ಯಾದಗಿರಿಯ ತಮ್ಮ ನಿವಾಸದಲ್ಲಿ ಶನಿವಾರ ಶಾಸಕ ಚನ್ನಾರಡ್ಡಿ ಪಾಟೀಲ್ ಅವರು ಮತದಾರರ ಅರ್ಜಿ ತುಂಬಿ ಅಧಿಕಾರಿಗಳಿಗೆ ನೀಡಿದರು. ಎಸಿ ಶ್ರೀಧರ ಗೋಟೂರ, ತಹಸಿಲ್ದಾರ್ ಸುರೇಶ ಅಂಕಲಗಿ, ತುನ್ನೂರ ಕುಟುಂಬದ ಸದಸ್ಯರಿದ್ದರು.
ಯಾದಗಿರಿ: ಎಸ್ಐಆರ್ ಕೆಲಸ ಮನೆ, ಮನೆಗೆ ತೆರಳಿಯೇ ಮಾಡಬೇಕು. ಇದರ ಹೊರತು ಗುಡಿ, ಗುಂಡಾ ಮತ್ತು ಇತರೇ ಸ್ಥಳಗಳಲ್ಲಿ ಮಾಡಬೇಡಿ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ಶನಿವಾರ ಅವರ ಮನೆಗೆ ಭೇಟಿ ನೀಡಿದ ಅಧಿಕಾರಿ ತಂಡದ ಸಮ್ಮುಖದಲ್ಲಿ ಶಾಸಕರು ತಾವು ಸೇರಿ ತಮ್ಮ ಕುಟುಂಬ ಸದಸ್ಯರ ಎಸ್ಐಆರ್ ಅರ್ಜಿ ತುಂಬಿ ನೀಡಿದ ನಂತರ ಮಾತನಾಡಿದರು. ಈಗಾಗಲೇ ಕೆಲವು ಕಡೆ ನಿಯಮ ಉಲ್ಲಂಸಿ ಎಲ್ಲೆಂದರಲ್ಲಯೇ ಅರ್ಜಿಗಳನ್ನು ಸಾಮೂಹಿಕವಾಗಿ ತುಂಬಿಸಿಕೊಳ್ಳುವ ಕುರಿತು ವರದಿಯಾಗಿದೆ. ನಗರ ಸೇರಿದಂತೆಯೇ ಜಿಲ್ಲೆಯಲ್ಲಿ ಇದಕ್ಕೆ ಅವಕಾಶ ನೀಡಬೇಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಸಹಾಯಕ ಆಯುಕ್ತ ಶ್ರೀಧರ ಗೋಟೂರ, ತಹಸೀಲ್ದಾರ್ ಸುರೇಶ ಅಂಕಲಗಿ, ಶಾಸಕರ ಧರ್ಮಪತ್ನಿ, ಕುಟುಂಬದ ಸದಸ್ಯರಿದ್ದರು.