ಸೋಲಾಪುರ: ಮಧ್ಯ ರೈಲ್ವೆಯ ಸೋಲಾಪುರ ವಿಭಾಗವು 2025–26ರ ಹಣಕಾಸು ವರ್ಷದಲ್ಲಿ ಶ್ಲಾಘನೀಯ ಕಾರ್ಯಕ್ಷಮತೆಯನ್ನು ದಾಖಲಿಸಿದೆ. ಪ್ರಯಾಣಿಕರ ದಟ್ಟಣೆ, ಸರಕು ಸಾಗಣೆ ಕಾರ್ಯಾಚರಣೆಗಳು ಮತ್ತು ಶುಲ್ಕೇತರ ಆದಾಯ ಉತ್ಪಾದನೆ ಸೇರಿದಂತೆ ಪ್ರಮುಖ ವಲಯಗಳಲ್ಲಿ ಸ್ಥಿರವಾದ ಬೆಳೆವಣಿಗೆಯನ್ನು ದಾಖಲಿಸಿದೆ. ಇದಲ್ಲದೆ ಪ್ರಯಾಣಿಕರ ಸೇವೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದನ್ನು ಸಹ ಮುಂದುವರೆಸಿದೆ ಎಂದು ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಗಳು ತಿಳಿಸಿದೆ.
ವಿಭಾಗವು 894.61 ಕೋಟಿ ರೂ.ಗಳ ಒಟ್ಟು ಮೂಲ ಆದಾಯವನ್ನು ಸಾಧಿಸಿದೆ, ಇದು ಹಿಂದಿನ ವರ್ಷಕ್ಕಿಂತ ಶೇ.6.85ರಷ್ಟು ಹೆಚ್ಚಳವಾಗಿದೆ. ಪ್ರಯಾಣಿಕರ ಆದಾಯ 407.95 ಕೋಟಿ ರೂಪಾಯಿ ಇದೆ. ಸರಕು ಸಾಗಣೆ ಆದಾಯ 448.18 ಕೋಟಿ ರೂಪಾಯಿಗೆ ಗಳನ್ನು ತಲುಪಿದೆ.
ಸೋಲಾಪುರ ವಿಭಾಗವು ಪ್ರಯಾಣಿಕರ ದಟ್ಟಣೆಯಲ್ಲಿ ಗಮನಾರ್ಹ ಏರಿಕೆ ಕಂಡಿದೆ. 1.99 ಕೋಟಿಗಿಂತ ಹೆಚ್ಚಿನ ಪ್ರಯಾಣಿಕರು ಪ್ರವಾಸ ಮಾಡಿದ್ದಾರೆ. ಸೋಲಾಪುರ ವಿಭಾಗವು ತನ್ನ ಸರಕು ಸಾಗಣೆ ಬಂಡವಾಳವನ್ನು ಬಲಪಡಿಸುವುದನ್ನು ಮುಂದುವರೆಸಿದೆ. ಹೆಚ್ಚುತ್ತಿರುವ ಲೋಡಿಂಗ್‌ನಲ್ಲಿ ಭಾರತೀಯ ರೈಲ್ವೆಯಲ್ಲಿ 5 ನೇ ಸ್ಥಾನದಲ್ಲಿದೆ.
ಅಮೃತ ಭಾರತ್ (ಎಬಿಎಸ್‌ಎಸ್)ಅಡಿಯಲ್ಲಿ ಸೋಲಾಪುರ ವಿಭಾಗದಲ್ಲಿ ಸೋಲಾಪುರ, ಕಲಬುರಗಿ, ಲಾತೂರ್, ಕುರುಡುವಡಿ, ಜೇರ್, ಧರಶಿವ, ಪಂಢರಪುರ, ದುಧನಿ, ಗಾಣಗಾಪುರ ರಸ್ತೆ, ಶಹಾಬಾದ್, ವಾಡಿ ಮತ್ತು ಅಕ್ಕಲಕೋಟ ರಸ್ತೆ ಮುಂತಾದ ಒಟ್ಟು 12 ನಿಲ್ದಾಣಗಳ ಕಾಮಗಾರಿಗಳಿಗೆ ಸುಮಾರು ₹330 ಕೋಟಿ ರೂ. ಮಂಜೂರಾಗಿದೆ. ಈ 12 ನಿಲ್ದಾಣಗಳಿಗೆ ABSS ನ ಎರಡನೇ ಹಂತವನ್ನು ಸಹ ಪ್ರಧಾನ ಕಚೇರಿಯಿಂದ ಮಂಜೂರು ಮಾಡಲಾಗಿದೆ
ಸೋಲಾಪುರ ವಿಭಾಗದ ವ್ಯಾಪ್ತಿಯ ರೈಲು ನಿಲ್ದಾಣಗಳಲ್ಲಿ
ಹಲವಾರು ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.