ಐಸಿರಿ ಪ್ರಕಾಶನದ ಡಾ.ಸುರೇಶ್ ಪಾಟೀಲ್ ಅವರ ಸನ್ನಿಧಿ ಕಾದಂಬರಿಯನ್ನು ನಾಡೋಜ ಡಾ.ಮನು ಬಳಿಗಾರ್ ಬಿಡುಗಡೆ ಮಾಡಿದರು. ವೀಣಾ ಬನ್ನಂಜೆ ಮತ್ತಿತರರಿದ್ದರು.  
ರಾಜ್ಯ

ಸಾಮಾಜಿಕ ಮಾಧ್ಯಮದಿಂದ ಸಂಸ್ಕೃತಿಗೆ ಧಕ್ಕೆ; ನಾಡೋಜ ಡಾ.ಮನು ಬಳಿಗಾರ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸಂಸ್ಕೃತಿಗೆ ಧಕ್ಕೆ
  • ನಾಡೋಜ ಡಾ.ಮನು ಬಳಿಗಾರ್ ಅಭಿಪ್ರಾಯ
  • ಮಧ್ವಾಚಾರ್ಯರ ಕುರಿತ ಸನ್ನಿಧಿ ಕಾದಂಬರಿ ಲೋಕಾರ್ಪಣೆ

ಬೆಂಗಳೂರು:ಇತ್ತೀಚೆಗೆಸಾಮಾಜಿಕ ಜಾಲತಾಣಗಳ ಪ್ರಭಾವಹೆಚ್ಚಾಗುತ್ತಿದ್ದು,ಇದರಿಂದ ನಮ್ಮಸಂಸ್ಕೃತಿಗೆ ಧಕ್ಕೆಯಾಗುತ್ತಿದೆಎಂದು ಕಸಾಪ ಮಾಜಿ ಅಧ್ಯಕ್ಷ ನಾಡೋಜಡಾ.ಮನುಬಳಿಗಾರ್ ಅಭಿಪ್ರಾಯಿಸಿದ್ದಾರೆ.

ಶೇಷಾದ್ರಿಪುರಂಕಾಲೇಜಿನಲ್ಲಿ ಸುಮೇರು ಟ್ರಸ್ಟ್ಮತ್ತು ಐಸಿರಿ ಪ್ರಕಾಶನ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ನಿಧಿ ಕಾದಂಬರಿಬಿಡುಗಡೆ ಮಾಡಿ ಮಾತನಾಡಿದರು.

ಯಾವುದೇಒಂದು ಸಿದ್ಧಾಂತ ಅಥವಾ ದರ್ಶನದಕುರಿತು ನಡೆಯುವ ಚರ್ಚೆಯಲ್ಲಿನೈಜತೆಯ ಕೊರತೆ ಇರಬಾರದು.ಭಾರತದಲ್ಲಿರುವಕುಟುಂಬ ವ್ಯವಸ್ಥೆ,ಮಾನವೀಯ ಮೌಲ್ಯಗಳು,ಪರಸ್ಪರ ಸಹಕಾರ,ಆಧ್ಯಾತ್ಮ ಸಾಧನೆಜಗತ್ತಿನ ಬೇರೆ ದೇಶಗಳಲ್ಲಿ ಕಾಣಲುಸಾಧ್ಯವಿಲ್ಲ.ಆದರೆ ಸಾವಿರಾರುವರ್ಷದಿಂದ ಪ್ರತಿಪಾದಿತವಾಗಿರುವಅನುಕರಣೀಯ ವಿಷಯಗಳು ಜನರಿಗೆಸರಿಯಾಗಿ ತಲುಪುತ್ತಿಲ್ಲ.ನಾವು ನೋಡುವದೃಷ್ಟಿ ಸರಿ ಇದ್ದರೆ ಸಿದ್ಧಾಂತಗಳುಅರ್ಥವಾಗುತ್ತವೆ.ಮೋಕ್ಷ,ಸಾಧನೆ,ಸಿದ್ಧಿಗೆಸಿದ್ಧಾಂತದ ವಾಸ್ತವತೆಅರ್ಥೈಸಿಕೊಳ್ಳಬೇಕು.ತರತಮ ಪ್ರತಿಪಾದಿಸುವಸಿದ್ಧಾಂತಗಳಲ್ಲಿ ತಂತ್ರಜ್ಞಾನಮತ್ತು ವಿಜ್ಞಾನವನ್ನು ಮೇಳೈಸಿಬರೆಯುವುದು ಬಹಳ ದೊಡ್ಡ ಸವಾಲು.ಆ ಸವಾಲನ್ನುಸಮರ್ಥವಾಗಿ ಎದುರಿಸುವಲ್ಲಿಡಾ.ಸುರೇಶ್ಪಾಟೀಲರ ಸನ್ನಿಧಿ ಕಾದಂಬರಿಯಶಸ್ವಿಯಾಗಿದೆ.ಪರಿಶ್ರಮ,ಶ್ರದ್ಧೆ,ನಿಷ್ಠೆ,ಅಧ್ಯಯನ,ಅಧ್ಯಾಪನವನ್ನುರೂಢಿಸಿಕೊಂಡು ಎಲ್ಲರೂ ಕೂಡಿದೇಶವನ್ನು ಕಟ್ಟಬೇಕು ಎಂದುಬಳಿಗಾರ್ ಹೇಳಿದರು.

ಕಾರ್ಯಕ್ರಮದಲ್ಲಿಲೇಖಕ ಡಾ.ಸುರೇಶ್ಪಾಟೀಲ್, ಹಿರಿಯರಾದಡಾ.ಕೃಷ್ಣಕಟ್ಟಿ, ಶೇಷಾದ್ರಿಪುರಂಕಾಲೇಜಿನ ಪ್ರಾಚಾರ್ಯ ಡಾ.ಎನ್‌ಎಸ್.ಸತೀಶ್,ಪ್ರಕಾಶಕಡಾ.ಮಂಜುನಾಥಪಾಳ್ಯ, ಜ್ಯೋತಿಷಿಕೊಡ್ಲಕೆರೆ ಮಹಾಬಲಮೂರ್ತಿಮತ್ತಿತರರಿದ್ದರು.

ಮೋಹಾಂಧಕಾರ ಮೀರಿದ ಬರಹ ಲೋಕಮಾನ್ಯವಾಗುತ್ತದೆ

ಸಮಾರಂಭದಲ್ಲಿ ಕಾದಂಬರಿ ಕುರಿತು ಮಾತನಾಡಿದ ಆಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ, ಮಹಾಪುರುಷರನ್ನು ಆಯಾ ಸಮುದಾಯಕ್ಕೆ ಸೀಮಿತಗೊಳಿಸುವುದು ತಪ್ಪು. ಇತ್ತೀಚೆಗೆ ಬೀದಿಯಲ್ಲಿ ಬಸವಣ್ಣನನ್ನು ಗುತ್ತಿಗೆ ಪಡೆದವರಂತೆ ಮಾತನಾಡುತ್ತಿರುವುದು ಅಸಹ್ಯಕರ ಬೆಳವಣಿಗೆ. ಅಲ್ಲಮ, ಅಕ್ಕ, ಬಸವಣ್ಣ, ಕನಕ, ಪುರಂದರರನ್ನು ಸಂಕುಚಿತವಾಗಿ ನೋಡುತ್ತಿರುವುದು ಅಪಾಯಕರ ಎಂದರು. ಒಬ್ಬ ತತ್ವಶಾಸಜ್ಞ, ಸಿದ್ಧಾಂತ ಪ್ರತಿಪಾದಕರ ಕುರಿತು ಕಾದಂಬರಿ ಬರೆಯುವುದು ಕಷ್ಟದ ಕೆಲಸ. ಆಚಾರ್ಯ ಮಧ್ವರನ್ನು ಕೇವಲ ಶಾಸೀಯವಾಗಿ ನೋಡುವ ಕೆಲಸ ಆಗಿದೆಯೇ ಹೊರತು ಅವರ ಸಂಪೂರ್ಣ ವ್ಯಕ್ತಿತ್ವವನ್ನು ಸಮಾಜಕ್ಕೆ ಮುಟ್ಟಿಸುವ ಕೆಲಸ ಆಗಲೇ ಇಲ್ಲ. ಆ ನಿಟ್ಟಿನಲ್ಲಿ ಸುರೇಶ್ ಅವರ ಸನ್ನಿಧಿ ಯಾವುದೇ ಗೊಂದಲಗಳಿಗೆ ಎಡೆ ಇಲ್ಲದಂತೆ ಮಧ್ವರ ವ್ಯಕ್ತಿತ್ವವನ್ನು ಜನಮೇಜಯ ಮತ್ತು ಪುರಾಣಿಕರ ಸಂವಾದ ರೂಪದಲ್ಲಿ ಚಿತ್ರಿಸಿದೆ. ನಮ್ಮವರು ಎಂಬ ಮೋಹದಿಂದ ಮೌಢ್ಯದ ಬರಹ ಸೃಷ್ಟಿಯಾಗುತ್ತದೆ. ಮೋಹಾಂಧಕಾರ ಮೀರಿದ ಬರಹ ಲೋಕಮಾನ್ಯವಾಗುತ್ತದೆ. ಜೀವನ ಚರಿತ್ರೆಗಳು ಭ್ರಷ್ಟವಾಗದೆ, ನೈಜ ವ್ಯಕ್ತಿತ್ವವನ್ನು ಬಿಚ್ಚಿಡಬೇಕು ಆ ನಿಟ್ಟಿನಲ್ಲಿ ಸನ್ನಿಧಿ ಯಶಸ್ವಿಯಾಗಿದೆ ಎಂದು ಬನ್ನಂಜೆ ವಿವರಿಸಿದರು.