ಚಾಮರಾಜನಗರ ತಾಲೂಕಿನ ಯಾನಗಹಳ್ಳಿ ಗ್ರಾಮದಲ್ಲಿ ಬೆಳ್ಳಯ್ಯ ಅವರ ಮನೆಯ ಗೋಡೆ ಕುಸಿದಿರುವುದು 
ರಾಜ್ಯ

ಮಳೆಗೆ ಮನೆ ಗೋಡೆ ಕುಸಿತ ಸಿಗದ ಪರಿಹಾರ

ಬಾಲಮುರಳಿಕೃಷ್ಣ
ಚಾಮರಾಜನಗರ: ತಾಲೂಕಿನ ಯಾನಗಹಳ್ಳಿ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಮಳೆಗೆ ಬೆಳ್ಳಯ್ಯ ಅವರ ಮನೆ ಗೋಡೆ ಕುಸಿದಿದ್ದು, ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಳ್ಳಯ್ಯ ಅವರ ಮೊಮ್ಮಗ ವಿನೋದ್ ವಿಜಯವಾಣಿಯೊಂದಿಗೆ ಮಾತನಾಡಿ, ಎರಡು ತಿಂಗಳ ಹಿಂದೆ ಮಳೆ ಬಂದು ಮನೆಯ ಗೋಡೆ ಕುಸಿಯಿತು. ಮನೆಯಲ್ಲಿ ಯಾರೂ ಇಲ್ಲದಿದ್ದ ಕಾರಣ ಪ್ರಾಣಾಪಾಯ ಸಂಭವಿಸಲಿಲ್ಲ. ಅರಕಲವಾಡಿ ಗ್ರಾಮ ಪಂಚಾಯಿತಿಗೆ ಪರಿಹಾರಕ್ಕಾಗಿ ಕೋರಿ ಮನವಿ ಸಲ್ಲಿಸಲಾಗಿತ್ತು. ವಿಎ ಜಯರಾಂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿಕೊಂಡು ಹೋದರು. ಬಳಿಕ ಮತ್ತೆ ಯಾರಿಂದಲೂ ಪ್ರತಿಕ್ರಿಯೆ ದೊರೆಯುತ್ತಿಲ್ಲ. ಕೇಳಿದರೆ ಪರಿಹಾರಕ್ಕಾಗಿ ಕಾಯಿರಿ ಸಿಗುತ್ತದೆ ಎಂದು ಅಸಡ್ಡೆಯ ಮಾತುಗಳನ್ನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಪರಿಹಾರ ದೊರಕಿಸಿಕೊಡಬೇಕೆಂದು ಕೋರಿದ್ದಾರೆ.