ಲಿಂಗರಾಜ ಸಿರಗಾಪೂರ  
ರಾಜ್ಯ

ಆಳಂದ ಶಾಸಕ ಬಿ.ಆರ್.ಪಾಟೀಲಗೆ ಸಚಿವ ಸ್ಥಾನ ನೀಡಲು ಸಿರಗಾಪೂರ ಆಗ್ರಹ

ಕಲಬುರಗಿ: ರಾಜಕೀಯ ಮುತ್ಸದ್ದಿ,ಆಳಂದ ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರೈತರ ಬಗ್ಗೆ ಕಾಳಿಜಿ, ಅಭಿವೃದ್ಧಿ ಹರಿಕಾರ ಮತ್ತು ಲೋಹಿಯಾ ವಿಚಾರದ ಬಿ.ಆರ್ ಪಾಟೀಲ 3 ಬಾರಿ ಶಾಸಕರಾಗಿ, ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ, ವಿಧಾನ ಪರಿಷತ್ ಉಪ ಸಭಾಪತಿ ಹಾಗೂ ಹತ್ತು ತಿಂಗಳ ಅವಧಿಗೆ ಹಂಗಾಮಿ ಸ್ಪೀಕರ್ ಆಗಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ.ರಾಜಕೀಯವಾಗಿ ಬಲಿಷ್ಠರಾಗಿದ್ದಾರೆ.ಅದಕ್ಕಿಂತ ಹೆಚ್ಚು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಶಾಸಕರಾಗಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಇವರನ್ನು ನಿರ್ಲಕ್ಷ್ಯ ಧೋರಣೆ ಮಾಡದೆ ನೂತನ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು.ಕ್ಯಾಬಿನೆಟ್ ಸ್ಥಾನ ಮಾನ ಕಲ್ಪಿಸಿಕೊಡಬೇಕು ಇದರಿಂದ.ಕಲ್ಯಾಣ ಕರ್ನಾಟಕಕ್ಕೆ ಹಾಗೂ ಬಿ.ಆರ್.ಪಾಟೀಲ ಅವರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಆಗಿರುವ ಪಾಟೀಲ ಅವರಿಗೆ ಸಿದ್ದರಾಮಯ್ಯ ತಮ್ಮ ನೇತೃತ್ವದ ಸರ್ಕಾರದಲ್ಲಿ ಮಂತ್ರಿ ಮಾಡದೆ ಘೋರ ಅನ್ಯಾಯ ಮಾಡಿದ್ದರು.ಈಗಲಾದರೂ ಬಿ.ಆರ್.ಪಾಟೀಲ ಅವರನ್ನು.ನೂತನ ಕಾಂಗ್ರೆಸ್ ಸರ್ಕಾರಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.