ಕಲಬುರಗಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು. ಬಿಜೆಪಿ ಮಹಾನಗರ ಜಿಲ್ಲಾದ್ಯಕ್ಷ ಚಂದು ಪಾಟೀಲ್, ಎಂಎಲ್‌ಸಿ ಶಶೀಲ್ ನಮೋಶಿ, ಮಾಜಿ ಶಾಸಕ ರಾಜಕುಮಾರ ತೆಲ್ಕೂರ, ಅಶೋಕ ಬಗಲಿ, ಹರ್ಷಾನಂದ ಗುತ್ತೇದಾರ್ ಇತರರಿದ್ದರು. 
ರಾಜ್ಯ

ಸೇಡು ತೀರಿಸಿಕೊಳ್ಳಲು ಸ್ನೇಹಮಯಿ ಅರೆಸ್ಟ್

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ
  • ತುರ್ತಾಗಿ ಬಂಧಿಸುವ ಅಗತ್ಯವೇನಿತ್ತು ಎಂದ ಬಿಜೆಪಿ
ಕಲಬುರಗಿ: ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ತಪ್ಪು ಮಾಡಿದರೆ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಆದರೆ ಸೈಬರ್ ಕ್ರೆÊಂ ಎಂದು ಹೇಳಿ ಅವಸರದಲ್ಲಿ ಬಂಧಿಸುವ ಅಗತ್ಯವೇನಿತ್ತು ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸಂಜೆ ಭೇಟಿಯಾದ ಪತ್ರಕರ್ತರ ಜತೆ ಮಾತನಾಡಿದ ಅವರು, ಸೈಬರ್ ಕ್ರೆÊಂ ಹೇಗಾಗುತ್ತೆ? ಕ್ರಿಮಿನಲï ಮಾನಹಾನಿ ಕೇಸ್ ಹಾಕಬಹುದು. ಆದರೆ ಕೂಡಲೇ ಬಂಧಿಸಲು ಅವಕಾಶವಿಲ್ಲ. ಇದನ್ನು ನೋಡಿದರೆ ಸಿಎಂ ಸಿದ್ದರಾಮಯ್ಯ ವಿರುದ್ಧದ ಆರೋಪದ ಸೇಡು ತೀರಿಸಿಕೊಳ್ಳಲು ಬಂಧಿಸಿದAತಿದೆ ಎಂದು ಕಿಡಿಕಾರಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಕೃಷ್ಣ ಯಾವ ಆಧಾರದ ಮೇಲೆ ಆರೋಪ ಮಾಡಿz್ದÁರೆ ಎಂಬುದು ನನಗೆ ಗೊತ್ತಿಲ್ಲ. ಅದು ತಪ್ಪಾಗಿದ್ದರೆ ದೂರು ಕೊಡಲಿ. ನಂತರ ಕ್ರಮ ಕೈಗೊಳ್ಳಲಿ. ಸ್ನೇಹಮಯಿ ಕೃಷ್ಣ ಬಗ್ಗೆ ಏನಾದ್ರೂ ದೂರು ಇದ್ದರೆ ಮೊದಲೇ ಹೇಳಬೇಕಿತ್ತು. ಹಾಗೆ ಮಾಡಿಲ್ಲ. ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಟ್ಟಾಗಲೂ ಏನು ಮಾಡಲಿಲ್ಲ. ಬದಲು ದೂರು ಕೊಟ್ಟವರಿಗೆ ಕಿರುಕುಳ ನೀಡಲಾಯಿತು. ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ದ ಆರೋಪ ಮಾಡಿz್ದÁರೆ. ಆರೋಪ ಸರಿ ಅಂತ ಹೇಳುತ್ತಿಲ್ಲ, ಆದರೆ ಅರೆಸ್ಟ್ ಮಾಡುವ ಅಗತ್ಯವೇನಿತ್ತು ಎಂದು ಗುಡುಗಿದರು.
ಮಹಿಳಾ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಬಂಧಿಸಲು ೧೫ ದಿನ ತೆಗೆದುಕೊಂಡರು.ಪೊಲೀಸರ ಸಾಮರ್ಥ್ಯ ಕಮ್ಮಿ ಇಲ್ಲ. ಆದರೆ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲ. ರಾಜಕೀಯ ಹಸ್ತಕ್ಷೇಪ ಹೆಚ್ಚಿದೆ. ಮಾತು ಕೇಳದ ಅಧಿಕಾರಿಗಳಿಗೆ ತೊಂದರೆ ಕೊಡುವುದು ಕಾಂಗ್ರೆಸ್ ಚಾಳಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮಹಾನಗರ ಜಿಲ್ಲಾದ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಎಂಎಲ್‌ಸಿ ಶಶೀಲ್ ನಮೋಶಿ, ಮಾಜಿ ಶಾಸಕ ರಾಜಕುಮಾರ ತೆಲ್ಕೂರ, ಪ್ರಮುಖರಾದ ಹರ್ಷಾನಂದ ಗುತ್ತೇದಾರ್, ಅಂಬಾರಾಯ ಅಷ್ಟಗಿ, ಗಿರಿರಾಜ ಯಳಮೇಲಿ, ಪರಸರೆಡ್ಡಿ, ಶರಣಪ್ಪ ತಳವಾರ ಇದ್ದರು.


ಹಿಂದೂಗಳ ಬಂಧನಕ್ಕೆ ಕಿಡಿ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿರುವುದಕ್ಕೆ ಸಂಬAಧಿಸಿದAತೆ ಹಿಂದೂಗಳನ್ನು ಬಂಧಿಸಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು. ಕಲ್ಲೆಸೆದವರನ್ನು ಬಿಟ್ಟು ಬೇರೆಯವರನ್ನು ಬಂಧಿಸಿದ್ದು ಸರಿಯಲ್ಲ. ಇಷ್ಟಕ್ಕೂ ಶಿವಾಜಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ಎಸೆಯುವ ಧೈರ್ಯ ಅವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಾಗ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಲಿಂಡರ್ ಬ್ಲಾಸ್ಟ್ ಆಗಿರಬಹದು ಅಥವಾ ಎರಡು ಹೋಟೆಲï ಪೈಪೋಟಿಗಾಗಿ ನಡೆದಿರಬಹುದು ಅಂದಿದ್ದರು. ಮಂಗಳೂರಿನಲ್ಲಿ ಬಾಂಬ್ ಸಿಡಿಸಿದವರನ್ನುö್ನ ಬ್ರದರ್ಸ್ ಅಂದರು. ಈಗ ಅವರು ಬರೋಬ್ಬರಿ ಬತ್ತಿ ಇಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಕಲ್ಲು ಹೊಡೆದವರನ್ನು ಮೊದಲು ಬಂಧಿಸಿ ಒಳಗೆ ಹಾಕಬೇಕು. ವೋಟ್ ಬ್ಯಾಂಕ್ ರಾಜಕಾರಣದಿಂದ ಸರ್ಕಾರ ಏಕದೃಷ್ಟಿಯಿಂದ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಗೂಂಡಾಗಳು ಎಐ ಸಮಾವೇಶದಲ್ಲಿ ಗಲಾಟೆ ಮಾಡಿz್ದÁರೆ. ಉದ್ಯಮಿಗಳು, ಬೇರೆ ಬೇರೆ ದೇಶದ ಮುಖ್ಯಸ್ಥರು, ಮಂತ್ರಿಗಳು ಬಂದಿರುವAಥ ಸ್ಥಳದಲ್ಲಿ ಭಾರತದ ಮರ್ಯಾದೆ ಕಳೆಯುತ್ತಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
"

ಎಐ ಸಮಾವೇಶದಲ್ಲಿ ಕಾಂಗ್ರೆಸ್ ಗೂಂಡಾಗಳು ಗಲಾಟೆ ಮಾಡಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ಅವರಿಗೆ ಏನೂ ಹೇಳಲಾರೆವು. ಅಧಿವೇಶನ ನಡೆಯುತ್ತಿರುವಾಗ ವಿದೇಶಕ್ಕೆ ಒಂಟಿಯಾಗಿ ಹೋಗುತ್ತಾರೆ. ರಾಹುಲ್ ದಾರಿ ತಪ್ಪಿದ ಮಗನಂತಿದ್ದಾರೆ. ಆದರೆ ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಇಲ್ಲಿಯವರು. ಅವರಿಗಾದರೂ ಸೆನ್ಸ್ ಇದ್ದರೆ ದೇಶದ ಜನರಿಗೆ P್ಷÀಮೆ ಕೋರಲಿ.| ಪ್ರಲ್ಹಾದ್ ಜೋಶಿಕೇಂದ್ರ ಸಚಿವ