SKDRDP helps rural economy
ತುರುವೇಕೆರೆ: ಆರ್ಥಿಕ ಚಟುವಟಿಕೆಯ ಮೂಲಕ ಆರಂಭವಾದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ಸಹ ತೊಡಗಿಸಿಕೊಂಡಿದೆ ಎಂದು ಯೋಜನಾಧಿಕಾರಿ ಜಯಂತಿ ತಿಳಿಸಿದರು.
ಗುಬ್ಬಿ ತಾಲೂಕಿನ ಕಸಬ ಹೋಬಳಿ ಮಡೇನಹಳ್ಳಿಯ ಶ್ರೀ ತಿರುಮಲ ಹಾಗೂ ಚಿಕ್ಕಮ್ಮ ದೊಡ್ಡಮ್ಮ ದೇವಾಲಯದ ಜೀಣೋರ್ದ್ಧಾರ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 2.50 ಲಕ್ಷ ರೂಪಾಯಿ ಡಿಡಿ ಹಸ್ತಾಂತರಿಸಿ ಮಾತನಾಡಿ, ಸಂಸ್ಥೆಯಿಂದ ಸಾಮಾಜಿಕವಾಗಿ ಕೆರೆಗಳ ಪುನಶ್ಚೇತನ, ಬಡವರಿಗೆ ಮಾಸಾಶನ, ವಸತಿ ಯೋಜನೆ ಜತೆಗೆ ಮಹಿಳಾ ಸಬಲೀಕರಣಕ್ಕೂ ಕೈ ಜೋಡಿಸಿದೆ ಎಂದು ತಿಳಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ.ಲಿಂಗಪ್ಪ ಮಾತನಾಡಿ, ದೇವಾಲಯ ಜೀಣೋರ್ದ್ಧಾರಕ್ಕೆ ಧರ್ಮಸ್ಥಳ ಸಂಸ್ಥೆ ಕೈಜೋಡಿಸಿದೆ. ಅವರು ನೀಡಿದ 2.50 ಲಕ್ಷ ರೂ. ದೇಣಿಗೆ ದೇವಾಲಯದ ಪೂರ್ಣ ಕಾರ್ಯಕ್ಕೆ ಬಳಸುತ್ತೇವೆ ಎಂದರು.