SKDRDP assistance for temple development
ಚೇಳೂರು:ಗ್ರಾಮೀಣ ಭಾಗದಲ್ಲಿ ದೇವಾಲಯ ನಿಮಾರ್ಣವಾಗಿ ಜನರಲ್ಲಿ ಧಾರ್ಮಿಕ ಭಾವನೆ ಬೆಳೆದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಗಬೇಕು ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ಗುಬ್ಬಿ ತಾಲೂಕಿನ ಚೇಳೂರಿನ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷರೂ ಚೆಕ್ ಅನ್ನು ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ಸಿ.ಎನ್ ವೆಂಕಟೇಶ್ ಅವರಿಗೆ ವಿತರಿಸಿ ಮಾತನಾಡಿ, ಧರ್ಮಸ್ಥಳದಿಂದ ಪ್ರತಿ ಗ್ರಾಮದ ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ಸಹಾಯಧನ ನೀಡುತ್ತಿದ್ದು, ಇದರ ಉಪಯೋಗ ಎಲ್ಲ ಗ್ರಾಮದವರು ಉಪಯೋಗಿಸಿಕೊಳ್ಳಬೇಕು ಎಂದರು.
ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ಸಿ.ಎನ್.ವೆಂಕಟೇಶ್ ಮಾತನಾಡಿ, ಚೇಳೂರು ಹೃದಯ ಭಾಗದಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಸುಮಾರು 80 ಲಕ್ಷ ರೂಪಾಯಿಗಳಲ್ಲಿ ನಿಮಾರ್ಣವಾಗುತ್ತಿದ್ದು, ಇದರ ಅಭಿವೃದ್ಧಿಗೆ ಭಕ್ತರ ಸಹಕಾರ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸಹಾಯಧನ ದೊರೆತಿದೆ ಎಂದರು.
ತಾಲೂಕು ಯೋಜನಾಧಿಕಾರಿ ಜಯಂತಿ ಸಮಿತಿ ಉಪಾಧ್ಯಕ್ಷ ಸಿ.ಎನ್ ಬಸವರಾಜು, ಮುಖಂಡ ಸಿ.ಎನ್ ಚಿಕ್ಕೇಗೌಡ, ಇತರರು ಉಪಸ್ಥಿತರದ್ದರು.