‘ಜೈನ ಸಾಹಿತ್ಯ ಸಿರಿ’ 
ರಾಜ್ಯ

ಸಮಾಜವು ಬಾಹುಬಲಿಯ ಸಂದೇಶ ಪಾಲಿಸಬೇಕಿದೆ: ಡಾ. ಪದ್ಮಪ್ರಸಾದ್

ಪ್ರಮುಖ ಮುಖ್ಯಾಂಶಗಳು

  • ‘ಜೈನ ಸಾಹಿತ್ಯ ಸಿರಿ’ ತಿಂಗಳ ಉಪನ್ಯಾಸ
ಬೆಂಗಳೂರು: ಜಗತ್ತಿಗೆ ಶಾಂತಿಮ ಅಹಿಂಸೆ ಹಾಗೂ ಯುದ್ಧ ವಿರೋಧಿ ನೀತಿ ಸಾರುವ ಬಾಹುಬಲಿಯ ಸಂದೇಶವನ್ನು ಸಮಾಜ ಪಾಲಿಸಬೇಕಾದ ತುರ್ತು ಇದೆ ಎಂದು ಡಾ.ಪದ್ಮಪ್ರಸಾದ್ ಅಭಿಪ್ರಾಯಪಟ್ಟರು.
ಜೈನ ಮಿಲನ್, ಸೆಂಟ್ರಲ್ ಬೆಂಗಳೂರು ವತಿಯಿಂದ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜೈನ ಸಾಹಿತ್ಯ ಸಿರಿ’ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡದ ಜ್ಞಾನಕೋಶಕ್ಕೆ ಅದರಲ್ಲೂ ಜಂಪೂ ಶೈಲಿ ಹಾಗೂ ಸಾಂಗತ್ಯಕ್ಕೆ ಜೈನರ ಕೊಡುಗೆ ಅಪಾರ. ಆ ಸಾಂಗತ್ಯದಲ್ಲಿ ಚದುರ ಚಂದ್ರಮ ಅವರು ಗೊಮ್ಮಟ ಚರಿತ್ರೆ ರಚಿಸಿದ್ದಾರೆ. 17 ಸಂಧಿಗಳ ಈ ಕಾವ್ಯದಲ್ಲಿ ಕವಿ ಚದುರ ಚಂದ್ರಮ ಕಾರ್ಕಳದಲ್ಲಿ ಪಾಂಡ್ಯ ರಾಜ ಗೊಮ್ಮಟ ವಿಗ್ರಹ ಕೆತ್ತಿಸುವುದು. ನಂತರ 20 ಚಕ್ರಗಳ ಬಂಡಿಯಲ್ಲಿ ಸಾಗಿಸುವುದು ಇಮ್ಮಡಿ ಬೈರವ ರಾಜ ಬಾಹುಬಲಿಯನ್ನು ಮರು ಸ್ಥಾಪಿಸಿದ ವಿಚಾರವಿದೆ. ಈ ಕಾವ್ಯದಲ್ಲಿ ಇರುವ ಐತಿಹಾಸಿಕ ಘಟನೆಗಳು, ವ್ಯಕ್ತಿಗಳು ಕೂಡ ಇತಿಹಾಸ ವಿವರಗಳನ್ನು ಅತ್ಯಂತ ನಿಖರವಾಗಿ ತಿಳಿಸುತ್ತದೆ ಎಂದು ವಿವರಿಸಿದರು.
ಉದ್ಯಮಿ ರಾಜನ್ ಅನಂತರಾಜಯ್ಯ ಮಾತನಾಡಿ, ಸಾಹಿತ್ಯ ಸಿರಿ ಕಾರ್ಯಕ್ರಮಗಳು ಕನ್ನಡ ಸಾಹಿತ್ಯದಲ್ಲಿನ ಹಳಗನ್ನಡವನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಮಾಡುತ್ತಿದ್ದು, ಇದು ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸೆಂಟ್ರಲ್ ಜೈನ್ ಮಿಲನ್ ಅಧ್ಯಕ್ಷೆ ಮಮತ ಕಾಂತರಾಜ್ ಹಾಗೂ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ, ಸಂಚಾಲಕರಾದ ಡಾ.ಪದ್ಮಿನಿ ನಾಗರಾಜು, ಬ್ರಾಹ್ಮಿಲ ಮದನಕುಮಾರ ಉಪಸ್ಥಿತರಿದ್ದರು.