ಕರ್ನಾಟಕ ಲಲಿತಕಲಾ ಅಕಾಡೆಮಿ 
ರಾಜ್ಯ

ಆರು ಕಲಾ ಸಾಧಕರಿಗೆ ‘ಗೌರವ’ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • * ಲಲಿತಕಲಾ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ
  • * ‘ವರ್ಣಶ್ರೀ’ ಅವಾರ್ಡ್‌ಗೆ 20 ಕಲಾವಿದರು ಆಯ್ಕೆ
ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯು ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕನ್ನಡ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.
2024-2025ನೇ ಸಾಲಿನ ಗೌರವ ಪ್ರಶಸ್ತಿಗೆ ಬಾಗಲಕೋಟೆಯ ಬಾಬು ಜತ್ತಕರ್, ಕಲಬುರಗಿಯ ಎಂ.ಜಿ. ದೊಡ್ಡಮನಿ, ತುಮಕೂರಿನ ಕೆ.ಸಿ.ಎಸ್. ಪ್ರಸನ್ನ ಹಾಗೂ 2025-26ನೇ ಸಾಲಿಗೆ ಹಾಸನದ ಬಿ.ಎಸ್. ದೇಸಾಯಿ, ವಿಜಯಪುರದ ಶಶಿಕಲಾ ಹೂಗಾರ್ ಹಾಗೂ ಮೈಸೂರಿನ ಸಿ.ಚಿಕ್ಕಣ್ಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ ಎಂದರು.
ಪ್ರಶಸ್ತಿ ಪ್ರದಾನ ದಿನಾಂಕ ಹಾಗೂ ಸ್ಥಳವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರ ಜತೆೆ ಚರ್ಚಿಸಿ, ನಿಗದಿ ಮಾಡಲಾಗುವುದು ಎಂದು ಪ.ಸ.ಕುಮಾರ್ ತಿಳಿಸಿದರು. ರಿಜಿಸ್ಟ್ರಾರ್ ಎನ್. ನಮ್ರತ ಇದ್ದರು.
ವರ್ಣಶ್ರೀ ಪ್ರಶಸ್ತಿ
2023-24 ಹಾಗೂ 2024-25ನೇ ಸಾಲಿಗೆ ತಲಾ 10ರಂತೆ 20 ಕಲಾವಿದರನ್ನು ವರ್ಣಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2023-24ನೇ ಸಾಲಿಗೆ ಗದಗದ ವಿಜಯ ಕಿರಸೂರ, ಶಿರಸಿಯ ರವಿ ಗುಣಗ, ಹಾವೇರಿಯ ಕುಮಾರ ಕಾಟೇನಹಳ್ಳಿ, ಧಾರವಾಡದ ದಯಾನಂದ ಕೆ.ಕಾಮಕರ್, ವಿಜಯಪುರದ ಸರೋಜ ಮುಂಡೇವಾಡಿ, ಕೊಡಗಿನ ಜಿ.ಎಸ್.ಭವಾನಿ, ಉಡುಪಿಯ ರಾಘವೇಂದ್ರ ನಾಯ್ಕ, ಮಂಡ್ಯದ ಎಚ್.ಶಿವಕುಮಾರ್, ಮಂಗಳೂರಿನ ಬಿ.ಪಿ. ಮೋಹನ್ ಕುಮಾರ್ ಹಾಗೂ ಚಾಮರಾಜನಗರದ ಎಚ್.ಮಹದೇವ ಆಯ್ಕೆಯಾಗಿದ್ದಾರೆ.
2024-25ನೇ ಸಾಲಿಗೆ ಯಾದಗಿರಿಯ ಮೇಘನಾಥ ಅಬ್ರಹಂಬೆಳ್ಳಿ, ರಾಯಚೂರಿನ ಎನ್. ಹೇಮರಡ್ಡಿ, ಬೀದರ್‌ನ ವೈಶಾಲಿಬಾಯಿ ಕಾಂಬಳೆ, ಕೊಪ್ಪಳದ ತಿರುಪತಿ ಶಿವನಗುತ್ತಿ, ಬಳ್ಳಾರಿಯ ಎ. ಮಹಮದ್ ರಫಿ, ದಾವಣಗೆರೆಯ ಉದಯ್ ಕುಮಾರ್ ಡಿ. ಜೈನ್, ಚಿತ್ರದುರ್ಗದ ಬಿ.ದಿನೇಶ್, ಬೆಂಗಳೂರಿನ ಎಸ್.ಎಫ್. ಹುಸೇನಿ, ರಾಮನಗರದ ಗಂಗಾಧರಮೂರ್ತಿ ಹಾಗೂ ಬೆಂಗಳೂರಿನ ಪೂರ್ಣಿಮಾ ಯಲ್ಲಾಪುರಕರ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಒಳಗೊಂಡಿದೆ.
ಕಲಾ ಬಹುಮಾನ
53ನೇ ವಾರ್ಷಿಕ ಕಲಾ ಬಹುಮಾನಕ್ಕೆ ಧಾರವಾಡದ ಅಶೋಕ ಬಿ. ಮನಸೂರ ಅವರ ಛಾಯಾಚಿತ್ರ, ಬೀದರ್‌ನ ಸಂದೀಪ್ ಸಜ್ಜನ ಶೆಟ್ಟಿ ಅವರ ಜಲವರ್ಣ, ಉಡುಪಿಯ ಹರೀಶ್ ನಾಯ್ಕ ಅವರ ಅಕ್ರಿಲಿಕ್, ಬೆಂಗಳೂರಿನ ಅಕ್ಷಯ ಭಟ್ ಅವರ ಎಚ್ಚಿಂಗ್, ಬೆಂಗಳೂರಿನ ಲೋಹಿತ್ ಪತ್ತಾರ ಅವರ ಎಚ್ಚಿಂಗ್, ಬಾಗಲಕೋಟೆಯ ನೂರ್ಜಾನ ಎಂ. ದೇದಾರ ಅವರ ಅಕ್ರಿಲಿಕ್, ದಕ್ಷಿಣ ಕನ್ನಡದ ಜೀವನ್ ಸಾಲಿಯಾನ್ ಅವರ ಅಕ್ರಿಲಿಕ್, ಕಲಬುರಗಿಯ ಜಲಜಾಕ್ಷಿ ಕುಲಕರ್ಣಿ ಅವರ ಅಕ್ರಿಲಿಕ್, ಕಲಬುರಗಿಯ ಮೀನಾಕ್ಷಿ ಅವರ ಮಿಶ್ರ ಮಾಧ್ಯಮ ಹಾಗೂ ಬೆಳಗಾವಿಯ ದುಂಡಪ್ಪಾ ಎಸ್. ಲೋಲಸೂರಿ ಅವರ ಅಕ್ರಿಲಿಕ್ ಕಲಾಕೃತಿಗಳು ಆಯ್ಕೆಯಾಗಿವೆ.