ಚಿಂಚೋಳಿ ಮತಕ್ಷೇತ್ರದ ರಟಕಲ್ ಗ್ರಾಮದಲ್ಲಿ ಎಸ್ಐಆರ್ ಪ್ರಕ್ರಿಯೆ ಕುರಿತು ಶಾಸಕ ಡಾ.ಅವಿನಾಶ ಜಾಧವ್ ಜಾಗೃತಿ ಮೂಡಿಸಿದರು. ಡಾ. ರೇವಣಸಿದ್ದಪ್ಪ, ಶ್ರೀಕಾಂತ ತಾಂಡೂರ, ಹಣಮಂತರಾವ ಆಡಕಿ, ಜಗನ್ನಾಥ ಮಗಿ ಇತರರಿದ್ದರು.
ಚಿಂಚೋಳಿ: ಶುದ್ಧ ಮತ್ತು ನಿಖರ ಮತದಾರರ ಪಟ್ಟಿಯಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು. ಮತೇತ್ರದ ರಟಕಲ್, ಟೆಂಗಳಿ, ಕಾಳಗಿ, ಜಂಬಗಿ, ಕೋಡ್ಲಿ ಸೇರಿ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಜಾಗೃತಿ ಮೂಡಿಸಿದ ಅವರು, ಎಸ್ಐಆರ್ ಪ್ರಕ್ರಿಯೆ ಎಲ್ಲೆಡೆ ನಡೆಯುತ್ತಿದ್ದು, ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪರಿಶೀಲಿಸಬೇಕು. ತಿದ್ದುಪಡಿಗಳಿದ್ದಲ್ಲಿ ಮಾಡಿಸಿಕೊಳ್ಳಬೇಕು. ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಪಡಿಸೋಣ ಎಂದು ಕರೆಕೊಟ್ಟರು. ಡಾ.ರೇವಣಸಿದ್ದಪ್ಪ, ಶ್ರೀಕಾಂತ ತಾಂಡೂರ, ಹಣಮಂತರಾವ ಆಡಕಿ, ಜಗನ್ನಾಥ ಮಗಿ, ಬಸವರಾಜ ಕರಕಮುಕಲಿ, ಪ್ರಶಾಂತ ಕದಂ, ರಮೇಶ ನಾಲವಾಡೆ ಇತರರಿದ್ದರು.