ಕ್ಷೇತ್ರದ ಹಿತದೃಷ್ಟಿಯಿಂದ ಎಸ್​ಜೆಪಿ&ಜೆಡಿಎಸ್​ ಸೇರ್ಪಡೆ SJP & JDS 
ರಾಜ್ಯ

ಕ್ಷೇತ್ರದ ಹಿತದೃಷ್ಟಿಯಿಂದ ಎಸ್​ಜೆಪಿ&ಜೆಡಿಎಸ್​ ಸೇರ್ಪಡೆ SJP & JDS

ಮಾಲೂರು: ತಾಲೂಕಿನಲ್ಲಿ ಪ್ರಸ್ತುತ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಣ್ಣ ಕೆಲಸಗಳಿಗೂ ಜನ ಸಾಮಾನ್ಯರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಸರಿಗಷ್ಟೇ ಅಭಿವೃದ್ಧಿಯಾಗುತ್ತಿದ್ದು, ಜನರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿದ್ದು, ನಾವು ಚದುರಿ ಹೋದರೆ ನಮಗೇ ನಷ್ಟ ಎಂದು ಜೆಡಿಎಸ್​ ಮುಖಂಡ ಜಿ.ಇ. ರಾಮೇಗೌಡ ಹೇಳಿದರು.SJP & JDS
ಸ್ವಾಭಿಮಾನಿ ಜನತಾ ಪದ ಸಂಸ್ಥಾಪಕ ಅಧ್ಯ ಹೂಡಿ ವಿಜಯ್​ ಕುಮಾರ್​ ಅವರು ಜೆಡಿಎಸ್​ ಸೇರುತ್ತಿರುವ ಕುರಿತು ನಗರದ ವೈಟ್​ ಗಾರ್ಡನ್​ ನಿವಾಸದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್​ಜೆಪಿ&ಜೆಡಿಎಸ್​ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಹಿರಿಯರು ಮತ್ತು ಯುವಕರ ಆಶಯದಂತೆ ನಾವು ಒಂದಾಗಿದ್ದೇವೆ. ಜೆಡಿಎಸ್​ ವರಿಷ್ಠರ ಒಪ್ಪಿಗೆಯ ಮೇರೆಗೆ ತಾಲೂಕಿನ ಹಿತದೃಷ್ಟಿಯಿಂದ ನಾವಿಬ್ಬರೂ ಒಂದಾಗಿ ಹೋಗಲು ನಿರ್ಧರಿಸಿದ್ದೇವೆ. ರಾಜ್ಯದಲ್ಲಿ ಬಿಜೆಪಿ&ಜೆಡಿಎಸ್​ ಮೈತ್ರಿಯಿದ್ದರೂ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​ ಬಲಿಷ್ಠವಾಗಿದೆ. ಮಾ.5 ರಂದು ಬೆಂಗಳೂರಿನ ಜೆಡಿಎಸ್​ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್​ ಕುಮಾರಸ್ವಾಮಿ ಸಮ್ಮುಖದಲ್ಲಿ ಹೂಡಿ ವಿಜಯ್​ ಕುಮಾರ್​ ಅವರು ಅಧಿಕೃತವಾಗಿ ಜೆಡಿಎಸ್​ಗೆ ಸೇರಲಿದ್ದಾರೆ ಎಂದರು.
ಸ್ವಾಭಿಮಾನಿ ಜನತಾ ಪದ ಅಧ್ಯ ಹೂಡಿ ವಿಜಯ್​ ಕುಮಾರ್​ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲೆಶ್​ ಬಾಬು ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೆವು. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡ ಅವರು ಪಕ್ಕೆ ಆಹ್ವಾನ ನೀಡಿದ್ದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಕಾರ್ಯಕರ್ತರಿಗೆ ಸೂಕ್ತ ಅಧಿಕಾರ ಮತ್ತು ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಸ್ವಾಭಿಮಾನಿ ಜನತಾ ಪದ ತಾಲೂಕು ಅಧ್ಯ ಆರ್​.ಪ್ರಭಾಕರ್​, ಜೆಡಿಎಸ್​ ತಾಲೂಕು ಅಧ್ಯ ಬಲ್ಲಹಳ್ಳಿ ನಾರಾಯಣಸ್ವಾಮಿ, ಮಾಜಿ ಪುರಸಭೆ ಅಧ್ಯ ರಾಮಮೂರ್ತಿ, ಬಿಆರ್​ ವೆಂಕಟೇಶ್​, ಮಾಜಿ ಪುರಸಭೆ ಸದಸ್ಯ ಕುಟ್ಟಿ, ಕೂರಿ ಮಂಜು ಇತರರು ಇದ್ದರು.