ಗುಬ್ಬಿ: ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ನಿರಂತರವಾಗಿ ಜನಪರ, ಸವಾಜಮುಖಿ ಕಾರ್ಯಕ್ರಮಗಳನ್ನು ವಾಡುತ್ತಿದೆ ಎಂದು ಯೋಜನಾಧಿಕಾರಿ ಜಯಂತಿ ತಿಳಿಸಿದರು.
ತಾಲೂಕಿನ ಕಡಬ ಹೋಬಳಿಯ ಯಲಚಿಹಳ್ಳಿ ಸರ್ಕಾರಿ ಶಾಲೆಗೆ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯಿಂದ ಡೆಸ್ಕ್ ಮತ್ತು ವಾಟರ್ ಫಿಲ್ಟರ್ ವಿತರರಣೆ ವಾಡಿ ವಾತನಾಡಿ, ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಡೆಸ್ಕ್ ಮತ್ತು ಬೆಂಚ್, ವಾಟರ್ ಫಿಲ್ಟರ್ ಒದಗಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ಶಿಕ್ಷಣ ಪಡೆದು ಸವಾಜದಲ್ಲಿ ಉತ್ತಮ ನಾಗರಿಕರಾಗಬೇಕು ಎಂದರು.
ಗುಬ್ಬಿ ತಾಲೂಕಿನಲ್ಲಿ 24 ಶಾಲೆಗೆ 200 ಡೆಸ್ಕ್, ಬೆಂಚ್, ಒದಗಿಸಲಾಗಿದೆ. ಜ್ಞಾನ ದೀಪ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಶಿಕ್ಷಕರನ್ನು ನೀಡುವ ಕೆಲಸ ವಾಡಲಾಗುತ್ತಿದೆ, ಗುಬ್ಬಿ ತಾಲೂಕಿನಲ್ಲಿ 15 ವಷರ್ದಲ್ಲಿ ಸಾವಾಜ ಕಾರ್ಯಕ್ಕೆ 78 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ವಾಜಿ ಗ್ರಾಪಂ ಸದಸ್ಯ ನಂದೀಶ್ ವಾತನಾಡಿ, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯಿಂದ ಹತ್ತು ಹಲವು ಸಾವಾಜಿಕ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯಲಚಿಹಳ್ಳಿ ಕೆರೆಯಲ್ಲಿ ಹೂಳೇತ್ತುವ ಕೆಲಸಕ್ಕೆ ಧರ್ಮಸ್ಥಳ ಸಂಸ್ಥೆ ಕೈ ಜೋಡಿಸಬೇಕೆಂದು ಮನವಿ ವಾಡಿದರು.