Social work by Dharmasthala organization
ತಿಪಟೂರು : ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಸವಾಜಮುಖಿ ಕಾರ್ಯಗಳಲ್ಲಿ ಗ್ರಾವಾಭಿವೃದ್ಧಿ ಯೋಜನೆಯ ಪಾಲು ಇದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ತಾಲೂಕಿನ ಹೊನ್ನವಳ್ಳಿ ಹೋಬಳಿಯ ಕನ್ನಡ ಭಾರತಿ ಪ್ರೌಢಶಾಲಾ ಮಕ್ಕಳಿಗೆ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಬೆಂಚು ಡೆಸ್ಕ್‌ಗಳನ್ನು ಶಾಲೆಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಸಮುದಾಯ ಅಭಿವೃದ್ಧಿ ಸೇವೆಗಳ ಭಾಗವಾಗಿ ತುಮಕೂರು ಜಿಲ್ಲೆಯ ಒಟ್ಟು 205 ಶಾಲೆಗಳಿಗೆ 1,540 ಜತೆ ಬೆಂಚ್ ಡೆಸ್ಕ್ ವಿತರಣೆಗೆ 1.39 ಕೋಟಿ ಮೊತ್ತವನ್ನು ವಿನಿಯೋಗಿಸಿರುವುದು ಶ್ಲಾನೀಯವೆಂದರು.
ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ವಾತನಾಡಿ, ತಾಲೂಕಿನ ಹೊನ್ನವಳ್ಳಿ ಕನ್ನಡ ಭಾರತಿ ಪ್ರೌಢ ಶಾಲೆಗೆ 10 ಜತೆ ಬೆಂಚ್ ಡೆಸ್ಕ್‌ಗಳು ದೊರೆತಿದ್ದು, ಇದನ್ನು ಶಾಲಾಮಕ್ಕಳು ಸದುಪಯೋಗಪಡೆಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತರಕಾರಿ ಗಂಗಾಧರ್, ಮಲ್ಲಿಗಪ್ಪಾಚಾರ್, ಮುಖ್ಯಶಿಕ್ಷಕ ಆನಂದ್, ಗ್ರಾಪಂ ವಾಜಿ ಅಧ್ಯಕ್ಷ ಶ್ರೀಕಂಠಮೂರ್ತಿ, ಹೊನ್ನಾಂಭಿಕಾ ದೇವಿ ಟ್ರಸ್ಟ್ ಅಧ್ಯಕ್ಷ ಮಹಲಿಂಗಪ್ಪ, ರೈತ ಮುಖಂಡರಾದ ಮುಪ್ನೇಗೌಡ, ಶಾಲಾ ಸಹ ಶಿಕ್ಷಕರು, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಹೊನ್ನವಳ್ಳಿ ಗ್ರಾಮಸ್ಥರು ಇದ್ದರು.
ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಕನ್ನಡ ಭಾರತಿ ಪ್ರೌಡಶಾಲಾ ಮಕ್ಕಳಿಗೆ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಬೆಂಚು ಡೆಸ್ಕ್‌ಗಳನ್ನು ಕೇಂದ್ರ ಸಚಿವ ವಿ.ಸೋಮಣ್ಣ ಹಸ್ತಾಂತರಿಸಿದರು. ತಾಲೂಕು ಉಪವಿಭಾಗಾಧಿಕಾರಿ ಸಪ್ತಶ್ರೀ, ಯೋಜನಾಧಿಕಾರಿ ಉದಯ್, ಮುಖ್ಯಶಿಕ್ಷಕ ಆನಂದ್ ಮತ್ತಿತರರು ಇದ್ದರು.