ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಬೃಹತ್ ಕಬ್ಬಿನ ಹಾರ ಹಾಕಿ ಸನ್ಮಾನಿಸಿದರು. ನೊಣವಿನಕೆರೆ ಗಂಗಾಧರ ಅಜ್ಜಯ್ಯ, ದೇವಗಿರಿ ಬಾಬಾ, ಪ್ರಭುಜಿ ಬೆನ್ನಾಳೆ ಮಹಾರಾಜರು, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಶಂಕರ ಕಿತ್ತೂರ ಇತರರಿದ್ದರು.
- ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆ
- ಗುಣಮಟ್ಟದ ಭೂಮಿ ಉಳಿಸುವುದು ನಮ್ಮ ಹೊಣೆ
ಜಮಖಂಡಿ: ಮುಂದಿನ ಪೀಳಿಗೆಗೆ ಲವತ್ತಾದ ಭೂಮಿ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ಲಾಸ್ಟಿಕ್ ಹಾಗೂ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಲವತ್ತತೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ಕುರಿತು ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಕೃಷ್ಣಾ ಆರತಿ ಹಾಗೂ ತಮ್ಮ 61ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣಿನ ಸಂರಕ್ಷಣೆ, ಪರಿಸರ ರಕ್ಷಣೆ ಹಾಗೂ ಗೋ ಸಂರಕ್ಷಣೆಯ ಅಗತ್ಯತೆ ಬಗ್ಗೆ ತಿಳಿಸಿದರು.
ಆರ್‌ಎಸ್‌ಎಸ್ ಪ್ರಮುಖ ಅರವಿಂದರಾವ ದೇಶಪಾಂಡೆ ಅವರು ಹೆಚ್ಚಿನ ಸಮಯವನ್ನು ಸಮಾಜ ಸೇವೆಗೆ ಮೀಸಲಿಡುವಂತೆ ನೀಡಿದ ಸಲಹೆಯನ್ನು ಸ್ಮರಿಸಿದ ನಿರಾಣಿ, ಅವರ ಮಾತಿನಂತೆ ತಮ್ಮ ಉದ್ಯೋಗ ಹಾಗೂ ಇತರ ಜವಾಬ್ದಾರಿಗಳನ್ನು ಸಂಗಮೇಶ ನಿರಾಣಿ, ವಿಜಯ ಹಾಗೂ ವಿಶಾಲ ಅವರು ನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿ, ತಾವು ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದರು.
ಪಶು ಸಂಪತ್ತಿನ ಸಂಖ್ಯೆ ಹೆಚ್ಚಾಗಬೇಕು. ಗೋಮಾತೆ ಕೇವಲ ಚಿತ್ರಗಳಲ್ಲಿ ನೋಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಗೋ ಸಂತತಿಯನ್ನು ರಕ್ಷಿಸಿ, ಉಳಿಸಿ ಬೆಳೆಸುವ ಕಾರ್ಯಕ್ಕೆ ಸಮಾಜ ಮುಂದಾಗಬೇಕು ಎಂದು ಹೇಳಿದರು.
ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕಬ್ಬು, ಮೆಕ್ಕೆಜೋಳ ಹಾಗೂ ಅಕ್ಕಿಯಿಂದ ವಿವಿಧ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಕಾರ್ಯದಲ್ಲಿ ತಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ ಹಿಪ್ಪರಗಿಯ ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆಯಲ್ಲಿ ಪ್ಲಾಸ್ಟಿಕ್‌ಗೆ ಪರ್ಯಾಯ ಹಾಗೂ ಜೈವಿಕವಾಗಿ ವಿಘಟಿಸಬಹುದಾದ ಉತ್ಪನ್ನಗಳ ತಯಾರಿಕಾ ಘಟಕ ಆರಂಭವಾಗಲಿದೆ.
6 ಸಾವಿರ ಕೋಟಿ ರೂ. ಮೊತ್ತದ ಈ ಯೋಜನೆಯಿಂದ ಸಾವಿರಾರು ಜನರಿಗೆ ಉದ್ಯೋಗಾವಕಾಶ ಸಿಗುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ನೊಣವಿನಕೆರೆ ಗಂಗಾಧರ ಅಜ್ಜಯ್ಯ, ದೇವಗಿರಿ ಬಾಬಾ, ಪ್ರಭುಜಿ ಬೆನ್ನಾಳೆ ಮಹಾರಾಜರು, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಶಂಕರ ಕಿತ್ತೂರ ಸೇರಿ ಹಲವರು ಉಪಸ್ಥಿತರಿದ್ದರು. ಉದ್ಯಮಿ ಸಂಗಮೇಶ ನಿರಾಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಜಂಬಗಿ ನಿರೂಪಿಸಿದರು.
ಎಥೆನಾಲ್ ಬಳಕೆಯಿಂದ ದೇಶಕ್ಕೆ ಲಾಭ
ಎಥೆನಾಲ್ ಬಳಕೆಯಿಂದ ದೇಶದ ಪೆಟ್ರೋಲ್ ಬೆಲೆ ನಿಯಂತ್ರಣದಲ್ಲಿರಲು ಸಹಕಾರಿಯಾಗಿದೆ. ಇಲ್ಲದಿದ್ದರೆ ಪೆಟ್ರೋಲ್‌ಗಾಗಿ ಜನರು ಇನ್ನಷ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತಿತ್ತು. ಮುಂದಿನ ದಿನಗಳಲ್ಲಿ ಎಥೆನಾಲ್ ಆಧಾರಿತ ಇಂಜಿನ್‌ಗಳ ತಯಾರಿಕೆಗೆ ಸರ್ಕಾರ ಅನುಮತಿ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. 20 ವರ್ಷಗಳ ಹಿಂದೆ ತಾವು ಒಂದು ಪೆಟ್ರೋಲ್ ಬಂಕ್ ಪಡೆಯಲು ಅರ್ಜಿ ಸಲ್ಲಿಸಿದ್ದನ್ನು ಸ್ಮರಿಸಿದ ಅವರು, ಇಂದು ತಮ್ಮೆಲ್ಲರ ಸಹಕಾರ, ಆಶೀರ್ವಾದದಿಂದ ಸಾವಿರಾರು ಪೆಟ್ರೋಲ್ ಬಂಕ್‌ಗಳ ಪರವಾನಗಿ ನೀಡುವ ಶಕ್ತಿ ಪಡೆದುಕೊಂಡಿದ್ದೇನೆ. ಇದು ಜನರ ಪ್ರೀತಿ, ವಿಶ್ವಾಸ ಹಾಗೂ ಸಹಕಾರದ ಲವಾಗಿದೆ ಎಂದು ಹೇಳಿದರು.