Soil was dug from the lake without permission.
ಅನುಮತಿ ಪಡೆದು ಕೆರೆಯಿಂದ ಮಣ್ಣು ಅಗೆತ
ಕುಣಿಗಲ್ : ರೈತರು ಮತ್ತು ಪರಿಸರಕ್ಕೆ ಹಾನಿಯಾಗದಂತೆ ಕಾನೂನು ನಿಯಮ ಪಾಲಿಸುವ ಮೂಲಕ ಕಿತ್ನಾಮಂಗಲ ಕೆರೆಯ ಮಣ್ಣು ಇಟ್ಟಿಗೆ ಉತ್ಪಾದನೆಗೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಕೆರೆಯ ಮಣ್ಣನ್ನು ಎತ್ತಿ ಮಾರಾಟ ಮಾಡುತ್ತಿದೆ ಎಂಬ ಆರೋಪಕ್ಕೊಳಗಾದ ಖಾಸಗಿ ಕಂಪನಿಯ ಜನರಲ್ ಮ್ಯಾನೇಜರ್ ಹೇಮಂತ್ಕುಮಾರ್ ತಿಳಿಸಿದರು.
ತಾಲೂಕಿನ ಅಂಚೇಪಾಳ್ಯದ ಕಾರ್ಖಾನೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಣಿಗಲ್ನಲ್ಲಿ 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ್ಸಿಂಗ್ ಹಾಗೂ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಹಕಾರ ಮತ್ತು ಅನುಮತಿಯಿಂದ ಕಾರ್ಖಾನೆ ಸ್ಥಾಪನೆ ಮಾಡಲಾಗಿತ್ತು, ಪರಿಸರ ಸ್ನೇಹಿ ಮತ್ತು ಶಕ್ತಿ ಉಳಿತಾಯ ಮಾಡುವ ಹಸಿರು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಕಂಪನಿ ಉತ್ಪಾದಿಸುತ್ತಿದೆ. ಕಾರ್ಖಾನೆ ಪ್ರಾರಂಭಿಸಿದ ಉದ್ದೇಶ ಸ್ಥಳಿಯರಿಗೆ ಉದ್ಯೋಗ ಅವಕಾಶ ಸೃಷ್ಟಿಸುವುದು ಮತ್ತು ಪ್ರದೇಶದ ಕೆರೆಗಳ ಹೂಳು ತೆಗೆಯುವ ಕಾರ್ಯದ ಮೂಲಕ ಜಲಾಶಯಗಳನ್ನು ಪುನಶ್ಚೇತನ ಗೊಳಿಸುವುದೇ ಆಗಿದೆ ಎಂದರು.
ಸ್ಥಳಿಯ ಕೆರೆಗಳ ಡಿಸಿಲ್ಟಿಂಗ್ ಮೂಲಕ ಪಡೆಯುವ ಮಣ್ಣನ್ನು ಮುಖ್ಯ ಕಚ್ಛಾ ವಸ್ತುವಾಗಿ ಬಳಸಲಾಗುತ್ತಿದೆ. ಇದರಿಂದ ಕೆರೆಗಳ ಹೂಳು ತೆರವು ಹಾಗೂ ಪುನಶ್ಚೇತನದಿಂದ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಳದ ಜತೆಗೆ ದೀರ್ಕಾಲದ ಜಲ ಸಂರಣೆ ಮಾಡಲಾಗುತ್ತಿದೆ ಎಂದರು.
ಕುಣಿಗಲ್ ತಾಲೂಕಿನ ಕಿತ್ನಾಮಂಗಲ ಕೆರೆಯಿಂದ ಡಿಸಿಲ್ಟಿಂಗ್ ಮಣ್ಣು ತೆಗೆಯಲು ಗಣಿ ಮತ್ತು ಭೂ ವಿಾನ ಇಲಾಖೆಯಿಂದ ಅಗತ್ಯ ಎಲ್ಲ ಅನುಮತಿಗಳನ್ನು ಪಡೆಯಲಾಗಿದೆ. ಸರ್ಕಾರದಿಂದ ಅನುಮತಿ ಪಡೆದ ಗುತ್ತಿಗೆದಾರರಿಂದ ಕಂಪನಿಯು ಮಣ್ಣು ತೆಗೆದುಕೊಳ್ಳುತ್ತಿದೆ. ಮಳೆ ಇಲ್ಲದ ಅವಧಿಯಲ್ಲಿ ಮಾತ್ರ ಡಿಸಿಲ್ಟಿಂಗ್ ಕಾರ್ಯ ನಡೆಸಲಾಗುತ್ತಿದೆ ಎಂದರು. ಮ್ಯಾನೇಜರ್ ವಸಂತ್ ರೈ, ಕಾರ್ಖಾನೆಯ ರಮೇಶ್, ದಾಸೇಗೌಡ, ಕುಮಾರ್, ಅನಿಲ್, ಮಂಜುನಾಥ್, ಧನಂಜಯ್ಯ, ಸೋಮಶೇಖರ್, ಇಂದ್ರಮ್ಮ ಇದ್ದರು.