ಶಿಕ್ಷಣ, ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಶ್ರೀ ಸಾಯಿರಾಂ ಎಂಜಿನಿಯರಿಂಗ್ ಕಾಲೇಜಿನ ಕಾರ್ಯ ಗುರುತಿಸಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೌಶಲ ಅಭಿವೃದ್ಧಿಯಲ್ಲಿ ಶ್ರೇಷ್ಠತೆ ಪ್ರಶಸ್ತಿ ಪ್ರದಾನ ಮಾಡಿದರು. ಲೋಕಸಭಾ ಸದಸ್ಯ ಪ್ರಭಾ ಮಲ್ಲಿಕಾರ್ಜುನ್, ಸಾಯಿ ರಾಮ್ ಕಾಲೇಜಿನ ಷಡಕ್ಷರಪ್ಪ ಇತರರು ಇದ್ದರು.
ಆನೇಕಲ್ : ಬೆಂಗಳೂರಿನಲ್ಲಿ ಆಯೋಜಿಸಿದ್ದ ಗ್ಲೋಬಲ್ ಸಿಎಸ್ಆರ್ ಮತ್ತು ಸಸ್ಟೇನಬಿಲಿಟಿ ಸಮ್ಮಿಟ್&2026 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆನೇಕಲ್ ತಾಲೂಕಿನ ಶ್ರೀ ಸಾಯಿ ರಾಮ್ ಕಾಲೇಜಿಗೆ ಕೌಶಲ ಅಭಿವೃದ್ಧಿಯಲ್ಲಿ ಶ್ರೇಷ್ಠತೆ ಪ್ರಶಸ್ತಿ ನೀಡಿದರು.
ಶಿಕ್ಷಣ, ನಾವೀನ್ಯತೆ, ಉದ್ಯಮಶೀಲತೆ, ಕೌಶಲ ಅಭಿವೃದ್ಧಿ ಹಾಗೂ ಸುಸ್ಥಿರ ಸಮಾಜ ನಿಮಾರ್ಣಕ್ಕೆ ಸಂಸ್ಥೆ ನೀಡಿರುವ ಕೊಡುಗೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಸಾಯಿರಾಂ ಸಂಸ್ಥೆಗಳ ನಾವೀನ್ಯತೆ ಮತ್ತು ಸಾಮಾಜಿಕ ಪರಿಣಾಮದ ಪರಿಸರ ವ್ಯವಸ್ಥೆ ಮೂಲಕ ಇದುವರೆಗೆ 15,000ಕ್ಕೂ ಹೆಚ್ಚು ನಾವೀನ್ಯತೆಗಳನ್ನು ನೀಡಿದ್ದು, 850ಕ್ಕೂ ಹೆಚ್ಚು ಪೇಟೆಂಟ್ ದಾಖಲಿಸಿದೆ. ಅಲ್ಲದೆ 2,000ಕ್ಕೂ ಹೆಚ್ಚು ಪ್ರೋಟೋಟೈಪ್ಗಳನ್ನು ಅಭಿವೃದ್ಧಿಪಡಿಸಿ, 165ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳಿಗೆ ಬೆಂಬಲ ನೀಡಿದೆ.
ಇವುಗಳಲ್ಲಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಸ್ಟಾರ್ಟ್ಅಪ್ಗಳನ್ನು ಸಾಯಿರಾಂ ವಿದ್ಯಾರ್ಥಿಗಳೇ ಸ್ಥಾಪಿಸಿರುವುದು ಗಮನಾರ್ಹ. ಈ ಪೈಕಿ 50ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಯಶಸ್ವಿಯಾಗಿ ಪದವಿ ಪಡೆದಿವೆ.
ಜತೆಗೆ 500ಕ್ಕೂ ಹೆಚ್ಚು ಸುಸ್ಥಿರ ಅಭಿವೃದ್ಧಿ ಗುರಿ ಕಾರ್ಯಕ್ರಮಗಳ ಮೂಲಕ 1.25 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ತೊಡಗಿಸಿಕೊಂಡಿದ್ದು, 3.3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಉಂಟುಮಾಡಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಅರುಣ್ ತಿಳಿಸಿದ್ದಾರೆ.