ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ವೈಜ್ಞಾನಿಕ ಪರಿಷತ್ನಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್, ತಾಲೂಕು ಅಧ್ಯಕ್ಷ ರವಿಕುಮಾರ್, ನಯಾಜ್ ಖಾನ್, ರಾಜೇಶ್ವರಿ, ಸುನೀತಾ ಉಮೇಶ್ ಇತರರು ಇದ್ದರು.
ಸೂಲಿಬೆಲೆ : ದೇಶದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹೋರಾಡಿದ ಡಾ.ಅಂಬೇಡ್ಕರ್ ಅವರ ಸಾಧನೆ ಅನನ್ಯ ಎಂದು ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಎಂ.ಆರ್. ಉಮೇಶ್ ಹೇಳಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪದವಿಪೂರ್ವ ಕಾಲೇಜಿನ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯ ಎಂದು ಶಿಕ್ಷಣ ಜಾಗೃತಿ ಮೂಲಕ ಅಸ್ಪ--ೃಶ್ಯತೆ ಹಾಗೂ ದಲಿತ ಪರ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯಲು ಕಾನೂನು ಮಂತ್ರಿಗಳಾಗಿ ಸರ್ವ ಜನಾಂಗದ ನಾಯಕರಾಗಿ ಗುರುತಿಸಿಕೊಂಡವರು ಎಂದರು.
ಪರಿಷತ್ನ ಹೊಸಕೋಟೆ ತಾಲೂಕು ಅಧ್ಯಕ್ಷ ರವಿಕುಮಾರ್ ಮಾತನಾಡಿ, ಅಸ್ಪ--ೃಶ್ಯತೆ ನಿವಾರಣೆಗಾಗಿ ಸತ್ಯಾಗ್ರಹ ಹಾಗೂ ದಲಿತರ ದೇವಾಲಯ ಪ್ರವೇಶಕ್ಕಾಗಿ ಹೋರಾಟ ನಡೆಸುವ ಮೂಲಕ ಸಾಮಾಜಿಕ ಸಮಾನತೆ ಸಾರಿದ ಹರಿಕಾರ ಎಂದು ಬಣ್ಣಿಸಿದರು.
ಸೂಲಿಬೆಲೆ ಹೋಬಳಿ ಅಧ್ಯಕ್ಷ ನಯಾಜ್ ಖಾನ್ ಮಾತನಾಡಿ, ಮೇ.1ರಂದು ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಮೂಡನಂಬಿಕೆ ಮತ್ತು ಮೌಡ್ಯಗಳ ಕುರಿತಾದ ವಿಚಾರಗೋಷ್ಠಿ ನಡೆಯಲಿದೆ. ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಆಯೋಜಿಸಿರುವ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದ ಪೂರ್ವ ತಯಾರಿ ನಡೆಸಲಾಗಿದ್ದು, ಈ ಹಿನ್ನೆಲೆ ರಂಗೋಲಿ ಸ್ಪರ್ಧೆ ಸೇರಿ ಇತರೆ ಚಟುವಟಿಕೆ ನಡೆಸಲಾಗಿದೆ. ಮೇ.1ರಂದು ಬಹುಮಾನ ವಿತರಣೆ ಮಾಡಲಿದ್ದೇವೆ ಎಂದು ಹೊಸಕೋಟೆ ಮಹಿಳಾ ಅಧ್ಯೆ ರಾಜೇಶ್ವರಿ ಹೇಳಿದರು.
ಸೂಲಿಬೆಲೆ ಹೋಬಳಿ ಅಧ್ಯಕ್ಷ ನಯಾಜ್ ಖಾನ್, ಮಹಿಳಾ ಅಧ್ಯಕ್ಷ ರಾಜೇಶ್ವರಿ, ಸುನೀತಾ ಉಮೇಶ್, ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಶುಂಪಾಲ ವೆಂಕಟೇಶ್, ಕಸಾಪ ಅಧ್ಯಕ್ಷ ಪ್ರೇಮಕುಮಾರ್, ಆಶಾ ಕಾರ್ಯಕರ್ತೆ ಶಿಲ್ಪಾ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಪ್ರಶಾಂತ್, ಬೆಟ್ಟಹಳ್ಳಿ ಗೋಪಿನಾಥ್, ಜಿಯಾಉಲ್ಲಾ, ಸೈಯದ್ ಮಹಬೂಬ್ ಇತರರು ಇದ್ದರು.