ಶ್ರಾವಣ ಮಾಸದ ನಿಮಿತ್ತ ಬಸವಕಲ್ಯಾಣದ ಸಂಸ್ಥಾನ ಗವಿಮಠದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಶಿವಶಂಕರ ರಾಮಣ್ಣನವರ, ದಿಲೀಪಕುಮಾರ ದೇಸಾಯಿ, ಸೂರ್ಯಕಾಂತ ಬಿರಾದಾರ, ಬಸವರಾಜ ಗೋರ್ಟಾ ಇದ್ದರು.
- ಅಭಿನವ ಶ್ರೀ ಅನಿಸಿಕೆ
- ಗವಿಮಠದಲ್ಲಿ ಉಪನ್ಯಾಸ ಮಾಲೆ ಕಾರ್ಯಕ್ರಮ
ಬಸವಕಲ್ಯಾಣ: ಶ್ರೀ ಘನಲಿಂಗ ರುದ್ರಮುನಿ ಶಿವಯೋಗಿಗಳು ತಪೋಬಲದಿಂದ ಜನಮನದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಅವರ ದೇಶ ಪರ್ಯಟನೆ ಉದ್ದೇಶ ಧಾರ್ಮಿಕ ಸಂಚಾರವಷ್ಟೇ ಅಲ್ಲ. ಸಮಾಜಮುಖಿ ಜಾಗೃತಿಯೂ ಆಗಿತ್ತು ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ನಗರದ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತ ಉಪನ್ಯಾಸ ಮಾಲೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅಭಿನವ ಶ್ರೀಗಳು ಮಾತನಾಡಿದರು.
ಶಿವಯೋಗಿಗಳು ಬಾಳೆಹೊನ್ನೂರು ಗುರುಪರಂಪರೆಯಲ್ಲಿ ಪ್ರಮುಖ ಗುರುಗಳಾಗಿ ಗೌರವಿಸಲ್ಪಟ್ಟಿದ್ದರು. ಅವರ ತಪಸ್ಸು ಮತ್ತು ಆತ್ಮಶಕ್ತಿಯಿಂದ ಅನೇಕ ಜನರು ಸನ್ಮಾರ್ಗಕ್ಕೆ ಬಂದರು. ಬರಗಾಲದ ಸಮಯದಲ್ಲಿ ಮಳೆ ಆಗುವಂತೆ ಪ್ರಾರ್ಥಿಸಿ ಜನರ ಕಷ್ಟಕ್ಕೆ ಸ್ಪಂದಿಸಿದ್ದರು. ಶಿವಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದರು. ರೋಗ ಪೀಡಿತರಿಗೆ ವಿಭೂತಿ ಹಾಗೂ ಆಶೀರ್ವಾದದ ಮೂಲಕ ಗುಣಪಡಿಸುತ್ತಿದ್ದರು ಎಂದರು.
ಶಿವಶಂಕರ ರಾಮಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ನಾಡು ಗ್ರಾಮೀಣ ಜನಪದ ಕಲಾ ಸಂಘದ ಅಧ್ಯಕ್ಷ ದಿಲೀಪಕುಮಾರ ದೇಸಾಯಿ, ಹಿರಿಯ ಕಲಾವಿದ ಸೂರ್ಯಕಾಂತ ಬಿರಾದಾರ, ಬಸವರಾಜ ಗೋರ್ಟಾ, ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ, ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಗೋವಿಂದರಡ್ಡಿ ಕೋತಂಪಲ್ಲಿ, ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ರಾಕೇಶ ಪುರವಂತ, ಆಕಾಶ ಹಿರೇಮಠ, ರಾಮಶೆಟ್ಟಿ ಬಿರಾದಾರ, ವಿಮಲಾಬಾಯಿ ಬಿರಾದಾರ, ಸುರೇಖಾ ಸಜ್ಜನಶೆಟ್ಟಿ, ಜಗದೇವಿ ಮಾಲಿಪಾಟೀಲ್ ಇದ್ದರು. ಮಲ್ಲಿಕಾರ್ಜುನ ಅಲಗುಡೆ ಸ್ವಾಗತಿಸಿದರು ಅಭಿಷೇಕ ರಾಮಣ್ಣನವರ ನಿರೂಪಣೆ ಮಾಡಿದರು. ಶರಣಬಸವ ಅಲಗುಡೆ ಪ್ರಾರ್ಥನ ಗೀತೆ ಹಾಡಿದರು.