ಕೆಂಭಾವಿ ಪಟ್ಟಣದ ವಾರ್ಡ್ 3ರಲ್ಲಿ ವಿದ್ಯುತ್ ಪದೇಪದೆ ಕಾಡುತ್ತಿದ್ದು, ಕೂಡಲೇ ಈ ಸಮಸ್ಯೆ ನೀಗಿಸಿ ನಿವಾಸಿಗಳಿಗೆ ಸಮಸ್ಯೆ ಪರಿಹರಿಸುವಂತೆ ಪುರಸಭೆ ಸದಸ್ಯ ರವಿ ಸೊನ್ನದ ಜೆಸ್ಕಾಂ ಎಇಇ ರಾಜಶೇಖರ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಆರ್ೀ ಹುಸೇನ್ ಖಾಜಿ ಇದ್ದರು.
ಕೆಂಭಾವಿ: ಪಟ್ಟಣದ ವಾರ್ಡ್ 3ರಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ಈ ಸಮಸ್ಯೆಯನ್ನು ಪರಿಹರಿಸುವಂತೆ ಪುರಸಭೆ ಸದಸ್ಯ ರವಿ ಸೊನ್ನದ ಆಗ್ರಹಿಸಿದ್ದಾರೆ.
ಗುರುವಾರ ಈ ಕುರಿತು ಜೆಸ್ಕಾಂ ಎಇಇ ರಾಜಶೇಖರ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಅವರು, ವಾರ್ಡ್ನಲ್ಲಿ ಈಗಿರುವ 63ಕೆವಿ ಟಿಸಿಯಿಂದ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು ಮಳೆ ಗಾಳಿಗೆ ಮೇಲಿಂದ ಮೇಲೆ ಲೋಡ್ ಹೆಚ್ಚಾಗಿ ಟಿಸಿ ಸುಡುತ್ತಿದೆ. ಈ ವಾರ್ಡ್ಗಳ ಕಡೆಯ ಮನೆಗಳಿಗೆ ಸರಿಯಾದ ವಿದ್ಯುತ್ ಸರಬರಾಜಗಾದೆ ಚಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಈಗಿರುವ 63 ಕೆವಿ ಟಿಸಿ ಬದಲಾಯಿಸಿ 100 ಕೆವಿ ಟಿಸಿ ಅಳವಡಿಸಬೇಕು. ಮತ್ತು ಕೊನೆಯ ಹಂತದ ಮನೆಗಳಿಗೆ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್ ತಲುಪಬೇಕಾದರೆ ವಿದ್ಯುತ್ ಕಂಬಗಳ ಅಗತ್ಯವಿದ್ದು, ಕೂಡಲೇ ಐದು ಕಂಬಗಳನ್ನು ಇಲಾಖೆಯಿಂದ ಅಳವಡಿಸಬೇಕು ಎಂದು ಅವರು ಕೋರಿದ್ದಾರೆ. ಪುರಸಭೆ ಸದಸ್ಯ ಆರೀಫ್ ಹುಸೇನ್ ಖಾಜಿ ಇದ್ದರು.