ಯಾದವ ಸಮುದಾಯ ಭವನಕ್ಕೆ ನಿವೇಶನ Yadava Community
- ಶಾಸಕ ಕೆ.ವೈ.ನಂಜೇಗೌಡ ಹೇಳಿಕೆ
- ಮಾದನಹಟ್ಟಿ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ
ಮಾಲೂರು: ಗ್ರಾಮೀಣ ಭಾಗದ ಸಂಸತಿ,ಸಂಪ್ರದಾಯ ಪರಂಪರೆ ಬೆಳೆಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿ ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ ವೈ ನಂಜೇಗೌಡ ತಿಳಿಸಿದರು. Yadava Community
ತಾಲೂಕಿನ ನೊಸಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದನಹಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಕರ್ನಾಟಕ ಯಾದವ ಯುವ ವೇದಿಕೆ, ಯಾದವ ಸಂಘ, ಯಾದವ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮಸ್ಥರ ಸಹಕಾರದಿಂದ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಯಾದವ ಸಮಾಜವು ತಾಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ ಸಹ ಬುದ್ಧಿವಂತರು ಹಾಗೂ ಶ್ರಮಜೀವಿಗಳಾಗಿದ್ದಾರೆ. ಇತರ ವರ್ಗಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಸಹಬಾಳ್ವೆ ಜೀವನ ನಡೆಸುತ್ತಿದ್ದಾರೆ. ಈ ಸಮಾಜದ ಜನರು ನಂಬಿಕಸ್ಥರಾಗಿದ್ದಾರೆ. ಕಡಿಮೆ ಜನಸಂಖ್ಯೆಹೊಂದಿದ್ದರೂ, ಅವರಲ್ಲಿ ಒಗ್ಗಟ್ಟಿರುವುದು ಮೆಚ್ಚುಗೆಯ ಸಂಗತಿ ಎಂದರು.
ವಿಧಾನ ಪರಿಷತ್ ಸದಸ್ಯ, ರಾಜ್ಯ ಯಾದವ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಯಾದವ ಸಮಾಜ ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ ಮಾಜಿ ಸಚಿವ ಹಾಗೂ ನಮ್ಮ ಮಾವನವರಾದ ಎ.ಕೃಷ್ಣಪ್ಪ ಅವರುಸಮಾಜ್ನ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದರು. ಅವರ ಹಾದಿಯಲ್ಲಿ ಸಾಗಿ ನಾವು ಸಹ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯ ಸಂಘಟಿಸಿ ಸಹಕಾರ ಸರ್ಕಾರದ ಸವಲತ್ತು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.
ಕರ್ನಾಟಕ ಯಾದವ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಯಾದವ್, ರಾಜ್ಯ ಯುವ ವೇದಿಕೆ ಅಧ್ಯಕ್ಷ ಸುನೀಲ್ ಯಾದವ್, ಕಾರ್ಯಾಧ್ಯಕ್ಷ ಮನೋಹರ್ ಯಾದವ್, ಉಪಾಧ್ಯಕ್ಷ ರವಿ ಯಾದವ್, ತಾಲೂಕು ಯುವ ವೇದಿಕೆ ಅಧ್ಯಕ್ಷ ಎಂ.ಆರ್.ಹರೀಶ್, ತಾಲೂಕು ಯಾದವ ಗೊಲ್ಲರ ಸಂಘದ ಅಧ್ಯಕ್ಷ ಎ.ವೈ.ಗೋವಿಂದಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಪುಟ್ಟಸ್ವಾಮಿ, ಚಂದ್ರಶೇಖರ್ ಯಾದವ್, ಪದಾಧಿಕಾರಿಗಳಾದ ಸಂಜೀವಪ್ಪ ಚಂದ್ರಶೇಖರ್ ಬಾಬು, ನವೀನ್, ನಾಗೇಶ್, ಪ್ರಸನ್ನ ಕುಮಾರ್, ಮಂಜಪ್ಪ, ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ ಎಂ.ವಿ.ರವಿಕುಮಾರ್, ನೊಸಗೆರೆ ಗ್ರಾಪಂ ಅಧ್ಯೆ ಸರಸಮ್ಮ ವೆಂಕಟೇಶಪ್ಪ, ಮಾಜಿ ಅಧ್ಯಕ್ಷ ವಿನಯ್ ಗೌಡ ಇದ್ದರು.