ವಡಗೇರಾ ತಾಲೂಕಿನ ಕೊಂಕಲ್ ಗ್ರಾಪಂ ವ್ಯಾಪ್ತಿಯ ಕುರಿಹಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಖಾಲಿ ಕೊಡ ಹಿಡಿದು ಕೊಳವೆಬಾವಿ ಎದುರು ಪ್ರತಿಭಟಿಸಿದರು.
ವಡಗೇರಾ: ತಾಲೂಕಿನ ಕೊಂಕಲ್ ಗ್ರಾಪಂ ವ್ಯಾಪ್ತಿಯ ಕುರಿಹಾಳ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ರಾಜ್ಯ ರೈತ ಸಂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥರಡ್ಡಿ ಚನ್ನೂರ ಆಗ್ರಹಿಸಿದ್ದಾರೆ.
ಪ್ರತಿನಿತ್ಯ ಗ್ರಾಮಸ್ಥರು ಹನಿ ನೀರಿಗೂ ಪರದಾಡುವಂತ ಸ್ಥಿತಿ ಎದುರಾಗಿದ್ದು, ನೀರಿಗಾಗಿ ನಿತ್ಯ 2 ಕಿಮೀ ದೂರ ನಡೆದುಕೊಂಡು ಹೋಗಿ ತರುವಂತಾಗಿದೆ. ಹೀಗಾಗಿ ಕೂಡಲೇ ಗ್ರಾಮದಲ್ಲಿ ಉಲ್ಬಣಿಸಿದ ನೀರಿನ ಸಮಸ್ಯೆಯನ್ನು ಶ್ರೀ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಕುಡಿಯುವ ನೀರು ಅಷ್ಟೇ ಅಲ್ಲ ದಿನಬಳಕೆಯ ನೀರಿಗೂ ಸಹ ತೀವ್ರ ತೊಂದರೆಯಾಗಿದೆ. ್ರಾಮದಲ್ಲಿನ ಹಳೆಯ ಬಾವಿಯಲ್ಲಿನ ನೀರು ಅಸ್ವಚ್ಛತೆಯಿಂದ ಕೂಡಿದ್ದು ಚರಂಡಿ ನೀರಿನಂತಾದ ನೀರು ದಿನಬಳಕೆ ಹಾಗೂ ಜಾನುವಾರುಗಳಿಗೆ ಕುಡಿಯಲು ಬಳಸುತ್ತಿದ್ದಾರೆ. ಇನ್ನು ಕುಡಿಯುವ ನೀರು ತರಲು ಗ್ರಾಮದ ಹತ್ತಿರದ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗೆ ಹೋಗಿ ತರಬೇಕಾದ ಅನಿವಾರ್ಯ ಎದುರಾಗಿದೆ. ಈ ಕುರಿತು ಗ್ರಾಪಂ ಪಿಡಿಒ ಅವರಿಗೆ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸರ್ಕಾರ ನೀರಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತದೆ. ಆದರೆ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಹಣವು ನೀರಿನಂತೆ ಪೊಲಾಗಿದೆ. ಆದರೆ ನೀರೆ ಬರುತ್ತಿಲ್ಲ ಬಿರು ಬಿಸಿಲಿನ ನಡುವೆ ನೀರಿನ ಸಮಸ್ಯೆ ಎದುರಾಗಿದ್ದು, ಹನಿ ನೀರಿಗೂ ಅಲೆದಾಟ ತಪ್ಪುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಕೂಡಲೇ ಬಗೆಹರಿಸದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಗ್ರಾಮ ಪಂಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.