕ್ರಾಸ್ಮತ್ತಿತರ ಆರೋಗ್ಯ ಸಂಬಂಧಿ ಸಂಸ್ಥೆಗಳಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರತಿ 2 ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆಯಿದೆ. ಅದನ್ನು ಮೌನವಾಗಿ ಪೂರೈಸುತ್ತಿರುವ ಸ್ವಯಂಸೇವಕ ರಕ್ತದಾನಿಗಳಿಗೆ ಅಭಿನಂದನೆಗಳು. ದಾನಿಗಳ 15 ನಿಮಿಷಗಳ ಕೊಡುಗೆ ಒಬ್ಬರ ಜೀವನವನ್ನು ಉಳಿಸುತ್ತಿದೆ. ಆದ್ದರಿಂದ ನಿಯಮಿತವಾಗಿ ರಕ್ತದಾನ ಮಾಡಿ, ನೈಜ ಹೀರೋಗಳಾಗಿ. — ಡಾ.ಕುಮಾರ್‌ವಿ.ಎಲ್.ಎಸ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಬೆಂಗಳೂರು

ಯುವಕರು ತಮ್ಮ ಜನ್ಮದಿನವನ್ನು ಅರ್ಥಹೀನವಾಗಿ ಆಚರಿಸುವ ಬದಲು ರಕ್ತದಾನದ ಮೂಲಕ ಅರ್ಥಪೂರ್ಣಗೊಳಿಸಿಕೊಳ್ಳಬಹುದು. ನಮ್ಮ ಜನ್ಮದಿನ ಇನ್ನೊಬ್ಬರ ಜೀವ ಉಳಿಸುವುದು ಸಾರ್ಥಕತೆಯ ಮೂಡಿಸುತ್ತದೆ. ನಾನು ಕಳೆದ ಹಲವು ವರ್ಷಗಳಿಂದ ತಪ್ಪದೇ ಜನ್ಮದಿನದಂದು ರಕ್ತದಾನವನ್ನು ಮಾಡುತ್ತಿದ್ದೇನೆ.

— ಪ್ರಲಾಪ್, ಖಾಸಗಿ ಕಂಪನಿ ಯುವ ಉದ್ಯೋಗಿ