Solve the teacher's problem 
ರಾಜ್ಯ

ಶಿಕ್ಷಕರ ಸಮಸ್ಯೆ ಪರಿಹರಿಸಿ

ಕೋಲಾರ ಡೆಸ್ಕ್
ಮುಳಬಾಗಿಲು: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಂದ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಕೆ.ವಿ.ಜಗನ್ನಾಥ ಮಾತನಾಡಿ, ಕೆಜಿಐಡಿ ಸಾಲ ಮಾಡಲು ಶಿಕ್ಷಕರಿಗೆ ಸಮಸ್ಯೆ ಎದುರಾಗುತ್ತಿವೆ. ಮುಖ್ಯಶಿಕ್ಷಕರು ಬಿಸಿ ಊಟ ನಿರ್ವಹಿಸುವುದು ಕಷ್ಟವಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದರಲ್ಲಿ ತೊಂದರೆಯಾಗುತ್ತಿದೆ. ಮೊಟ್ಟೆ ದರ ಹೆಚ್ಚಾಗಿದ್ದು, ಕೂಡಲೇ ಅಧಿಕಾರಿಗಳು ಮಾರುಕಟ್ಟೆ ದರಕ್ಕನುಗುಣವಾಗಿ ಅನುದಾನ ನೀಡವಂತೆ ಸರ್ಕಾರದ ಗಮನಕ್ಕೆ ತರಲು ಮನವಿ ಮಾಡಿದರು.
ಎಚ್​ಆರ್​ಎಂಎಸ್​ ತಂತ್ರಾಂಶದಲ್ಲಿ ಶಿಕ್ಷಕರ ಜನ್ಮದಿನಾಂಕ, ಹೆಸರು ಬಹಷ್ಟು ತಪ್ಪುಗಳು ಕಂಡುಬಂದಿರುತ್ತಿದ್ದು, ಕೂಡಲೇ ಪರಿಹರಿಸಬೇಕು. ಎನ್​ಪಿಎಸ್​ ನೌಕರರನ್ನು ಒಪಿಎಸ್​ ಆಗಿ ಜಾರಿ ಮಾಡುವುದು ಸೇರಿ ವಿವಿಧ ಬೇಡಿಕೆ ಮಂಡಿಸಿ ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಅಧ್ಯಕ್ಷರು ಕೂಡಲೇ ಸಮಸ್ಯೆ ಪರಿಹರಿಸುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವ ಭರವಸೆ ನೀಡಿದರು. ನೂತನವಾಗಿ ಆಯ್ಕೆಯಾದ ರಾಜ್ಯಾಧ್ಯಕ್ಷರನ್ನು ತಾಲೂಕು ಸಂಘದಿಂದ ಗೌರವಿಸಲಾಯಿತು.
ರಾಜ್ಯ ಸಹಕಾರ್ಯದರ್ಶಿ ಪ್ರಮೀಳಾ ಕಾಮನಹಳ್ಳಿ, ಕೆಜಿಎಫ್​ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ,ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಅಪ್ಪೇಗೌಡ, ಮಾಜಿ ಖಜಾಂಚಿ ರೆಡ್ಡಪ್ಪ, ಮಾಜಿ ಶಿಕ್ಷಕರ ಸಂಘದ ಅಧ್ಯಕ್ಷ ಆವಣಿ ಆನಂದ್​, ತಾಲೂಕು ಎಸ್​ಸಿ/ಎಸ್​ಟಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಸಿ.ರಘುನಾಥ್​, ಎನ್​ಪಿಎಸ್​ ನೌಕರರ ಸಂಘದ ಅಧ್ಯಕ್ಷ ಸುಬ್ರಮಣಿರೆಡ್ಡಿ , ಬಿಇಒ ಕಚೇರಿ ಸಹಾಯಕ ಸುರೇಶ್​, ಖಜಾಂಚಿ ಸೋಮಶೇಖರ್​, ಗೌರವಾಧ್ಯಕ್ಷ ಕೆ.ಬಿ.ನಾಗರಾಜ್​, ಸಿಆರ್​ಪಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಇದ್ದರು.